ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರುಣ್‌ ತೇಜ್‌ಪಾಲ್‌ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧ; ನ.21ರಿಂದ ವಿಚಾರಣೆ

Last Updated 28 ಸೆಪ್ಟೆಂಬರ್ 2017, 11:29 IST
ಅಕ್ಷರ ಗಾತ್ರ

ಪಣಜಿ: ಮಹಿಳಾ ಸಹೋದ್ಯೋಗಿ ಮೇಲೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ‘ತೆಹೆಲ್ಕಾ’ ಮಾಜಿ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್‌ ವಿರುದ್ಧ ಗೋವಾ ಕೋರ್ಟ್‌ ಗುರುವಾರ ದೋಷಾರೋಪ ಪಟ್ಟಿ ಸಿದ್ಧಪಡಿಸಿದೆ.

ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಮಹಿಳೆಯ ಮಾನಭಂಗ ಪ್ರಕರಣಗಳಲ್ಲಿ ತೇಜ್‌ಪಾಲ್‌ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಗೊಂಡಿದ್ದು, ಗೋವಾ ಸೆಷನ್ಸ್‌ ನ್ಯಾಯಾಲಯ ನವೆಂಬರ್‌ 21ರಿಂದ ವಿಚಾರಣೆ ನಡೆಸಲಿದೆ.‌ ಆರೋಪಗಳ ಸಂಬಂಧ ತೇಜ್‌ಪಾಲ್‌ ಈವರೆಗೂ ತಪ್ಪೊಪ್ಪಿಕೊಂಡಿಲ್ಲ. 

ದೋಷಾರೋಪ ಪಟ್ಟಿ ಕೈಬಿಡಲು ಒಪ್ಪದ ಗೋವಾ ಕೋರ್ಟ್‌ ನಿರ್ಧಾರವನ್ನು ಪ್ರಶ್ನಿಸಿ ತೇಜ್‌ಪಾಲ್‌ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ಸಹ ದೋಷಾರೋಪ ಪಟ್ಟಿ ರಚನೆಗೆ ತಡೆ ನೀಡಲು ಅಸಮ್ಮತಿಸಿತ್ತು.

ಪ್ರಕರಣದ ಹಿನ್ನೆಲೆ: 2013ರ ನವೆಂಬರ್‌ 7 ಹಾಗೂ 8ರಂದು ಪಂಚತಾರಾ ಹೋಟೆಲ್‌ನ ಲಿಫ್ಟ್‌ನಲ್ಲಿ ತೇಜ್‌ಪಾಲ್‌ ತಮ್ಮ ಮೇಲೆ ಅತ್ಯಾಚಾರ ಮಾಡಿ­ದ್ದಾಗಿ ಅವರ ಸಹೋದ್ಯೋಗಿ ಪೊಲೀಸರಿಗೆ ದೂರು ಕೊಟ್ಟಿದ್ದರು. ನವೆಂಬರ್‌ 30ರಂದು ತೇಜ್‌ಪಾಲ್‌ ಅವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT