ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿ ವಿದ್ಯಾರ್ಥಿಗಳಿಗೆ ವ್ಯವಸಾಯದ ನೈಜ ಅನುಭವ ಅನಿವಾರ್ಯ’

Last Updated 23 ಸೆಪ್ಟೆಂಬರ್ 2017, 10:12 IST
ಅಕ್ಷರ ಗಾತ್ರ

ಮಾಗಡಿ: ಪುಸ್ತಕದ ಬದನೆ ಕಾಯಿ ಸಾಂಬಾರು ಮಾಡಲು ಬರುವುದಿಲ್ಲ ಎಂಬ ಜನಪದರ ಮಾತಿನಂತೆ ಕೃಷಿ ವಿದ್ಯಾರ್ಥಿಗಳಿಗೆ ಗ್ರಾಮೀಣ ವ್ಯವಸಾಯದ ನೈಜ ಅನುಭವ ಅಗತ್ಯ ಎಂದು ನಗರದ ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾಧಿಕಾರಿ ಡಾ.ನಟರಾಜು ತಿಳಿಸಿದರು.

ತಾಲ್ಲೂಕಿನ ಕೆಂಪಸಾಗರದಲ್ಲಿ ಶುಕ್ರವಾರ ಅಂತಿಮ ಬಿಎಸ್‌ಸಿ ಕೃಷಿ ಪದವಿಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ 90 ದಿನಗಳಿಂದ ನಡೆದ ಕೃಷಿ ವಿ.ವಿಯ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವದ ಅಂಗವಾಗಿ ಈ ಪ್ರದರ್ಶನ ನೆರವೇರಿತು.

‘ನಾವೆಲ್ಲರೂ ರೈತರ ಋಣದಲ್ಲಿ ಬದುಕುತ್ತಿದ್ದೇವೆ ಎಂಬ ಅರಿವು ಇರಬೇಕು, ಗ್ರಾಮೀಣ ಜನಜೀವನದ ಕಣ್ಣೋಟವನ್ನು ತುಂಬಿಕೊಂಡಿರುವ ವಿದ್ಯಾರ್ಥಿಗಳು ಬದುಕಿನಲ್ಲಿ ಕೃಷಿ ರಂಗದತ್ತ ಗಮನ ಹರಿಸಲಿದ್ದಾರೆ ಎಂದು ಡಾ.ಶಿವಲಿಂಗಯ್ಯ ತಿಳಿಸಿದರು.

ಪ್ರಾಧ್ಯಾಪಕರಾದ ಕೆ.ಸಿ.ಲಲಿತಾ, ವಸುಂಧರದೇವಿ, ನಾಗರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ದೇವರಾಜ್‌, ರಮೇಶ್‌, ಚನ್ನವೀರಣ್ಣ, ರೇವಣ್ಣ, ಬಲರಾಮಯ್ಯ, ಮೂರ್ತಿ, ಗುಂಡಣ್ಣ, ಮಂಜುನಾಥ , ಶಿಬಿರಾರ್ಥಿಗಳಾದ ಗಿರೀಶ್‌, ದರ್ಶನ್‌, ದಿವಾಕರ್‌, ಗೋಕುಲ, ಹರ್ಷಿತ್‌, ಯತೀಶ್‌, ಜಯಪ್ರಕಾಶ್‌, ಹರೀಶ್‌, ಕಿಶೋರ್‌, ಕಾರ್ತಿಕ್‌, ಮುಧುಶ್ರೀ, ಎನ್‌.ಇ.ಕಾವ್ಯ, ಹರ್ಷಪ್ರದ್‌್‌, ಭುವನ, ದೀಪ್ತಿ ಕಾರ್ಯಾನುಭವದ ಬಗ್ಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT