ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲ್ಝೀಮರ್‌ ಕಾಯಿಲೆಗೆ ಪ್ರೀತಿಯೇ ಔಷಧಿ’

Last Updated 24 ಸೆಪ್ಟೆಂಬರ್ 2017, 9:11 IST
ಅಕ್ಷರ ಗಾತ್ರ

ಮಂಗಳೂರು: ಪೇಜ್ ಮಂಗಳೂರು ಹಾಗೂ ಅಲ್ಝೀಮರ್‌ ಅಸೋಸಿಯೇಶನ್ ವತಿಯಿಂದ ನಗರದ ಪುರಭವನದಲ್ಲಿ ಶನಿವಾರ ಅಲ್ಝೀಮರ್‌ ಜಾಗೃತಿ ಕಾರ್ಯಕ್ರಮ ನಡೆಯಿತು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮಾನವೀಯತೆಯಿಂದ ನೋಡಿ ಕೊಳ್ಳುವುದೇ ಅಲ್ಝೀ ಮರ್‌ ರೋಗಕ್ಕೆ ಇರುವ ಔಷಧಿ. ಹಿರಿಯರನ್ನು ಪ್ರೀತಿ ಯಿಂದ ನೋಡಿಕೊಂಡಲ್ಲಿ ಅಂತಹ ಕಾಯಿಲೆಯನ್ನು ದೂರವಿ ಡಬಹುದು’ ಎಂದು ಹೇಳಿದರು.

ಡಾ.ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, ನಮ್ಮ ದೇಶದಲ್ಲಿ ಅಲ್‌ಝೀಮರ್ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇದಕ್ಕೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗುತ್ತದೆ. ಒಮ್ಮೆ ಕಾಯಿಲೆ ಬಂದಲ್ಲಿ ಅದು ಗುಣವಾಗುವುದಿಲ್ಲ. ಕಾಯಿಲೆಗೆ ತುತ್ತಾದವರನ್ನು ಚೆನ್ನಾಗಿ ಆರೈಕೆ ಮಾಡಿ ಎಂದು ಸಲಹೆ ನೀಡಿದರು.

ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಮಾತನಾಡಿ, ಕುಟುಂಬ ಸಂಸ್ಕೃತಿಯನ್ನು ಕಾಪಾಡಿದಲ್ಲಿ ಹಿರಿಯರನ್ನು ಆರೈಕೆ ಮಾಡುವ ಅವಕಾಶವೂ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪೇಜ್ ಸಂಘಟನೆ ಅಧ್ಯಕ್ಷ ಒಲಿಂಡಾ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಕವಿತಾ ಸನಿಲ್, ಅಲ್‌ಝೀಮರ್ ಅಸೋಸಿಯೇಶನ್ ಅಧ್ಯಕ್ಷ ಜೆರಾರ್ಡಿನ್ ಡಿಸೋಜ, ಪೇಜ್ ಉಪಧ್ಯಕ್ಷೆ ಡಾ.ಪ್ರಭಾ ಅಧಿಕಾರಿ, ಡಾ.ಯೂಸುಫ್ ಕುಂಬ್ಳೆ, ಶ್ರೀಕುಮಾರ್ ಮೆನನ್, ಡಾ.ದೇವರಾಜ್, ಸುಂದರ ಪೂಜಾರಿ ಉಪಸ್ಥಿತರಿದ್ದರು. ಸೌಜನ್ಯ ಹೆಗ್ಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT