ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣ: ಬಾಲಿವುಡ್ ಸಿನಿಮಾ ನಿರ್ಮಾಪಕ ಕರೀಂ ಮೊರಾನಿ ಬಂಧನ

Last Updated 23 ಸೆಪ್ಟೆಂಬರ್ 2017, 7:41 IST
ಅಕ್ಷರ ಗಾತ್ರ

ಹೈದರಾಬಾದ್: 25ರ ಹರೆಯದ ಯುವತಿಯೊಬ್ಬಳನ್ನು ಅತ್ಯಾಚಾರಗೈದ ಆರೋಪದಲ್ಲಿ ಬಾಲಿವುಡ್ ನಿರ್ಮಾಪಕ ಕರೀಂ ಮೊರಾನಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಕರೀಂ ಅತ್ಯಾಚಾರವೆಸಗಿದ್ದ ಎಂದು ಯುವತಿ ದೂರು ನೀಡಿರುವುದಾಗಿ ತೆಲಂಗಾಣ ಪೊಲೀಸರು ಹೇಳಿದ್ದಾರೆ.

ಅತ್ಯಾಚಾರ ಆರೋಪ ಕೇಳಿ ಬಂದಾಗ ಮೊರಾನಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈದರಾಬಾದ್ ಹೈಕೋರ್ಟ್ ತಳ್ಳಿ ಹಾಕಿದ ಹಿನ್ನಲೆಯಲ್ಲಿ ಶುಕ್ರವಾರ ರಾತ್ರಿ ಮೊರಾನಿ ಹೈದರಾಬಾದ್‍ನ ಹಯಾತ್‍ನಗರ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು.

ಮೊರಾನಿ ಅವರನ್ನು ಅಧಿಕೃತವಾಗಿ ಬಂಧಿಸಲಾಗಿದೆ. ವೈದ್ಯಕೀಯ ತಪಾಸಣೆಗೊಳಪಡಿಸಿದ ನಂತರ ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಹಯಾತ್‍ನಗರ್ ಪೊಲೀಸ್ ಅಧಿಕಾರಿ ಜೆ. ನರೇಂದರ್ ಗೌಡ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಈ ಪ್ರಕರಣವಲ್ಲದೆ 2ಜಿ ಟೆಲಿಕಾಂ ಹಗರಣದಲ್ಲಿಯೂ ಮೊರಾನಿ ಆರೋಪಿಯಾಗಿದ್ದಾರೆ.

ಏನಿದು ಪ್ರಕರಣ?
ಮದುವೆಯಾಗುವುದಾಗಿ ನಂಬಿಸಿ ಮೊರಾನಿ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾರೆ ಎಂದು ಜನವರಿಯಲ್ಲಿ ಮಹಿಳೆಯೊಬ್ಬರು ಹಯಾತ್‍ನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. 2015 ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಅವಧಿಯಲ್ಲಿ ಮೊರಾನಿ ಮುಂಬೈನಲ್ಲಿ ನಿರಂತರವಾಗಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿಯೂ ಎರಡು ಬಾರಿ ತನ್ನ ಮೇಲೆ ಅತ್ಯಾಚಾರ ನಡೆದಿದೆ. ಅಷ್ಟೇ ಅಲ್ಲದೆ ಮೊರಾವಿ ತನ್ನ ನಗ್ನ ಚಿತ್ರಗಳನ್ನು ಮತ್ತು ವಿಡಿಯೊಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಅದನ್ನು ಗೆಳೆಯರಿಗೆ ಕಳಿಸುವುದಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಎಂದು ಯುವತಿ ದೂರಿದ್ದಳು.

ಮೊರಾನಿ ವಿರುದ್ಧ ಅತ್ಯಾಚಾರ, ಮೋಸ ಮತ್ತು  ಬೆದರಿಕೆಯೊಡ್ಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾತೆ ಯುವತಿ ದೆಹಲಿಯಲ್ಲಿ ಬಿಬಿಎ ಪದವಿ ಪೂರೈಸಿದ್ದು ಮುಂಬೈ‍ನಲ್ಲಿ ರಂಗಭೂಮಿ ಕಲಾವಿದೆಯಾಗಿರುವ ಮೊರಾನಿ ಮಗಳ ಮೂಲಕ ಈತನ ಪರಿಚಯ ಆಗಿತ್ತು ಎಂದಿದ್ದಾಳೆ.

ಶಾರುಖ್ ಖಾನ್ ನಾಯಕನಾಗಿರುವ ಚೆನ್ನೈ ಎಕ್ಸ್‌ಪ್ರೆಸ್‌, ದಿಲ್ ವಾಲೆ, ಹ್ಯಾಪಿ ನ್ಯೂಇಯರ್ ಮತ್ತು ರಾ ಒನ್ ಮೊದಲಾದ ಹಿಟ್ ಚಿತ್ರಗಳ ನಿರ್ಮಾಪಕರಾಗಿದ್ದಾರೆ ಮೊರಾನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT