ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ್‌, ಹರಿಕಾ ಶುಭಾರಂಭ

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಇಸ್ಲೆ ಆಫ್ ಮ್ಯಾನ್‌ (ಪಿಟಿಐ): ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ವಿಶ್ವನಾಥನ್ ಆನಂದ್ ಮತ್ತು ಭಾರತೀಯ ಗ್ರ್ಯಾಂಡ್‌
ಮಾಸ್ಟರ್‌ ಹರಿಕಾ ದ್ರೋಣವಲ್ಲಿ ಅವರು ಇಸ್ಲೆ ಆಫ್ ಮ್ಯಾನ್ ಚೆಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮೊದಲ ಸುತ್ತಿನಲ್ಲಿ ಆನಂದ್ ಅವರು ಅಮೆರಿಕದ ಮಾರ್ಕ್ ಎಸರ್‌ಮ್ಯಾನ್ ಅವರನ್ನು ಮಣಿಸಿದರು. ಹರಿಕಾ ಅವರು ತಮ್ಮ ಪುರುಷ ಎದುರಾಳಿ, ಇಂಗ್ಲೆಂಡ್‌ನ ಒಯಾಮಾ ಅಕಿಟೊ ಎದುರು ಗೆಲುವು ಸಾಧಿಸಿದರು.

ಬಿಳಿ ಕಾಯಿಗಳೊಂದಿಗೆ ಆಡಿದ ಆನಂದ್‌ ಪ್ರತಿ ಹಂತದಲ್ಲೂ ಎದುರಾಳಿಯ ಮೇಲೆ ಮೇಲುಗೈ ಸಾಧಿಸಿದರು. 46 ನಡೆಗಳಲ್ಲಿ ಪಂದ್ಯವನ್ನು ಮುಕ್ತಾಯಗೊಳಿಸಿದರು. ಎರಡನೇ ಸುತ್ತಿನಲ್ಲಿ ಅವರು ಜರ್ಮನಿಯ ಲ್ಯಾಂಪರ್ಟ್ ಜೊನಾಸ್ ಎದುರು ಸೆಣಸುವರು.

ವಿಶ್ವದ 10ನೇ ಕ್ರಮಾಂಕದ ಆಟಗಾರ್ತಿ ಹರಿಕಾ ಕೂಡ ಬಿಳಿಕಾಯಿಗಳೊಂದಿಗೆ ಆಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT