ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಂದ್ರೆ ಸ್ಮೃತಿ ಕವನ ರಚನಾ ಸ್ಪರ್ಧೆ: ಕವನಗಳ ಆಹ್ವಾನ

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ದ.ರಾ.ಬೇಂದ್ರೆ ಕಾವ್ಯ ಕೂಟವು ರಾಜ್ಯಮಟ್ಟದ ‘ದ.ರಾ.ಬೇಂದ್ರೆ ಸ್ಮೃತಿ ಕವನ ರಚನಾ ಸ್ಪರ್ಧೆ’ಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಿದೆ.

ರಾಜ್ಯದ ಯಾವುದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಮೊದಲು ಎಲ್ಲಿಯೂ ಪ್ರಕಟವಾಗದ ಕವನಗಳನ್ನು ಕಳುಹಿಸಬಹುದು. ಒಬ್ಬ ವಿದ್ಯಾರ್ಥಿ ಒಂದು ಕವನ ಕಳುಹಿಸಬಹುದು. ವಿದ್ಯಾರ್ಥಿ ಸ್ವವಿವರದೊಂದಿಗೆ ಆಯಾ ಕಾಲೇಜಿನ ಪ್ರಾಧ್ಯಾಪಕರಿಂದ ಪಡೆದ ಅಧಿಕೃತ ಪರಿಚಯ ಪತ್ರವನ್ನು ಲಗತ್ತಿಸಬೇಕು. ಕವನವನ್ನು ಕಾಗದದ ಒಂದು ಮಗ್ಗುಲಲ್ಲಿ ಮಾತ್ರ ಬರೆದಿರಬೇಕು.

ಆಸಕ್ತ ವಿದ್ಯಾರ್ಥಿಗಳು ನವೆಂಬರ್‌ 20ರೊಳಗೆ ಕವನವನ್ನು ಕಳುಹಿಸಬಹುದು. ಆಯ್ಕೆಯಾದ 3 ಕವನಗಳಿಗೆ ಕ್ರಮವಾಗಿ ₹ 4,000,₹ 3,000 ಮತ್ತು ₹ 2,000 ಬಹುಮಾನ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ: ಡಾ.ಜಿ.ಕೃಷ್ಣಪ್ಪ, ಅಧ್ಯಕ್ಷ, ದ.ರಾ. ಬೇಂದ್ರೆ ಕಾವ್ಯಕೂಟ, ಗುರುದತ್ತನಿಲಯ, 1ನೇ ತಿರುವು, ನೇತಾಜಿ ನಗರ, ಮತ್ತಿಕೆರೆ, ಬೆಂಗಳೂರು.

ಸಂಪರ್ಕ:9972109206

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT