ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಉಪನ್ಯಾಸ; ಪ್ರವೃತ್ತಿ ನೋಟು ಸಂಗ್ರಹ...

Last Updated 8 ಅಕ್ಟೋಬರ್ 2017, 8:48 IST
ಅಕ್ಷರ ಗಾತ್ರ

ನಾಪೋಕ್ಲು: ‌ಅವರ ಸಂಗ್ರಹದಲ್ಲಿ ವಿವಿಧ ದೇಶಗಳ ನೋಟುಗಳು, ಒಂದೇ ಮುಖಬೆಲೆಯ ಬಗೆಬಗೆ ನೋಟುಗಳು ಇವೆ. ಅವರು ವೃತ್ತಿಯಲ್ಲಿ ನೋಟು, ನಾಣ್ಯಗಳ ಸಂಗ್ರಹ ಮಾಡುವ ಹವ್ಯಾಸಿ ಅಲ್ಲ. ಉಪನ್ಯಾಸಕನಾಗಿ ವೃತ್ತಿ ಮಾಡುತ್ತಿರುವ ಕಿಗ್ಗಾಲು ಜಿ.ಹರೀಶ್‌ ಅವರ ವಿಶಿಷ್ಟ ಆಸಕ್ತಿ.

ಕಿಗ್ಗಾಲು ಗ್ರಾಮದಲ್ಲಿ ವಾಸವಾಗಿರುವ ಅವರು ಬಿಡುವಿನ ವೇಳೆಯಲ್ಲಿ ಸಂಗ್ರಹಿಸಿದ ವೈವಿಧ್ಯಮಯ ನಾಣ್ಯ ಹಾಗೂ ನೋಟುಗಳ ದೊಡ್ಡ ಸಂಗ್ರಹ ಇದೆ. ಮೂರ್ನಾಡಿನ ಪದವಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾಗಿರುವ ಅವರು ಹಲವು ವರ್ಷಗಳಿಂದ ದೇಶವಿದೇಶಗಳ ನಾಣ್ಯ, ನೋಟುಗಳ ಸಂಗ್ರಹದಲ್ಲಿ ತೊಡಗಿದ್ದಾರೆ.

ಡಾಲರ್‌, ಪೌಂಡ್‌, ಯೆನ್‌, ರೂಪಾಯಿಗಳ ಕರೆನ್ಸಿಗಳನ್ನು ಸಂಗ್ರಹಿಸಿದ್ದಾರೆ. ಕಾಲೇಜಿನಲ್ಲಿ ಬೋಧನೆಯ ಅವಧಿಯಲ್ಲೂ ವಿದ್ಯಾರ್ಥಿಗಳಿಗೆ ನಾಣ್ಯಗಳ ಪರಿಚಯ ಮಾಡಿಕೊಡುತ್ತಿದ್ದಾರೆ. ನಮ್ಮ ದೇಶದ ನೋಟುಗಳ ಸಂಗ್ರಹವೇ ಕುತೂಹಲ ಮೂಡಿಸುತ್ತದೆ.

ಹತ್ತು ರೂಪಾಯಿ ಮುಖಬೆಲೆಯ ಬಗೆಬಗೆ ನೋಟುಗಳು ಅವರ ಸಂಗ್ರಹದಲ್ಲಿವೆ. ನೋಟು ಅಮಾನ್ಯೀ ಕರಣ ಗೊಂಡ ಬಳಿಕ ₹ 500, 1,000 ಮುಖಬೆಲೆಯ ನೋಟುಗಳನ್ನೂ ಸಂಗ್ರಹಿಸಿದ್ದಾರೆ.

ಸ್ನೇಹಿತರಿಂದ ಬಂಧು–ಬಳಗದ ವರಿಂದ ಕೇಳಿ ಸಂಗ್ರಹಿಸುತ್ತಿರುವ ನಾಣ್ಯ, ನೋಟುಗಳ ಸಂಖ್ಯೆ ಸಾವಿರಕ್ಕೂ ಅಧಿಕವಿದೆ. ಹಳೆಯ ಕಾಲದ ನಾಣ್ಯಗಳಿಂದ ಹಿಡಿದು ಪ್ರಸ್ತುತ ಚಲಾವಣೆಯಲ್ಲಿರುವ ನಾಣ್ಯಗಳು, ವೈವಿಧ್ಯಮಯ ಚಿತ್ರಗಳುಳ್ಳ ನೊಟುಗಳ ಸಂಗ್ರಹವೇ ಇದೆ.

ಜತೆಗೆ ಸಿಗಾರ್‌ ಲೈಟ್‌ಗಳನ್ನೂ ಸಂಗ್ರಹಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅವರ ಪುತ್ರ ಭವಿಷ್ಯನಿಗೂ ಸಂಗ್ರಹ ಕಲೆ ಯನ್ನು ಹೇಳಿಕೊಟ್ಟಿದ್ದಾರೆ. ಭವಿಷ್ಯ ಸಂಗ್ರಹಿಸಿದ ವಿವಿಧ ಚಿತ್ರಗಳ ಬೆಂಕಿ ಪೊಟ್ಟಣಗಳ ಸಂಖ್ಯೆ ಕುತೂಹಲ ಮೂಡಿಸುತ್ತದೆ. ಸಾಹಿತ್ಯ ಕ್ಷೇತ್ರದಲ್ಲೂ ಹರೀಶ್‌ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT