ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್‌ ಮಹರ್ಷಿ ಮುಂದಿನ ಸಿಎಜಿ

Last Updated 24 ಸೆಪ್ಟೆಂಬರ್ 2017, 19:43 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನೂತನ ಮಹಾಲೇಖಪಾಲರಾಗಿ (ಸಿಎಜಿ) ರಾಜೀವ್‌ ಮಹರ್ಷಿ ನೇಮಕಗೊಂಡಿದ್ದಾರೆ. ಕೇಂದ್ರ ಗೃಹ ಕಾರ್ಯದರ್ಶಿಯಾಗಿ ನಿವೃತ್ತರಾಗಿರುವ ಇವರು, ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ  ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಮಹರ್ಷಿ ಅವರಿಗೆ ಗೌಪ್ಯತಾ ಪ್ರಮಾಣವಚನ ಬೋಧಿಸಲಿದ್ದಾರೆ. ಶಶಿಕಾಂತ್‌ ಶರ್ಮಾ ಅವರಿಂದ ತೆರವಾಗಿರುವ ಸ್ಥಾನಕ್ಕೆ ಮಹರ್ಷಿ ಅವರ ನೇಮಕಕ್ಕೆ ಸರ್ಕಾರ  ಒಪ್ಪಿಗೆ ಸೂಚಿಸಿದೆ ಎಂದರು.

1978ನೇ ಬ್ಯಾಚಿನ ರಾಜಸ್ತಾನ ಕೇಡರ್‌ ಐಎಎಸ್‌ ಅಧಿಕಾರಿಯಾಗಿರುವ ಮಹರ್ಷಿ ಅವರು, ಕೇಂದ್ರ ಗೃಹ ಖಾತೆ ಕಾರ್ಯದರ್ಶಿಯಾಗಿ ಎರಡು ವರ್ಷಗಳ ಅವಧಿಯನ್ನು ಕಳೆದ ತಿಂಗಳು ಪೂರ್ತಿಗೊಳಿಸಿದ್ದರು.

2013ರ ಮೇ 23ರಂದು ಸಿಎಜಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಶಶಿಕಾಂತ್‌ ಶರ್ಮಾ ಅವರ ಅಧಿಕಾರದ ಅವಧಿ ಕಳೆದ ಶುಕ್ರವಾರಕ್ಕೆ ಮುಕ್ತಾಯಗೊಂಡಿತ್ತು. ಮುಂದಿನ ಮೂರು ವರ್ಷಗಳ ಅವಧಿಗೆ ಮಹರ್ಷಿ ನೇಮಕಗೊಂಡಿದ್ದಾರೆ. ಮಹಾಲೇಖಪಾಲರು ಆರು ವರ್ಷ ಅವಧಿ ಅಥವಾ 65 ವರ್ಷಕ್ಕೆ ನಿವೃತ್ತಿ ಹೊಂದಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT