ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಕ್ಕೊಟ್ಟಿನಲ್ಲಿ ಸಿಗುತ್ತಿಲ್ಲ ಪಡಿತರ

Last Updated 23 ಸೆಪ್ಟೆಂಬರ್ 2017, 9:13 IST
ಅಕ್ಷರ ಗಾತ್ರ

ಉಳ್ಳಾಲ: ರಾಜ್ಯ ಆಹಾರ ಸಚಿವರ ಕ್ಷೇತ್ರದಲ್ಲಿ ರೇಷನ್‌ಗಾಗಿ ಜನರು ಪರದಾಡುವಂತಾಗಿದೆ. ಸಮೀಪದ ತೊಕ್ಕೊಟಿನ ನ್ಯಾಯ ಬೆಲೆ ಅಂಗಡಿಯಲ್ಲಿ ಒಂದು ವಾರದಿಂದ ರೇಷನ್‌ ಪಡೆದುಕೊಳ್ಳಲು ಆಗದೇ ವಾಪಸ್ ತೆರಳುತ್ತಿದ್ದಾರೆ.

‘ಸರ್ವರ್ ಡೌನ್ ನೆಪ ಹೇಳಿ ಜನರನ್ನು ಪಡಿತರ ಅಂಗಡಿಯವರು ಸತಾಯಿಸುತ್ತಿದ್ದಾರೆ’ ಎಂದು ಶುಕ್ರವಾರ ಅಂಗಡಿ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ನಾಗರಿಕರು ಮತ್ತು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಗ್ರಾಹಕರ ಸಮಸ್ಯೆಯನ್ನು ಅರಿತ ಬಿಜೆಪಿಯ ಕ್ಷೇತ್ರ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಯುವ ಮೋರ್ಛಾದ ಮಾಜಿ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಬಿಜೆಪಿ ಉಳ್ಳಾಲ ನಗರಾಧ್ಯಕ್ಷ ಭಗವಾನ್ ದಾಸ್ ಮತ್ತು ಬಿಜೆಪಿ ಜಿಲ್ಲಾ ಅಲ್ಪಸಂಖ್ಖಾತ ಮೋರ್ಛಾದ ಪ್ರಧಾನ ಕಾರ್ಯದರ್ಶಿ ಮುನೀರ್ ಹಾಜಿ ಅವರು ಪಡಿತರ ಅಂಗಡಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಜನರಿಗೆ ಪಡಿತರ ಒದಗಿಸಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನವರಾತ್ರಿ ಹಬ್ಬದ ಸಡಗರದಲ್ಲಿ, ಜನರಿಗೆ ಯಾವುದೇ ಸಮಸ್ಯೆ ಯಾಗ ದಂತೆ ನೋಡಬೇಕಿದ್ದ ಸಚಿ ವರು ತೊಕ್ಕೊಟಿನಲ್ಲೇ ಇದ್ದರೂ ನೂರಾರು ಜನರ ಬವಣೆಗೆ ಆಸರೆ ಯಾಗಲಿಲ್ಲ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ಈ ಬಗ್ಗೆ ಪಡಿತರ ಅಂಗಡಿಯವರಿಗೆ, ಕಳೆದ ತಿಂಗಳಿನ ಪಡಿತರ ಪಟ್ಟಿ ಕಳುಹಿಸುತ್ತೇವೆ ಅದೇ ರೀತಿ ಅಕ್ಕಿ ವಿತರಣೆ ಮಾಡುತ್ತೇವೆ ಎಂದು ತಿಳಿಸಿ ಸಮಸ್ಯೆ ಬಗೆ ಹರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT