ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಗಳಿಂದ ರೈತರ ಹಿತಾಸಕ್ತಿ ಕಡೆಗಣನೆ

Last Updated 23 ಸೆಪ್ಟೆಂಬರ್ 2017, 7:13 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಅಖಿತ ಭಾರತ ರೈತ ಹೋರಾಟ ಸಮನ್ವಯ ಸಮಿತಿ ಏರ್ಪಡಿಸಿರುವ ರೈತ ಜಾಗೃತಿ ಜಾಥಾ ತಾಲ್ಲೂಕಿನ ಗಡಿ ಪ್ರವೇಶಿಸಿದ್ದು, ರೈತರು ಬರಮಾಡಿಕೊಂಡರು.
ಕೇರಳದಿಂದ ಆಗಮಿಸಿದ ಜಾಥಾಗೆ ರೈತ ಮುಖಂಡರು ಗಡಿಭಾಗ ಮದ್ದೂರು ಚೆಕ್‌ಪೋಸ್ಟ್ ಬಳಿ ಮುಖಂಡರು ಹಸಿರು ರುಮಾಲು ತೊಡಿಸಿ ಸ್ವಾಗತಿಸಿದರು.ತರನ್ನು ಕಡೆಗಣನೆ ಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಗಳ ತಪ್ಪಿನಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ರೈತರ ಪರ ಯೋಜನೆಗಳೇ ಸಿದ್ಧವಾಗುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕೃಷಿಕ ಅತ್ಮಹತ್ಯೆನಿರ್ಧಾನ ತೆಗೆದುಕೊಳ್ಳಬೇಕಾ ಸ್ಥಿತಿಯನ್ನು ಸರ್ಕಾರಗಳೇ ತಂದಿವೆ ಎಂದರು.

ಸಾಲಮನ್ನಾ ನಿರ್ಧಾರವು ರೈತರ ನೆರವಿಗೆ ಬರುತ್ತಿಲ್ಲ. ಸ್ವಾಮಿನಾಥನ್ ವರದಿ ಅನುಷ್ಠಾನ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ನಿಗದಿ, ನವೆಂಬರ್ ತಿಂಗಳಿನಲ್ಲಿ ರೈತ ಸಂಸತ್ ನಡೆಸಲು ಆಗ್ರಹ ಇತ್ಯಾದಿ ಕುರಿತು ಜಾಗೃತಿ ಮೂಡಿಸಲುಈ ಯಾತ್ರೆ ನಡೆಸಲಾಗುತ್ತಿದೆ ಎಂದು ವಿವರಿಸಿದರು. ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿ, ದೇಶದ ಇತರೆ ರಾಜ್ಯಗಳಲ್ಲಿಯೂ ರೈತ ಮುಕ್ತಿ ಜಾಥಾ ಏರ್ಪಡಿಸುತ್ತಿದೆ.

ದಕ್ಷಿಣ ಭಾರತ ಜಾಥಾ ಸೆ.16ರಂದು ತೆಲಂಗಾಣದಲ್ಲಿ ಆರಂಭವಾಗಿದ್ದು, ಆಂಧ್ರಪ್ರದೇಶ, ತಮಿಳುನಾಡುವಿನಲ್ಲಿ ಸಂಚರಿಸಿದೆ. ನ.20ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಭೆಯೊಂದಿಗೆ ಮುಗಿಯಲಿದೆ ಎಂದರು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರೈತರ ಹಕ್ಕೊತ್ತಾಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಿದ್ದೇವೆ ಎಂದರು.ಬಳಿಕ ಗುಂಡ್ಲುಪೇಟೆ, ನಂಜನಗೂಡು ಮಾರ್ಗವಾಗಿ ಪಾಂಡವಪುರದ ಸಮಾವೇಶಕ್ಕೆ ತೆರಳಿತು.

ರೈತ ನಾಯಕರಾದ ಕೆ.ಟಿ.ಗಂಗಾಧರ್, ಬಯ್ಯಾರೆಡ್ಡಿ, ಚಾಮರಸ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ನಂದಿನಿ ಜಯರಾಂ, ಕವಿತಾ ಕುರುಗಂಟಿ, ರೈತಸಂಘದ ತಾಲೂಕು ಘಟಕದ ಅಧ್ಯಕ್ಷ ಕುಂದಕೆರೆ ಸಂಪತ್ತು, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶಿವಪುರ ಮಹದೇವಪ್ಪ, ಟಿ.ಎಸ್.ಶಾಂತಮಲ್ಲಪ್ಪ ಹಾಗೂ ಇತರ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT