ಸಂದರ್ಶನ

‘ಶಿಕ್ಷಣಕ್ಕೆ ತಂತ್ರಜ್ಞಾನ ವರದಾನ’

ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್ (ದಕ್ಷಿಣ)ಗೆ ಇತ್ತೀಚೆಗೆ ಬಂದಿದ್ದ ಅವರು, ಶಿಕ್ಷಣ ಪುರವಣಿಯೊಂದಿಗೆ ‘ಡಿಜಿಟಲ್ ತಂತ್ರಜ್ಞಾನ ಹಾಗೂ ಕಲಿಕೆ’ ಎಂಬ ವಿಷಯದ ಕುರಿತು ಮಾತನಾಡಿದರು.

ಜೆಫ್ ಸ್ಟಿಡ್‌

‘ಕಲಿಕೆಗೆ ತಂತ್ರಜ್ಞಾನದ ಕೊಡುಗೆ ಅಪಾರ, ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಶಿಕ್ಷಣಕ್ಕೆ ಅದು ವರದಾನ’ ಎನ್ನುತ್ತಾರೆ ಇಂಗ್ಲೆಡ್‌ನ ಕೇಂಬ್ರಿಜ್ಡ್‌  ಇಂಗ್ಲಿಷ್ ಲಾಂಗ್ವೆಜ್‌ ಅಸೆಸ್‌ಮೆಂಟ್‌ನ ಡಿಜಿಟಲ್ ನಿರ್ದೇಶಕರಾದ ಜೆಫ್ ಸ್ಟಿಡ್‌. ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್ (ದಕ್ಷಿಣ)ಗೆ ಇತ್ತೀಚೆಗೆ ಬಂದಿದ್ದ ಅವರು, ಶಿಕ್ಷಣ ಪುರವಣಿಯೊಂದಿಗೆ ‘ಡಿಜಿಟಲ್ ತಂತ್ರಜ್ಞಾನ ಹಾಗೂ ಕಲಿಕೆ’ ಎಂಬ ವಿಷಯದ ಕುರಿತು ಮಾತನಾಡಿದರು.

* ಡಿಜಿಟಲ್ ತಂತ್ರಜ್ಞಾನವನ್ನು ತರಗತಿಯಲ್ಲಿ ಅಳವಡಿಸುವುದರಿಂದ ಆಗುವ ಉಪಯೋಗಗಳೇನು?
ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಕಲಿಕಾ ವಿಧಾನ ಬದಲಾಗಿರಬಹುದು. ಆದರೆ ವಿಷಯ ಬದಲಾಗಿಲ್ಲ. ಇಂದು ತಂತ್ರಜ್ಞಾನ ಜಗತ್ತನ್ನು ಆಳುತ್ತಿದೆ; ಪ್ರತಿಯೊಂದು ವಿಷಯದಲ್ಲೂ ತಂತ್ರಜ್ಞಾನವಿದೆ. ಶಾಲೆಗಳಿಂದಲೇ ಮಕ್ಕಳಿಗೆ ತಂತ್ರಜ್ಞಾನವನ್ನು ವಿಷಯವನ್ನು ಸುಲಭವಾಗಿ ಅರ್ಥೈಸಲು ಡಿಜಿಟಲ್ ತಂತ್ರಜ್ಞಾನದಿಂದ ಸಾಧ್ಯ, ತಂತ್ರಜ್ಞಾನವನ್ನು ಸಮರ್ಪಕವಾಗಿ ಶಾಲೆಗಳಲ್ಲಿ ಬಳಸುವುದರಿಂದ ಮಕ್ಕಳು ಇಂದಿನ ತಾಂತ್ರಿಕಯುಗಕ್ಕೆ ತಮ್ಮನ್ನು ತೆರೆದುಕೊಳ್ಳುತ್ತಾರೆ. ಹಾಗಾಗಿ ಡಿಜಿಟಲ್ ತಂತ್ರಜ್ಞಾನವನ್ನು ಶಾಲಾ ಹಂತದಿಂದಲೇ ಅಳವಡಿಸಬೇಕು.

* ಪಠ್ಯಪುಸ್ತಕಗಳಿಗಿಂತ ಡಿಜಿಟಲ್ ಕಲಿಕೆ ಹೇಗೆ ಸಹಾಯವಾಗಬಲ್ಲದು?
ಇಂದು ಮಕ್ಕಳು ಕಂಪ್ಯೂಟರ್, ಇಂಟರ್‌ನೆಟ್ ಮತ್ತು ಮೊಬೈಲ್‌ಗಳ ಸಹಾಯದಿಂದಲೇ ಪಾಠ ಕಲಿಯುತ್ತಿದ್ದಾರೆ. ಗೂಗಲ್ ಎನ್ನುವ ಮಾಯಾಜಾಲವು ಮಕ್ಕಳಿಗೆ ಪಠ್ಯಪುಸ್ತಕಕ್ಕಿಂತ ಹೆಚ್ಚಿನದ್ದನ್ನು ಒದಗಿಸುತ್ತಿದೆ. ಪಠ್ಯಪುಸ್ತಕಗಳ ಹೊರೆಯನ್ನು ತಪ್ಪಿಸಲು ಕೂಡ ಡಿಜಿಟಲ್ ಶಿಕ್ಷಣ ಸಹಕಾರಿ, ಡಿಜಿಟಲ್ ತರಗತಿಗಳು ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುತ್ತದೆ.

* ಡಿಜಿಟಲ್ ತಂತ್ರಜ್ಞಾನದ ಮುಂದಿನ ಹೆಜ್ಜೆ  ಏನು?
ಡಿಜಿಟಲ್ ತಂತ್ರಜ್ಞಾನ ಎನ್ನುವುದು ‍ಮಕ್ಕಳಿಗಷ್ಟೇ ಅಲ್ಲ, ಅದರಿಂದ ಶಿಕ್ಷಕರು ಕೂಡ ಕಲಿಯಬಹುದು. ಮುಂದೆ ಕಂಪ್ಯೂಟರ್‌ಗಳು ಮಾತನಾಡುವ ಕಾಲ ಬರುತ್ತದೆ. ಮಕ್ಕಳು ತಪ್ಪಾಗಿ ಉಚ್ಚರಿಸುವುದನ್ನು ಕಂಪ್ಯೂಟರ್ ತಿದ್ದಿ ಸರಿ ಮಾಡುತ್ತದೆ. ಡಿಜಿಟಲ್‌ ಯುಗ ಎನ್ನುವುದು ಶಿಕ್ಷಣಕ್ಕೆ ದೊಡ್ಡ ಕೊಡುಗೆ ನೀಡುವುದು ಸುಳ್ಳಲ್ಲ.

* ಸಾಂಪ್ರದಾಯಿಕ ಕಲಿಕೆಗಿಂತ ಡಿಜಿಟಲ್ ಕಲಿಕೆ ಉತ್ತಮವೇ?
ಈ ಪ್ರಶ್ನೆಗೆ ಉತ್ತರಿಸುವುದು ಸ್ವಲ್ಪ ಕಷ್ಟವೇ. ಡಿಜಿಟಲ್ ಕಲಿಕೆಯ ವೆಚ್ಚ ತುಂಬಾ ಜಾಸ್ತಿ. ಆದರೆ ಇದರಿಂದ ಗುಣಮಟ್ಟದ ಕಲಿಕೆ ಸಾಧ್ಯ. ಆದರೆ ಪ್ರಬಂಧದಂತಹ ಬರಹಗಳಿಗೆ ಸಾಂಪ್ರದಾಯಿಕ ಕಲಿಕೆ ಸಹಾಯ ಮಾಡುತ್ತದೆ. ಆದರೆ ಸಂಕ್ಷಿಪ್ತ ರೂಪದ ಬರಹಗಳಿಗೆ ಡಿಜಿಟಲ್ ತಂತ್ರಜ್ಞಾನ ಸಹಾಯ ಮಾಡುತ್ತದೆ. ಒಮ್ಮೆ ನಾವು ಕಂಪ್ಯೂಟರ್‌ನಲ್ಲಿ ಅಳವಡಿಸಿದರೆ ಏಕಕಾಲದಲ್ಲಿ ಸಾವಿರ ಕಡೆ ಸಾವಿರ ಮಂದಿ ಉಪಯೋಗಿಸಬಹುದು. ಒಂದೇ ಮಾಹಿತಿಯನ್ನು  ‌ಪ್ರಪಂಚದಾದಂತ್ಯ ಹಲವರು ಏಕಕಾಲದಲ್ಲಿ ತಿಳಿಯಲು ಡಿಜಿಟಲ್ ತಂತ್ರಜ್ಞಾನದಿಂದ ಸಾಧ್ಯ. ಹೀಗಾಗಿ ಅನೇಕ ಸಂದರ್ಭಗಳಲ್ಲಿ ಡಿಜಿಟಲ್ ಕಲಿಕೆ ಉತ್ತಮ ಎನ್ನಿಸುತ್ತದೆ.

* ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಯಶಸ್ಸನ್ನು ಸಾಧಿಸಿದೆ?
ಕಳೆದ ಎರಡು ವರ್ಷಗಳಿಂದ  ಶಿಕ್ಷಣಕ್ಕೆ ತಂತ್ರಜ್ಞಾನ ಅಪಾರವಾದ ಕೊಡುಗೆಯನ್ನು ನೀಡುತ್ತಿದೆ. ತಮಗೆ ಸಿಗುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಭಾರತ ಒಂದು ಉತ್ತಮ ಉದಾಹರಣೆ. ಭಾರತದ ಅನೇಕ ಪಟ್ಟಣಗಳ ಖಾಸಗಿ ಶಾಲೆಗಳಲ್ಲಿ ಪ್ರಪಂಚದಲ್ಲಿ ಉತ್ತಮ ಎನ್ನಿಸಿರುವ ತಂತ್ರಜ್ಞಾನದ ಬಳಕೆಯಾಗುತ್ತಿದೆ. ಇದು ಭಾರತದ ಅಭಿವೃದ್ಧಿಯ ಸೂಚಕವೂ ಹೌದು. ಬಾಲ್ಯದಿಂದಲೇ ಮಕ್ಕಳಿಗೆ ತಂತ್ರಜ್ಞಾನದ ಅರಿವನ್ನು ನೀಡುವುದರಿಂದ ತಂತ್ರಜ್ಞಾನದ ದುರ್ಬಳಕೆಯನ್ನು ಕಡಿಮೆ ಮಾಡಬಹುದು ಎಂಬುದು ನನ್ನ ಅಭಿಪ್ರಾಯ.

Comments
ಈ ವಿಭಾಗದಿಂದ ಇನ್ನಷ್ಟು
ಕೋರ್ಸ್‌ಗಳನ್ನು ಆಯ್ಕೆ  ಮಾಡುವಾಗ ಎಚ್ಚರವಿರಲಿ

ಕರಾವಳಿ
ಕೋರ್ಸ್‌ಗಳನ್ನು ಆಯ್ಕೆ ಮಾಡುವಾಗ ಎಚ್ಚರವಿರಲಿ

24 Apr, 2018
ಪ್ರಜಾವಾಣಿ ಕ್ವಿಜ್ 18

ಪ್ರಜಾವಾಣಿ ಕ್ವಿಜ್ 18
ಪ್ರಜಾವಾಣಿ ಕ್ವಿಜ್ 18

23 Apr, 2018
‘ಸಿಐಡಿ–ಸಿಬಿಐ ವಿಭಾ‌ಗಗಳಲ್ಲಿ ಕೆಲಸ ಮಾಡಲು ನನಗಿಷ್ಟ’

ನಿಮ್ಮ ಪ್ರಶ್ನೆ ನಮ್ಮ ಉತ್ತರ
‘ಸಿಐಡಿ–ಸಿಬಿಐ ವಿಭಾ‌ಗಗಳಲ್ಲಿ ಕೆಲಸ ಮಾಡಲು ನನಗಿಷ್ಟ’

23 Apr, 2018
ಪ್ರಜಾವಾಣಿ ಕ್ವಿಜ್ 17

ಶಿಕ್ಷಣ
ಪ್ರಜಾವಾಣಿ ಕ್ವಿಜ್ 17

16 Apr, 2018
ಮಕ್ಕಳು ಮತ್ತು ಮಾಸ್ತರು-ನಡುವೆ ಒಂದಿಷ್ಟು ಜಾಗ

ಶಿಕ್ಷಣ
ಮಕ್ಕಳು ಮತ್ತು ಮಾಸ್ತರು-ನಡುವೆ ಒಂದಿಷ್ಟು ಜಾಗ

16 Apr, 2018