ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಂಗ್‌–ಕಿಂಗ್‌ ಆಶಿಶ್ ನೆಹ್ರಾ

Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕ್ರಿಕೆಟ್‌ ಲೋಕ ಕಂಡ ಶ್ರೇಷ್ಠ ಬೌಲರ್‌ಗಳಲ್ಲಿ ಆಶಿಶ್‌ ನೆಹ್ರಾ ಕೂಡ ಒಬ್ಬರು. ತಮ್ಮ ಸಮಕಾಲಿನ ಕ್ರಿಕೆಟಿಗರು ನಿವೃತ್ತಿಯ ಬದುಕು ಸಾಗಿಸುತ್ತಿರುವ ಹೊತ್ತಿನಲ್ಲಿ 38 ವರ್ಷದ  ಆಟಗಾರ ಇನ್ನೂ ಅಂಗಳದಲ್ಲಿ ಮೋಡಿ ಮಾಡುತ್ತಿದ್ದಾರೆ.

ಎಡಗೈ ಮಧ್ಯಮವೇಗಿ ನೆಹ್ರಾ, ಸ್ವಿಂಗ್‌ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿ ಹಲವು ಪಂದ್ಯಗಳಲ್ಲಿ ಭಾರತಕ್ಕೆ ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.

ಅಕ್ಟೋಬರ್‌ 7ರಿಂದ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಟಿ–20 ಸರಣಿಯಲ್ಲಿ ತಂಡದಲ್ಲಿ ಸ್ಥಾನ ಗಳಿಸಿರುವ ಅವರು 18 ವರ್ಷಗಳ ಕ್ರಿಕೆಟ್‌ ಪಯಣದಲ್ಲಿ ಹಲವು ನಾಯಕರ ಅಧೀನದಲ್ಲಿ ಆಡಿದ್ದಾರೆ. 2005ರಲ್ಲಿ ನಡೆದಿದ್ದ ಆಫ್ರೊ ಏಷ್ಯಾ ಕಪ್‌ನ ಆಫ್ರಿಕನ್‌ ಇಲೆವೆನ್‌ ವಿರುದ್ಧದ ಪಂದ್ಯದಲ್ಲಿ ಅವರು ಏಷ್ಯಾ ಇಲೆವನ್‌ ತಂಡದಲ್ಲಿ ಆಡಿದ್ದರು. ಆಗ ಪಾಕಿಸ್ತಾನದ ಇಂಜಮಾಮ್‌ ಉಲ್‌ ಹಕ್‌ ತಂಡವನ್ನು ಮುನ್ನಡೆಸಿದ್ದರು.

ವಿರಾಟ್‌ ಕೊಹ್ಲಿ ಶಾಲಾ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾಗ, ನೆಹ್ರಾ, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚುತ್ತಿದ್ದರು. ಈಗ ಅವರು ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವುದು ವಿಶೇಷ.

ನೆಹ್ರಾ ತಂಡದಲ್ಲಿದ್ದಾಗ ನಾಯಕರಾಗಿದ್ದವರು

ಮಹಮ್ಮದ್‌ ಅಜರುದ್ದೀನ್‌

ಸೌರವ್‌ ಗಂಗೂಲಿ

ಇಂಜಮಾಮ್‌ ಉಲ್‌ ಹಕ್‌

ರಾಹುಲ್‌ ದ್ರಾವಿಡ್‌

ಮಹೇಂದ್ರಸಿಂಗ್‌ ದೋನಿ

ವೀರೇಂದ್ರ ಸೆಹ್ವಾಗ್‌

ಗೌತಮ್‌ ಗಂಭೀರ್‌

ವಿರಾಟ್‌ ಕೊಹ್ಲಿ

ಮಾಹಿತಿ: circleofcricket

ನೆಹ್ರಾ ಸಾಧನೆ

ಟೆಸ್ಟ್‌ -ಪಂದ್ಯ 17

ಎಸೆತ 3,447

ವಿಕೆಟ್‌ 44

ಉತ್ತಮ 117ಕ್ಕೆ6

ಸರಾಸರಿ 42.40

4 ವಿಕೆಟ್‌ 2

ಒಟ್ಟು ರನ್‌ 77

ಏಕದಿನ

ಪಂದ್ಯ 120

ಎಸೆತ 5,751

ವಿಕೆಟ್‌ 157

ಉತ್ತಮ 23ಕ್ಕೆ6

ಸರಾಸರಿ 31.72

4 ವಿಕೆಟ್‌ 5

5 ವಿಕೆಟ್‌ 2

ಒಟ್ಟು ರನ್‌ 141

ಟಿ–20

ಪಂದ್ಯ 26

ಎಸೆತ 564

ವಿಕೆಟ್‌ 34

ಉತ್ತಮ 19ಕ್ಕೆ3

ಸರಾಸರಿ 21.44

ಒಟ್ಟು ರನ್‌ 28

**********

ಫೆಬ್ರುವರಿ 1999 -ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ

2001 -ಏಕದಿನ ಮಾದರಿಗೆ ಪದಾರ್ಪಣೆ. ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಮೊದಲ ಪಂದ್ಯ ಆಡಿದ್ದರು.

2002 -ಇಂಗ್ಲೆಂಡ್‌ನಲ್ಲಿ ನಡೆದಿದ್ದ ನಾಟ್‌ವೆಸ್ಟ್‌ ಮತ್ತು ಶ್ರೀಲಂಕಾದಲ್ಲಿ ಜರುಗಿದ್ದ ಚಾಂಪಿಯನ್ಸ್‌ ಟ್ರೋಫಿಗಳಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ.

2003 -ಇಂಗ್ಲೆಂಡ್‌ ವಿರುದ್ಧದ ವಿಶ್ವಕಪ್‌ ‍ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್‌ (23ಕ್ಕೆ5) ಸಾಧನೆ

2005ರಲ್ಲಿ ಪಾದದ ನೋವಿನಿಂದಾಗಿ ತಂಡದಿಂದ ಹೊರಕ್ಕೆ.

2009–2011 -2009ರ ಜೂನ್‌ನಲ್ಲಿ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ಸ್ಥಾನ (ನಾಲ್ಕು ವರ್ಷಗಳ ನಂತರ)

2011ರ ವಿಶ್ವಕಪ್‌ನಲ್ಲಿ ಪ‍್ರಶಸ್ತಿ ಗೆದ್ದ ತಂಡದ ಸದಸ್ಯ.

2011–2015 -ರಾಷ್ಟ್ರೀಯ ತಂಡದಲ್ಲಿ ಅವಕಾಶ ವಂಚಿತ. ಆದರೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಉತ್ತಮ ಬೌಲಿಂಗ್‌ ಸಾಧನೆ

2017 -ಆಸ್ಟ್ರೇಲಿಯಾ ವಿರುದ್ಧದ ಟಿ–20 ಸರಣಿಯಲ್ಲಿ ಮತ್ತೆ ತಂಡದಲ್ಲಿ ಅವಕಾಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT