ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಶ್–ಎ–ಮಹಮ್ಮದ್ ಸಂಘಟನೆ ಉಗ್ರ ಉಮರ್ ಖಾಲೀದ್‌ನನ್ನು ಹತ್ಯೆಗೈದ ಭದ್ರತಾ ಪಡೆ

Last Updated 9 ಅಕ್ಟೋಬರ್ 2017, 11:36 IST
ಅಕ್ಷರ ಗಾತ್ರ

ಶ್ರೀನಗರ: ಉಗ್ರರು ಮತ್ತು ಭದ್ರತಾ ನಡುವೆ ಜಮ್ಮು ಕಾಶ್ಮೀರದ ಲಡೋರಾದಲ್ಲಿ  ಗುಂಡಿನ ಚಕಮಕಿ ನಡೆದಿದ್ದು,  ಜೈಶ್–ಎ–ಮಹಮ್ಮದ್ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಉಮರ್ ಖಾಲೀದ್‌ನನ್ನು ಭದ್ರತೆ ಪಡೆ ಹತ್ಯೆಗೈದಿದೆ.

ಜೈಶ್–ಎ–ಮಹಮ್ಮದ್ ಕಮಾಂಡರ್ ಖಾಲೀದ್‌ ಸೋಮವಾರ ಬೆಳಿಗ್ಗೆ 9 ಗಂಟೆ ಸುಮಾರಿನಲ್ಲಿ  ಭದ್ರತಾ ಪಡೆ ಮೇಲೆ ದಾಳಿ ನಡೆಸಿದ್ದಾನೆ. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಭದ್ರತಾ ಪಡೆಯ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಜಮ್ಮುಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆ , ಸ್ಥಳೀಯ ಪೊಲೀಸರು ಹಾಗೂ ಸಿಆರ್‌ಪಿಎಫ್ ಪಡೆ ಜಂಟಿ ಕಾರ್ಯಾಚರಣೆಯಿಂದ ಉಗ್ರನನ್ನು ಹತ್ಯೆಗೈಯ್ಯಲಾಗಿದೆ ಎಂದು ಜಮ್ಮುಕಾಶ್ಮೀರದ ಎಸ್‌ಪಿ ವೈದ್ ಹೇಳಿದ್ದಾರೆ

ಕೆಲವು ದಿನಗಳ ಹಿಂದೆ ಜೈಶ್–ಎ–ಮಹಮ್ಮದ್ ಸಂಘಟನೆಯ ಖಾಲೀದ್ ಸಹಕಾರದಿಂದ 12 ಉಗ್ರರು  ಭಾರತದ ಗಡಿಯೊಳಗೆ ನುಸುಳಲು  ಪ್ರಯತ್ನಿಸಿದ್ದರು.

ಮತ್ತೊಂದು ದಾಳಿ:  ಜಮ್ಮು ಕಾಶ್ಮೀರದ ಬದ್ಗಾಮ್ ಜಿಲ್ಲೆಯ ದ್ರುಂಗ್ ಗ್ರಾಮದ ಮೇಲೆ ಭಾನುವಾರ ತಡರಾತ್ರಿ ದಾಳಿ ನಡೆಸಿದ ಉಗ್ರರು ಭಾರತೀಯ ಸೇನಾಧಿಕಾರಿ ರಾಜ್‌ ಕುಮಾರ್ ಎಂಬುವರನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT