ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹999ಕ್ಕೆ ಮೈಸೂರು ಅರಮನೆಗಳನ್ನು ಸುತ್ತಿ, ಲಲಿತಮಹಲ್‌ನಲ್ಲಿ 'ರಾಜ' ಭೋಜನ ಸವಿಯುವ ಅವಕಾಶ

Last Updated 23 ಸೆಪ್ಟೆಂಬರ್ 2017, 9:06 IST
ಅಕ್ಷರ ಗಾತ್ರ

ಮೈಸೂರು: ದಸರಾ ಅಂಗವಾಗಿ ಅ.2ರವರೆಗೆ ಹಮ್ಮಿಕೊಂಡಿರುವ ಪ್ಯಾಲೇಸ್‌ ಆನ್‌ ವೀಲ್ಸ್‌ ಸೌಲಭ್ಯಕ್ಕೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ಶುಕ್ರವಾರ ಚಾಲನೆ ನೀಡಿದ್ದಾರೆ.

ಗಾಲಿಗಳ ಮೇಲೆ ಅರಮನೆ (ಪ್ಯಾಲೇಸ್‌ ಆನ್‌ ವೀಲ್ಸ್‌)  ಕಾರ್ಯಕ್ರಮದ ಅಡಿ ಅ. 2ರವರೆಗೆ ದಸರೆ ಪ್ರವಾಸಿಗರಿಗೆ ಇಡೀ ನಗರದ ಪ್ರಮುಖ ಸ್ಥಳಗಳನ್ನು ವೋಲ್ವೊ ಬಸ್‌ಗಳ ಮೂಲಕ ತೋರಿಸಲಾಗುತ್ತದೆ.

ಸಾರಿಗೆ ಸಂಸ್ಥೆಯ ಮೈಸೂರು ವಿಭಾಗದಿಂದ ಹವಾನಿಯಂತ್ರಿತ ವೋಲ್ವೊ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಂದು ದಿನದ ಪ್ರವಾಸಕ್ಕೆ ತಲಾ ₹ 999 ಟಿಕೆಟ್‌ ದರ ನಿಗದಿ ಮಾಡಲಾಗಿದೆ.

ಸ್ಥಳಗಳ ವಿವರ ಒಗದಿಸಲು ಪ್ರವಾಸಿ ಗೈಡ್‌ ಹಾಗೂ ಲಲಿತಮಹಲ್‌ ಪ್ಯಾಲೇಸ್‌ನಲ್ಲಿ ‘ರಾಜಾತಿಥ್ಯ’ ರೀತಿಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಒಳಗೊಂಡಿದೆ. 

ಮೈಸೂರು ಅರಮನೆ, ಜಗನ್ಮೋಹನ ಅರಮನೆ, ಲಲಿತಮಹಲ್‌ ಅರಮನೆ, ಪ್ರಾದೇಶಿಕ ಪ್ರಾಕೃತಿಕ ವಸ್ತುಸಂಗ್ರಹಾಲಯ, ಇಂದಿರಾ ಗಾಂಧಿ ಮ್ಯೂಸಿಯಂ, ಚೆಲುವರಾಜಮ್ಮಣ್ಣಿ ಮ್ಯಾನ್‌ಷನ್‌ (ಸಿ.ಎಫ್‌.ಟಿ.ಆರ್‌.ಐ), ರೈಲ್ವೆ ಮ್ಯೂಸಿಯಂ, ಜಯಲಕ್ಷ್ಮಿವಿಲಾಸ ಮ್ಯಾನ್‌ಷನ್‌ (ಮಾನಸಗಂಗೋತ್ರಿ)ಗೆ ಭೇಟಿ ಮಾಡಿಸಲಾಗುತ್ತದೆ. ಅಲ್ಲದೇ, ಮಾರ್ಗಮಧ್ಯದಲ್ಲಿ ಬರುವ ಪಾರಂಪರಿಕ ಕಟ್ಟಡಗಳ ಕುರಿತೂ ಮಾಹಿತಿ ನೀಡಲಾಗುತ್ತದೆ.

ಬೆಳಿಗ್ಗೆ 10ಕ್ಕೆ ಆರಂಭವಾಗುವ ಈ ಪ್ರವಾಸ ಸಂಜೆ 6ಕ್ಕೆ ಮುಗಿಯುತ್ತದೆ.

ಟಿಕೆಟುಗಳನ್ನು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂದಿನ ಕೌಂಟರ್‌ನಲ್ಲಿ ಪಡೆಯಬಹುದು. ಟಿಕೆಟ್‌ ಹಾಗೂ ಹೆಚ್ಚಿನ ಮಾಹಿತಿಗೆ www.ksrtc.in ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT