ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಗರ ಸಮಗ್ರ ಅಭಿವೃದ್ಧಿಗೆ ₹170 ಕೋಟಿ’

Last Updated 23 ಸೆಪ್ಟೆಂಬರ್ 2017, 6:55 IST
ಅಕ್ಷರ ಗಾತ್ರ

ಕಲಬುರ್ಗಿ: ‘ನಗರದ ಸಮಗ್ರ ಅಭಿವೃದ್ಧಿಗೆ ₹170 ಕೋಟಿ ವೆಚ್ಚದ ಕಾಮಗಾರಿಗಳನ್ನು ಮಹಾನಗರ ಪಾಲಿಕೆಯಿಂದ ಕೈಗೆತ್ತಿಕೊಳ್ಳಲಾಗಿದೆ’ ಎಂದು ಮೇಯರ್ ಶರಣಕುಮಾರ ಮೋದಿ ಹೇಳಿದರು. ಇಲ್ಲಿಯ ಸೇಡಂ ರಸ್ತೆಯ ಸ್ವಸ್ತಿಕ್‌ ನಗರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿರುವ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಗದ್ದುಗೆ ಮಠದ ರೇವಣಸಿದ್ಧ ಶ್ರೀಗಳು, ‘ಮಾನವೀಯತೆ, ಕರುಣೆ, ಸಹಕಾರ, ಸಾಮರಸ್ಯ, ವಿಶ್ವಸಹೋದರತೆ ಮಾನವನ ಉಸಿರಾಗಬೇಕು ಎನ್ನುವುದೇ ಧರ್ಮದ ತಿರುಳು. ಅಂತಹ ಅದರ್ಶಗಳು ಮೈಗೂಡಿಸಿಕೊಳ್ಳಬೇಕು’ ಎಂದರು.

ಪಾಲಿಕೆಯ ವಿರೋಧ ಪಕ್ಷದ ನಾಯಕ ಆರ್.ಎಸ್.ಪಾಟೀಲ, ವಾರ್ಡ್‌ನ ಸರ್ವತೋಮುಖ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿದರು. ರಾಜಶೇಖರ ಕೋಕಟ್, ಶಂಭುಲಿಂಗ ಚಿಟ್ಟಾ, ಬಸಯ್ಯ ಸ್ವಾಮಿ, ದೇವಿಂದ್ರಪ್ಪ ಮಾಳಾ, ಸಬ್‌ ಇನ್‌ಸ್ಪೆಕ್ಟರ್‌ ವಿಠ್ಠಲ ಗಾಜರೆ, ಶಿವಶರಣಪ್ಪ ಕಿರಣಗಿ, ರಮೇಶ ಪವಾರ ಇದ್ದರು. ಸಂಘದ ಅಧ್ಯಕ್ಷ ಚಂದ್ರಶೇಖರ ಹಾಲಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಶಶಿಶೇಖರ ರೆಡ್ಡಿ ನಿರೂಪಿಸಿದರು. ಬಸವರಾಜ ಚಿಟ್ಟಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT