ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ವ್ಯಾಪಾರಕ್ಕೆ ವೈಡಿಆರ್ ಚಾಟ್

Last Updated 26 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ದೇಶದ ಅತಿದೊಡ್ಡ ಸಗಟು ಮಾರುಕಟ್ಟೆ ಇ ತಾಣವಾಗಿರುವ ವೈಡಿಆರ್ ಡಾಟ್ ಇನ್ (Wydr.in), ‘ವೈಡಿಆರ್ ಚಾಟ್’ (WydrChat) ಹೆಸರಿನ ಹೊಸ ಆ್ಯಪ್ ಪರಿಚಯಿಸಿದೆ. ಖರೀದಿದಾರರು ಮತ್ತು ಮಾರಾಟಗಾರರು ಈ ಮೂಲಕ ಸಂಭಾಷಣೆ ನಡೆಸಿ ಪರಸ್ಪರ ಒಪ್ಪಿಗೆಯಾಗುವಂತೆ ವಹಿವಾಟನ್ನು ಅಂತಿಮಗೊಳಿಸಲು ಸಾಧ್ಯವಿದೆ.

‘ವೈಡಿಆರ್ ಚಾಟ್’ ಸಗಟು ಮಾರುಕಟ್ಟೆಯ ವಾಸ್ತವ ಅನುಭವ ನೀಡಲಿದೆ. ಮಾರಾಟಗಾರರು ಮತ್ತು ಖರೀದಿದಾರರು ಇಬ್ಬರು ಮಾರುಕಟ್ಟೆಗೆ ಹೋಗದೆಯೇ ತಮಗೆ ಬೇಕಾದ ವ್ಯಾಪಾರವನ್ನು ಇದರ ಮೂಲಕ ಕುದುರಿಸಬಹುದು. ‘ಆನ್‍ಲೈನ್ ಸಗಟು ಖರೀದಿಯನ್ನು ಸರಳ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಪ್ರತ್ಯಕ್ಷ ಸಗಟು ಮಾರುಕಟ್ಟೆಯ ಅನುಕೂಲಗಳನ್ನೇ ಇದು ಒದಗಿಸಲಿದೆ. ವಹಿವಾಟಿನೊಂದಿಗೆ ವಹಿವಾಟಿಗೆ ಆನ್‍ಲೈನ್‍ನಲ್ಲಿಯೇ ವ್ಯಾಪಾರ ಮಾಡುವ ಪರಿಕಲ್ಪನೆಯನ್ನು ಆ್ಯಪ್‌ನಲ್ಲಿ ಸಾಕಾರಗೊಳಿಸಲಾಗಿದೆ’ ಎಂದು ವೈಡಿಆರ್ ಡಾಟ್ ಇನ್‍ ಸ್ಥಾಪಕ ದೇವೇಶ್ ರೈ ಹೇಳಿದ್ದಾರೆ.

ನಕಲಿ ಸುದ್ದಿ ತಡೆಗೆ ಫೇಸ್‌ಬುಕ್‌ ಅಭಿಯಾನ

ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಯ ಹಾವಳಿ ಹೆಚ್ಚುತ್ತಿದೆ. ತಪ್ಪು ಮಾಹಿತಿ ಹಾಗೂ ನಕಲಿ ಸುದ್ದಿಯನ್ನು ಪೋಸ್ಟ್ ಮಾಡದಿರುವಂತೆ ಬಳಕೆದಾರರಲ್ಲಿ ಜಾಗೃತಿ ಮೂಡಿಸಲು ಫೇಸ್‌ಬುಕ್‌  ಅಭಿಯಾನವನ್ನು ಆಯೋಜಿಸಿತ್ತು.

ವಿಶೇಷವಾಗಿ ಭಾರತವನ್ನು ಗಮನದಲ್ಲಿರಿಸಿಕೊಂಡು   ಈ ಅಭಿಯಾನ ನಡೆಸಿತ್ತು.  ಭಾರತದಲ್ಲಿ ಫೇಸ್‌ಬುಕ್‌ ಮತ್ತು ವಾಟ್ಸ್ ಆ್ಯಪ್ ಅನ್ನು ಅತಿ ಜನರು ಬಳಕೆ ಮಾಡುತ್ತಾರೆ. ದೇಶದಲ್ಲಿ ಅತಿ ಹೆಚ್ಚು ಪ್ರಸಾರವನ್ನು ಹೊಂದಿರುವ ಆಯ್ದ ಹತ್ತು ಪತ್ರಿಕೆಗಳಿಗೆ ಪೂರ್ಣ ಪುಟದ ಜಾಹೀರಾತು ನೀಡುವ ಮೂಲಕ ಬಳಕೆದಾರರಲ್ಲಿ ನಕಲಿ ಸುದ್ದಿಯನ್ನು ಪ್ರಕಟಿಸದಿರುವಂತೆ ಜಾಗೃತಿ ಮೂಡಿಸುವ ದಿಟ್ಟ ನಡೆ ಪ್ರದರ್ಶಿಸಿತ್ತು. ಪೂರ್ಣ ಪುಟದ ಜಾಹೀರಾತಿನಲ್ಲಿ ಫೇಸ್‌ಬುಕ್‌ ಮತ್ತು ವಾಟ್ಸ್‌ ಆ್ಯಪ್‌ ಚಿಹ್ನೆ ಹಾಗೂ ನಾವೆಲ್ಲ ನಕಲಿ ಸುದ್ದಿ ಹಾವಳಿಯನ್ನು ತಡೆಯಲು ಜೊತೆಯಾಗೋಣ ಎಂಬ ಅಡಿ ಬರಹವನ್ನು ಬರೆಯಲಾಗಿತ್ತು.

ಭಾರತದಲ್ಲಿ ತಪ್ಪು ಮಾಹಿತಿ ಹಾಗೂ ನಕಲಿ ಸುದ್ದಿಗಳ ಪೋಸ್ಟ್‌ಗಳು, ವಿಡಿಯೊಗಳು ಅತಿ ಹೆಚ್ಚು ವೈರಲ್ ಆಗುತ್ತಿರುವುದು ಕಳವಳಕಾರಿ ಎಂದು ಫೇಸ್‌ಬುಕ್‌ ಆತಂಕ ವ್ಯಕ್ತಪಡಿಸಿದೆ.

ಈ ರೀತಿಯ ಪೋಸ್ಟ್‌ಗಳು ಲಕ್ಷಾಂತರ ಲೈಕ್ಸ್, ಹಾಗೂ ಶೇರ್ ಆಗುವುದರಿಂದ ಸಭ್ಯ ಅಥವಾ ಅಮಾಯಕ ಬಳಕೆದಾರರಿಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ. ಈ ನಿಟ್ಟಿನಲ್ಲಿ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ ಬಳಸುವವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದರ ಮೂಲಕ, ನಕಲಿ ಸುದ್ದಿ ತಡೆ ಅಭಿಯಾನ ನಡೆಸಲಾಯಿತು ಎಂದು ಫೇಸ್‌ಬುಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT