ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಎತ್ತಿಹಿಡಿದ ಕರೊಲಿನಾ ವೋಜ್ನಿಯಾಕಿ

ಪ್ಯಾನ್‌ ಪೆಸೆಫಿಕ್ ಓಪನ್ ಟೆನಿಸ್ ಟೂರ್ನಿ
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಟೋಕಿಯೊ (ಎಎಫ್‌ಪಿ): ಎದುರಾಳಿಯನ್ನು ನೇರ ಸೆಟ್‌ಗಳಿಂದ ಮಣಿಸಿದ ಡೆನ್ಮಾರ್ಕ್‌ನ ಕರೊಲಿನಾ ವೋಜ್ನಿಯಾಕಿ ಡಬ್ಲ್ಯುಟಿಎ ಪ್ಯಾನ್‌ ಪೆಸೆಫಿಕ್ ಓಪನ್ ಟೆನಿಸ್ ಟೂರ್ನಿಯ ಪ್ರಶಸ್ತಿಯನ್ನು ಎತ್ತಿ ಹಿಡಿದರು. ಕಳೆದ ಬಾರಿಯೂ ಚಾಂಪಿಯನ್ ಆಗಿದ್ದ ಅವರು ಭಾನುವಾರ ನಡೆದ ಫೈನಲ್‌ನಲ್ಲಿ 6–0, 7–5ರ ಜಯ ಸಾಧಿಸಿದರು. ಅನಸ್ತೇಸಿಯಾ ಪೌಲಿಚೆಂಕೋವಾ ಎದುರಿನ ಪಂದ್ಯವನ್ನು 75 ನಿಮಿಷಗಳಲ್ಲಿ ಅವರು ಮುಗಿಸಿದರು.

ವಿಶ್ವದ ಮೊದಲ ಕ್ರಮಾಂಕದ ಆಟಗಾರ್ತಿ ಗಾರ್ಬೈನ್ ಮುಗುರುಜಾ ಅವರನ್ನು ಸೆಮಿಫೈನಲ್‌ನಲ್ಲಿ 6–2, 6–0ಯಿಂದ ಮಣಿಸಿದ್ದ ವೋಜ್ನಿಯಾಕಿ ಅವರು 2012ರ ನಂತರ ಇದೇ ಮೊದಲ ಬಾರಿ ಪೌಲಿಚೆಂಕೋವಾ ಅವರ ವಿರುದ್ಧ ಕಣಕ್ಕೆ ಇಳಿದಿದ್ದರು. ಆರಂಭದಲ್ಲೇ ಭರ್ಜರಿ ಆಟವಾಡಿದ ಡೆನ್ಮಾರ್ಕ್ ಆಟಗಾರ್ತಿ 3–0ಯಿಂದ ಮುನ್ನಡೆ ಸಾಧಿಸಿದರು.

ಮೊದಲ ಸೆಟ್‌ ಅನ್ನು ಕೇವಲ 22 ನಿಮಿಷದಲ್ಲಿ ಮುಗಿಸಿದ ವೋಜ್ನಿಯಾಕಿ ಅವರಿಗೆ ಎರಡನೇ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ಎದುರಾಯಿತು. ಹತ್ತನೇ ಗೇಮ್‌ನಲ್ಲಿ ಅನಸ್ತೇಸಿಯಾ ಒಂದು ಮ್ಯಾಚ್ ಪಾಯಿಂಟ್‌ ಉಳಿಸಿಕೊಂಡರೂ ವೋಜ್ನಿಯಾಕಿ ಅವರನ್ನು ನಿಯಂತ್ರಿಸಲು ಆಗಲಿಲ್ಲ. ಕೊನೆಯ ಗೇಮ್‌ನಲ್ಲಿ ಅಮೋಘ ಬ್ಯಾಕ್‌ಹ್ಯಾಂಡ್ ಹೊಡೆತದ ಮೂಲಕ ಗೆಲುವು ಸಾಧಿಸಿದ ಡೆನ್ಮಾರ್ಕ್‌ ಆಟಗಾರ್ತಿ ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು.

ಕಳೆದ ಬಾರಿ ಹಾಂಕಾಂಗ್ ಟೂರ್ನಿಯ ನಂತರ ಇದು ಅವರ ಮೊದಲ ಪ್ರಶಸ್ತಿ. ವೃತ್ತಿಜೀವನದ 26ನೇ ಪ್ರಶಸ್ತಿ. ಭಾನುವಾರದ ಸಾಧನೆಯೊಂದಿಗೆ ಅವರು ಪ್ಯಾನ್‌ ಪೆಸೆಫಿಕ್ ಓಪನ್‌ನಲ್ಲಿ ಅತಿಹೆಚ್ಚು ಪ್ರಶಸ್ತಿ ಗೆದ್ದ ಎರಡನೇ ಆಟಗಾರ್ತಿಯರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡರು. ಸ್ಟೆಫಿಗ್ರಾಫ್‌ ಮತ್ತು ಗಾಬ್ರಿಯೆಲಾ ಸಬತಿನಿ ಕೂಡ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅತಿ ಹೆಚ್ಚು ಪ್ರಶಸ್ತಿ ಗೆದ್ದ ದಾಖಲೆ ಮಾರ್ಟಿನಾ ಹಿಂಗಿಸ್ (5) ಅವರ ಹೆಸರಿನಲ್ಲಿದೆ.

‘ಈ ವರ್ಷ ಇದು ನನ್ನ ಏಳನೇ ಫೈನಲ್ ಪಂದ್ಯ ಆಗಿತ್ತು. ಪ್ರತಿ ಪಂದ್ಯವೂ ಕಠಿಣವಾಗುತ್ತಿತ್ತು. ಪ್ರಶಸ್ತಿ ಗೆಲ್ಲಲು ಸಾಧ್ಯ
ವಾದದ್ದು ಖುಷಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT