ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತಪದಿ ತುಳಿದ್ರು ಸಮಂತಾ– ನಾಗಚೈತನ್ಯ

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ನಾಗಚೈತನ್ಯ– ಸಮಂತಾ ರುತ್‌ ಪ್ರಭು ಈಗ ಸತಿಪತಿ. ಶುಕ್ರವಾರ ಗೋವಾದಲ್ಲಿ ಹಿಂದೂ ಸಂಪ್ರದಾಯದಂತೆ ನಡೆದ ವಿವಾಹ ಸಮಾರಂಭದಲ್ಲಿ ಈ ಮುದ್ದು ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಮದುವೆ ಸಮಾರಂಭಕ್ಕಾಗಿ ಸಮಂತಾ ಅವರು ನಾಗಚೈತನ್ಯ ಅವರ ಅಜ್ಜಿ ದಗ್ಗು ಬಾಟಿ ರಾಜೇಶ್ವರಿ ಅವರು ಉಡುಗೊರೆ ನೀಡಿದ ರೇಷ್ಮೆ ಸೀರೆಯನ್ನು ಉಟ್ಟಿದ್ದರೆ, ನಾಗಚೈತನ್ಯ ಕೆನೆ ಬಣ್ಣದ ರೇಷ್ಮೆ ಶರ್ಟ್‌ ಹಾಗೂ ಪಂಚೆಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದರು. ಈ ಮುದ್ದಾದ ಜೋಡಿಯ ಮದುವೆ ಫೋಟೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.

ಶನಿವಾರ ಗೋವಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ನಡೆದಿದೆ. ಈ ಸಮಾರಂಭಕ್ಕೆ ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರಿಗೂ ವಿಶೇಷ ವಿನ್ಯಾಸದ ಡ್ರೆಸ್ ಸಿದ್ಧಪಡಿಸಲಾಗಿತ್ತು. ಈ ಫೋಟೋಗಳನ್ನು ನಾಗಾರ್ಜುನ ತಮ್ಮ ಟ್ವಿಟ್ಟರ್‌, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು.

ಮದುವೆಯ ಹಿಂದಿನ ದಿನ ಅದ್ದೂರಿಯಾಗಿ ನಡೆದ ಮೆಹಂದಿ ಕಾರ್ಯಕ್ರಮದ ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ತಿಳಿನೀಲಿ ಬಣ್ಣದ ಲೆಹಂಗಾ ಹಾಗೂ ಅದೇ ಬಣ್ಣದ ಕುರ್ತಾದಲ್ಲಿ ಸಮಂತಾ– ನಾಗಚೈತನ್ಯ ಜೋಡಿ ಮಿಂಚಿತ್ತು. ಸಂಗೀತ ಕಾರ್ಯಕ್ರಮದಲ್ಲಿ ಸಮಂತಾ ಸ್ವತಃ ನೃತ್ಯ ಮಾಡಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT