ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಬದಲಾವಣೆಗೆ ಎಪ್ಸನ್‌ ನೆರವು

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದೃಶ್ಯ ಸಂವಹನ ಮತ್ತು ಪ್ರೊಜೆಕ್ಟರ್ ತಂತ್ರಜ್ಞಾನ ಬಳಕೆಯ ರಂಗದಲ್ಲಿ ಜಾಗತಿಕ ಮುಂಚೂಣಿ ಸಂಸ್ಥೆಯಾಗಿರುವ ಎಪ್ಸನ್‌, ಕಾರ್ಪೊರೇಟ್‌, ಸಣ್ಣ ಕೈಗಾರಿಕೆ, ಗೃಹ ಮನರಂಜನೆ ಮತ್ತು ಶಿಕ್ಷಣ ರಂಗದಲ್ಲಿ ಡಿಜಿಟಲ್‌ ತಂತ್ರಜ್ಞಾನದ ವ್ಯಾಪಕ ಬಳಕೆಗೆ ತನ್ನ ವೈವಿಧ್ಯಮಯ ಸಾಧನಗಳ ಮೂಲಕ ನೆರವಾಗುತ್ತಿದೆ.

ಕಾರ್ಪೊರೇಟ್‌ ಜಗತ್ತಿನಲ್ಲಿ ಸಭೆ – ಸಮ್ಮೇಳನಗಳಲ್ಲಿ ಸಚಿತ್ರ ಮಾಹಿತಿಗೆ ಬಳಕೆಯಾಗುತ್ತಿರುವ ಪ್ರೊಜೆಕ್ಟರ್‌ಗಳು ಈಗ ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಸ್‌ಎಂಬಿ), ಗೃಹ ಬಳಕೆ ಮತ್ತು ಶಿಕ್ಷಣ ರಂಗದಲ್ಲಿ ಹೆಚ್ಚಾಗಿ ಬಳಕೆಗೆ ಬರುತ್ತಿವೆ. ಇತರ ವಲಯಗಳಿಗೆ ಹೋಲಿಸಿದರೆ ಶಿಕ್ಷಣ ಮತ್ತು ಗೃಹ ಮನರಂಜನೆ ವಲಯದಲ್ಲಿ ಇವುಗಳ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಬೋಧಕ ಮತ್ತು ವಿದ್ಯಾರ್ಥಿಗಳ ಪರಸ್ಪರ ಸಂವಹನಕ್ಕೆ ನೆರವಾಗುವಲ್ಲಿ ಇಂಟರ‍್ಯಾಕ್ಟಿವ್‌ ಪ್ರೊಜೆಕ್ಟರ್‌ಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ.  ಅದರಲ್ಲೂ ಡಿಜಿಟಲ್‌ ಕಲಿಕೆ ಮತ್ತು ಸ್ಮಾರ್ಟ್‌ ಕ್ಲಾಸ್‌ರೂಂಗಳಲ್ಲಿ ಇವುಗಳ ಬಳಕೆ ಗಮನಾರ್ಹವಾಗಿ ಹೆಚ್ಚುತ್ತಿದೆ.

ಇತರ ಸಂಸ್ಥೆಗಳ ಡಿಎಲ್‌ಪಿ ತಂತ್ರಜ್ಞಾನಕ್ಕೆ ಹೋಲಿಸಿದರೆ ಎಪ್ಸನ್‌ ಸಂಸ್ಥೆಯ ತ್ರಿಎಲ್‌ಸಿಡಿ (3LCD)  ಪ್ರೊಜೆಕ್ಟರ್‌ಗಳು ವರ್ಣಗಳ ಪ್ರಖರತೆಯಲ್ಲಿ ಮೂರು ಪಟ್ಟುಗಳಷ್ಟು ಹೆಚ್ಚಿನ ಗುಣಮಟ್ಟದ ಫಲಿತಾಂಶ ನೀಡುತ್ತವೆ. ಇದರಿಂದ ಬಣ್ಣಗಳ ಖಚಿತತೆ ಮತ್ತು ವರ್ಣಗಳ ವಿಭಜನೆ ಇಲ್ಲದೇ ಸುಲಲಿತವಾಗಿ ಮಾಹಿತಿಯನ್ನು ಪರದೆ ಅಥವಾ ಯಾವುದೇ ಸಮತಟ್ಟಾದ ಗೋಡೆ, ಹಲಗೆ ಮೇಲೆ ಸ್ಪಷ್ಟವಾಗಿ ಬಿಂಬಿಸಲು ಸಾಧ್ಯವಾಗುತ್ತದೆ.

ತ್ರಿಎಲ್‌ಸಿಡಿ ತಂತ್ರಜ್ಞಾನವನ್ನು ಮೊದಲ ಬಾರಿಗೆ ಪರಿಚಯಿಸಿರುವ ಎಪ್ಸನ್‌, ಪ್ರೊಜೆಕ್ಟರ್‌ಗಳ ಜಾಗತಿಕ ಮಾರುಕಟ್ಟೆಯಲ್ಲಿ 16 ವರ್ಷಗಳಿಂದ  ಮೊದಲ ಸ್ಥಾನ ಕಾಯ್ದುಕೊಂಡಿದೆ. ಪ್ರೊಜೆಕ್ಟರ್‌ನಲ್ಲಿ ಎರಡು ಬಗೆಯ   ಡಿಎಲ್‌ಪಿ ಮತ್ತು ತ್ರಿಎಲ್‌ಸಿಡಿ  ಹೆಸರಿನ ತಂತ್ರಜ್ಞಾನಗಳಿವೆ. ಎಪ್ಸನ್‌ ಸಂಸ್ಥೆ ಭಾರತದಲ್ಲಿ ಶೇ 27.6  ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ (ಶೇ 35.5 ಮಾರುಕಟ್ಟೆ ಪಾಲು) ಇದೆ.

‘ದೇಶದಲ್ಲಿ ಪ್ರೊಜೆಕ್ಟರ್‌ಗಳ ಮಾರುಕಟ್ಟೆ ವಿಸ್ತರಣೆಗೆ ವಿಪುಲ ಅವಕಾಶಗಳು ಇವೆ. ಗ್ರಾಹಕರು ಗುಣಮಟ್ಟದ ಉತ್ಪನ್ನಕ್ಕಿಂತ ಬೆಲೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಡಿಎಲ್‌ಪಿ ಪ್ರೊಜೆಕ್ಟೆರ್‌ಗಳಿಗೆ ₹ 29 ಸಾವಿರ ಬೆಲೆ ಇದ್ದರೆ ಎಪ್ಸನ್‌ ಪ್ರೊಜೆಕ್ಟರ್‌ಗಳ ಬೆಲೆ ₹ 35 ಸಾವಿರದಿಂದ ಆರಂಭಗೊಳ್ಳುತ್ತದೆ.

‘ಸಂಸ್ಥೆಯ ಗೃಹ ನರಂಜನೆಯ ಪ್ರೊಜೆಕ್ಟರ್‌ಗಳ ಬೆಲೆ ₹ 64 ಸಾವಿರದಿಂದ ₹ 5 ಲಕ್ಷದವರೆಗೆ ಇದೆ. ಹೋಮ್‌ ಎಂಟರ್‌ಟೇನ್‌ಮೆಂಟ್‌ 64 ಸಾವಿರದಿಂದ 5 ಲಕ್ಷದವರೆಗೆ ಇದೆ. ಬಹುತೇಕ  ಬಳಕೆದಾರರಲ್ಲಿ   ಪ್ರೊಜೆಕ್ಟರ್‌ ಇದ್ದರೆ ಸಾಕು ಎನ್ನುವ ಮನೋಭಾವ ಇದೆ. ಗೃಹ ಮನರಂಜನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಡಿಜಿಟಲ್‌ ತಂತ್ರಜ್ಞಾನ ಕಾರಣದಿಂದ ಹೆಚ್ಚಿನ ಗುಣಮಟ್ಟದ ತ್ರಿಎಲ್‌ಸಿಡಿ ಪ್ರೊಜೆಕ್ಟರ್‌ಗಳ ಮಾರುಕಟ್ಟೆ ವಿಸ್ತರಿಸಲು ಸಂಸ್ಥೆ ಈಗ ಗಮನ ಕೇಂದ್ರೀಕರಿಸಿದೆ. ವಿತರಕರ ಮೂಲಕ ಮಾರಾಟ ಮಾಡಲು ಉತ್ತೇಜನ ನೀಡಲಾಗುತ್ತಿದೆ. ವಿತರಕರಿಗೆ ತಂತ್ರಜ್ಞಾನದ ಅರಿವು ಮೂಡಿಸಲು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುತ್ತದೆ ’ ಎಂದು ಎಪ್ಸನ್‌ ಇಂಡಿಯಾದ ದೃಶ್ಯ ಸಾಧನಗಳ ನಿರ್ದೇಶಕ ಪಿ. ಸತ್ಯನಾರಾಯಣ ಅವರು ಹೇಳುತ್ತಾರೆ.

‘ಬೋಧನೆ ಸಂದರ್ಭದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿ ಮಧ್ಯೆ ಪ್ರೊಜೆಕ್ಟರ್‌ ಬಳಸುವಾಗ ಪ್ರೊಜೆಕ್ಟರ್‌ನ ಬೆಳಕು ಬೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಡ್ಡಿಯಾಗಿ ಪರಿಣಮಿಸುತ್ತದೆ. ಈ ಸಮಸ್ಯೆ ದೂರ ಮಾಡಲು ಎಪ್ಸನ್‌ ಶಾರ್ಟ್‌ ಥ್ರೋ ಮತ್ತು ಅಲ್ಟ್ರಾ ಶಾರ್ಟ್‌ ಥ್ರೋ ತಂತ್ರಜ್ಞಾನದ ಪ್ರೊಜೆಕ್ಟರ್‌ಗಳನ್ನು ಪರಿಚಯಿಸಿದೆ.

‘ಇದರಿಂದ ಪ್ರೊಜೆಕ್ಟರ್‌ಗಳ ಬೆಳಕು,  ಬೋಧಕ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಬಗೆಯಲ್ಲಿ ಅಡ್ಡಿಯಾಗುವುದೇ ಇಲ್ಲ. ಈ ಪ್ರೊಜೆಕ್ಟರ್‌ಗಳ ಜೊತೆಗೆ ಒದಗಿಸುವ ವಿಶಿಷ್ಟ ಸಾಫ್ಟ್‌ವೇರ್‌ ನೆರವಿನಿಂದ ಬೋಧನೆ ಸಂದರ್ಭದಲ್ಲಿನ ಹೆಚ್ಚುವರಿ ವಿಚಾರಗಳು, ಮಾಹಿತಿ ತಿದ್ದುಪಡಿಗಳು  ಸ್ವಯಂಚಾಲಿತವಾಗಿ ನವೀಕರಣಗೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ತರಗತಿಯ ಬೋಧನೆಯಲ್ಲಿ ಹೊಸ ಬದಲಾವಣೆಗೆ ಎಪ್ಸನ್‌ ಕಾರಣವಾಗಿದೆ’ ಎಂದು  ಸತ್ಯನಾರಾಯಣ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT