ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4ನೇ ಅವಧಿಗೂ ಮರ್ಕೆಲ್‌ ಚಾನ್ಸಲರ್‌ ?

ಜರ್ಮನಿ ಸಂಸತ್ತಿಗೆ ಚುನಾವಣೆ: 6.15ಕೋಟಿ ಮತ
Last Updated 24 ಸೆಪ್ಟೆಂಬರ್ 2017, 19:33 IST
ಅಕ್ಷರ ಗಾತ್ರ

ಬರ್ಲಿನ್‌: ಜರ್ಮನಿ ಸಂಸತ್ತಿನ ಕೆಳಮನೆ (ಬುಂಡೆಸ್ಟ್ಯಾಗ್‌)ಗೆ ಭಾನುವಾರ ಚುನಾವಣೆ ನಡೆಯಿತು. ಚಾನ್ಸೆಲರ್‌ ಆಗಿರುವ  ಏಂಜೆಲಾ ಮರ್ಕೆಲ್‌ ಅವರು ನಾಲ್ಕನೇ ಅವಧಿಗೆ ಆಯ್ಕೆಯಾಗುವುದು ಬಹುತೇಕ ಖಾತ್ರಿಯಾಗಿದೆ.

ದೇಶದ 6.15 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ‘ಈ ಬಾರಿ ಯಾರಿಗೆ ಮತಚಲಾಯಿಸಬೇಕು ಎಂದು ಮತದಾರರೂ ಕೊನೆಯ ತನಕ ಗೊಂದಲದಲ್ಲಿದ್ದರು’ ಎಂದು ಚುನಾವಣಾ ತಜ್ಞರು ವಿಶ್ಲೇಷಿಸಿದ್ದಾರೆ.

ರಾಜಧಾನಿ ಬರ್ಲಿನ್‌ನ ಮತಗಟ್ಟೆಗೆ ಪತಿ ಜೊಯಾಚಿಮ್‌ ಚೌಚೆರ್‌ ಜತೆಗೆ ಬಂದು ಏಂಜೆಲಾ ಅವರು ಮತಚಲಾಯಿಸಿದರು. ಕ್ರಿಶ್ವಿಯನ್‌ ಡೆಮಾಕ್ರಟಿಕ್‌ ಯೂನಿಯನ್‌ (ಸಿಡಿಯು) ನಾಯಕಿಯಾಗಿರುವ ಏಂಜೆಲಾ, ಕಳೆದ 12 ವರ್ಷಗಳ ತಮ್ಮ ಆಡಳಿತದಲ್ಲಿ ದಾಖಲಾದ ಕಡಿಮೆ ನಿರುದ್ಯೋಗ ಪ್ರಮಾಣ, ಆರ್ಥಿಕ ಪ್ರಗತಿ, ಸ್ಥಿರ ಬಜೆಟ್‌ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿರುವುದನ್ನು ಮುಂದಿಟ್ಟುಕೊಂಡು ಜನರ ಮನಗೆಲ್ಲಲು ಮುಂದಾಗಿದ್ದಾರೆ.

ಏಂಜೆಲಾ ಅವರ ವಲಸೆನೀತಿಯ ಕಟುಟೀಕಾಕಾರ ಸೋಷಿಯಲ್‌ ಡೆಮಾಕ್ರಟಿಕ್‌ನ (ಎಸ್‌ಪಿಡಿ) ನಾಯಕ ಮಾರ್ಟಿನ್‌ ಶುಲ್ಜ್‌ ಅವರು ಪಶ್ಚಿಮ ಜರ್ಮನಿಯ ಸಿಟಿಹಾಲ್‌ನಲ್ಲಿ ಮತ ಚಲಾಯಿಸಿದರು.

ಬಳಿಕ ಮಾತನಾಡಿದ ಅವರು, ‘ಭವಿಷ್ಯದಲ್ಲಿ ಜರ್ಮನಿಯ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ದೇಶದ ಬಹಳಷ್ಟು ಮಂದಿ ಮತಚಲಾಯಿಸುವ ವಿಶ್ವಾಸವಿದೆ’ ಎಂದು ತಿಳಿಸಿದರು.

ಏಂಜೆಲಾ ಮರ್ಕೆಲ್‌ ಅವರ ಕ್ರಿಶ್ಚಿಯನ್‌ ಡೆಮಾಕ್ರಟಿಕ್‌ ಪಕ್ಷ ಹಾಗೂ ಮಿತ್ರ ಪಕ್ಷ ಕ್ರಿಶ್ಚಿಯನ್‌ ಸೋಷಿಯಲ್‌ ಯೂನಿಯನ್‌ ಪಕ್ಷವು ಮಹಾಮೈತ್ರಿ ಅಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಇದೇ ಒಕ್ಕೂಟಕ್ಕೆ ಮತ್ತೊಂದು ಅವಧಿಗೆ ಅಧಿಕಾರ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಚುನಾವಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT