ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ವೈರ್‌’ ಸುದ್ದಿತಾಣದ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ: ಪಿಯೂಷ್‌ ಗೋಯಲ್

Last Updated 8 ಅಕ್ಟೋಬರ್ 2017, 13:04 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ಪುತ್ರ ಜಯ್‌ ಶಾ ಕಂಪೆನಿಯ ಬಗ್ಗೆ ‘ದಿ ವೈರ್‌’ ಸುದ್ದಿತಾಣ ಆಧಾರ ರಹಿತ ಆರೋಪ ಮಾಡಿದೆ ಎಂದು ಆಪಾದಿಸಿರುವ ಬಿಜೆಪಿ, ವೆಬ್‌ಸೈಟ್‌ನ ಮಾಲೀಕರು, ಸಂಪಾದಕರು ಮತ್ತು ವರದಿ ಬರೆದವರ ವಿರುದ್ಧ ₹ 100 ಕೋಟಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದೆ.

ಜಯ್‌ ಶಾ ಬಗ್ಗೆ ವರದಿ ಪ್ರಕಟವಾದ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌, ‘ದಿ ವೈರ್‌ ಸುದ್ದಿತಾಣವು ನಮ್ಮ ಮುಖಂಡ ಅಮಿತ್‌ ಶಾ ಹಾಗೂ ಅವರ ಪುತ್ರ ಜಯ್‌ ಶಾ ಅವರ ಮಾನ ಹಾನಿ ಉದ್ದೇಶದಿಂದಲೇ ಈ ವರದಿ ಪ್ರಕಟಿಸಿದೆ. ಇದು ಸಂಪೂರ್ಣ ಸುಳ್ಳು ವರದಿ. ಈ ವರದಿಗೆ ಆಧಾರವಿಲ್ಲ’ ಎಂದಿದ್ದಾರೆ.

‘ದಿ ವೈರ್‌ ಸುದ್ದಿತಾಣದ ಮಾಲೀಕರು, ಸಂಪಾದಕರು ಮತ್ತು ವರದಿ ಬರೆದವರ ವಿರುದ್ಧ ಅಹ್ಮದಾಬಾದ್‌ ನ್ಯಾಯಾಲಯದಲ್ಲಿ ₹ 100 ಕೋಟಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಲು ಜಯ್‌ ಶಾ ನಿರ್ಧರಿಸಿದ್ದಾರೆ’ ಎಂದು  ಗೋಯಲ್‌ ಹೇಳಿದ್ದಾರೆ.

‘ಜಯ್‌ ಶಾ ವ್ಯವಹಾರ ಪಾರದರ್ಶಕವಾಗಿದೆ. ಅವರ ಕಂಪೆನಿ ಯಾವುದೇ ಅವ್ಯವಹಾರ ನಡೆಸಿಲ್ಲ. ಕಂಪೆನಿಯ ಲೆಕ್ಕಪತ್ರಗಳಲ್ಲಿ ಎಲ್ಲವೂ ಸ್ಪಷ್ಟವಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT