ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಸುಲಭವಾಗಿ ಹುಡುಕಿ

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹುಡುಕಿದರೆ ಎಲ್ಲ ಸಿಗುತ್ತೆ. ಆದರೆ ಸರಿಯಾಗಿ ಹುಡುಕಬೇಕು. ಬುದ್ಧಿ ಉಪಯೋಗಿಸಿ ಹುಡುಕಬೇಕು. ಇಂದು ಪ್ರತಿಯೊಂದು ಮಾಹಿತಿಗೂ ಅಂತರ್ಜಾಲದ ಅವಲಂಬನೆ ಅನಿವಾರ್ಯವಾಗಿದೆ. ಗೂಗಲ್‌, ಫೇಸ್‌ಬುಕ್‌, ಟ್ವಿಟರ್‌, ಯೂಟ್ಯೂಬ್‌ ಹೀಗೆ ಪ್ರತಿ ಮಾಧ್ಯಮದಲ್ಲೂ ಸಮಾಚಾರ ಹುಡುಕುವುದಕ್ಕೆ ಉತ್ತಮ ಆಯ್ಕೆಗಳಿವೆ. ಅವುಗಳ ಮೇಲೆ ಸ್ವಲ್ಪ ಕಣ್ಣುಹಾಯಿಸಿ.

ಗೂಗಲ್ ಬ್ರಹ್ಮಾಂಡದಲ್ಲಿ ಹೀಗೆ ಹುಡುಕಿ
ಸಾಮಾನ್ಯವಾಗಿ ಯಾವುದೇ ಮಾಹಿತಿ ಬೇಕೆಂದರೂ ಗೂಗಲ್‌ ಮೊರೆ ಹೋಗುತ್ತೇವೆ. ಶೀಘ್ರ ಮತ್ತು ಉತ್ತಮ ಫಲಿತಾಂಶ ಬೇಕೆಂದರೆ google.com/advanced_searchನಲ್ಲಿ  ಹುಡುಕಿ. ನೀವು ಹುಡುಕಲು ಉದ್ದೇಶಿಸಿರುವ ವಿಷಯದ ವಿವಿರಗಳನ್ನು ಪ್ರದೇಶ, ಭಾಷೆ, ಫೈಲ್‌ ರೀತಿ, ಅದರಲ್ಲಿರುವ ಪದಗಳ ಅನುಸಾರ ಹುಡುಕಬಹುದು.

ವಿಡಿಯೋಗಳ ಖಜಾನೆ
ಪ್ರಸ್ತುತ ಯೂಟ್ಯೂಬ್‌ನಲ್ಲಿರುವ ವಿಡಿಯೋಗಳನ್ನೆಲ್ಲಾ ನಿರಂತರವಾಗಿ ನೋಡಿದರೂ ಪೂರ್ಣಗೊಳಿಸಲು ಸುಮಾರು 95 ವರ್ಷ ಬೇಕು! ಏಕೆಂದರೆ ಅದರಲ್ಲಿ ಸುಮಾರು 82ಕೋಟಿ ಗಂಟೆಗಳಷ್ಟು ಅವಧಿಯ ವಿಡಿಯೋಗಳು ಇವೆ. ಇದರಲ್ಲಿ ನಿಮಗಿಷ್ಟವಾದ ವಿಡಿಯೋ ನೋಡಲು ಸುಲಭ ಮತ್ತು ಉತ್ತಮ ಆಯ್ಕೆಗಳು  ಇವೆ. ಯುಟ್ಯೂಬ್‌ನಲ್ಲಿರುವ ಸರ್ಚ್‌ ಬಾರ್‌ನಲ್ಲಿ channel art ಎಂದು ಟೈಪ್ ಮಾಡಿದರೆ ಬಲಭಾಗದಲ್ಲಿ Filter ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ಕಿಸಿದರೆ ನಮಗೆ ಬೇಕೆನಿಸಿದ ಮಾಹಿತಿಯನ್ನು ಅವಧಿ, ಸಮಯ, ಗುಣಮಟ್ಟ ಹೀಗೆ ಹಲವು ವಿಧಾನಗಳ ಮೂಲಕ ಸುಲಭವಾಗಿ ಹುಡುಕಬಹುದು.

ಪುಸ್ತಕಗಳನ್ನು ಇಷ್ಟಪಡುವವರಿಗೆ
ಪುಸ್ತಕಗಳನ್ನು ಓದುವ ಹವ್ಯಾಸ ಇರುವವರಿಗೆ ಗೂಗಲ್ ಕಿಂಡಲ್‌ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಇದು ದೊಡ್ಡ ಪುಸ್ತಕ ಪ್ರಪಂಚ. ಇದರಲ್ಲಿ ನಿಮಗೆ ಬೇಕೆನಿಸಿದ ಮತ್ತು ಓದಲು ಉದ್ದೇಶಿಸಿರುವ ನಿರ್ದಿಷ್ಟ ಪುಟವನ್ನು ಬೇಗ ಹುಡುಕುವುದು ಕಷ್ಟ. ಇದರಲ್ಲೂ ಸುಲಭವಾಗಿ ಹುಡುಕುವುದಕ್ಕೆ ಉತ್ತಮ ಆಯ್ಕೆ ಇದೆ.

ಇದರಲ್ಲಿರುವ ಸರ್ಚ್‌ ಆಯ್ಕೆಯಲ್ಲಿ ಲೇಖಕರ ಹೆಸರು, ಪುಸ್ತಕದ ಹೆಸರು, ಪುಟಸಂಖ್ಯೆ ಹೀಗೆ ಹಲವು ಉಪ ಆಯ್ಕೆಗಳಿರುತ್ತವೆ. ಪುಟಗಳಲ್ಲಿರುವ ಅಕ್ಷರಗಳನ್ನು ಟೈಪ್‌ ಮಾಡಿಯೂ ಹುಡುಕಬಹುದು.

ಟ್ವಿಟರ್
ಪ್ರವಾಹದಂತೆ ಕ್ಷಣಕ್ಕೆ ಸಹಸ್ರ ಸಂಖ್ಯೆಯಲ್ಲಿ ಬರುವ ಟ್ವೀಟ್‌ಗಳಲ್ಲಿ ನಮಗೆ ಬೇಕೆನಿಸಿದ ಟ್ವೀಟ್‌ ಅನ್ನು ಹುಡುಕುವುದು ಕಷ್ಟ. #(ಆ್ಯಷ್‌) ಟ್ಯಾಗ್ ಹಾಕಿ ಹುಡುಕಿದರೂ ಒಮ್ಮೊಮ್ಮೆ ಸಿಗುವುದಿಲ್ಲ. ಇದಕ್ಕಾಗಿ ಇಲ್ಲಿಯೂ ಉತ್ತಮ ಆಯ್ಕೆ ಇದೆ.  twitter.com/search-advancedಗೇ ಭೇಟಿ ನೀಡಿದರೆ ಅಲ್ಲಿ ಹಲವು ಉಪ ಆಯ್ಕೆಗಳಿರುತ್ತವೆ. ಅವುಗಳ ಅನುಸಾರ ನಿಮಗೆ ಬೇಕೆನಿಸಿದ ಟ್ವೀಟ್‌ ಅನ್ನು ಸುಲಭವಾಗಿ ಹುಡುಕಬಹುದು. ಪ್ರದೇಶ, ದಿನಾಂಕ, ಭಾಷೆ, ಟ್ವೀಟ್ ಬರೆದ ವ್ಯಕ್ತಿಯ ಹೆಸರು ಇತ್ಯಾದಿ ವಿವರಗಳ ಮೂಲಕ ಟೈಪ್‌ ಮಾಡಬಹುದು.

ಫೇಸ್‌ಬುಕ್‌ನಲ್ಲಿ...
ಹತ್ತಾರು ನೋಟಿಫಿಕೇಶನ್ಸ್‌, ಸಹಸ್ರ ಸಂಖ್ಯೆಯಲ್ಲಿ ಪೋಸ್ಟ್‌ಗಳು ಫೇಸ್‌ಬುಕ್‌ನಲ್ಲಿ ನಿತ್ಯ ಬರುತ್ತವೆ. ನಿಮಗೆ ಬೇಕೆನಿಸಿದ ಪೋಸ್ಟ್‌ ಅನ್ನು ವ್ಯಕ್ತಿ ಅಥವಾ ವಿಷಯದ ಅನುಸಾರ ಹುಡುಕಬಹುದು. ಇನ್ನೂ ನಿಖರವಾಗಿ ಮತ್ತು ಸುಲಭವಾಗಿ ಹುಡುಕಬೇಕೆಂದರೆ ಫೇಸ್‌ಬುಕ್‌ನಲ್ಲಿ ಉತ್ತಮ ಆಯ್ಕೆ ಇದೆ. ಸರ್ಚ್‌ ಬಾರ್‌ಮೇಲೆ ಕ್ಲಿಕ್ಕಿಸಿದರೆ ಬಲಗಡೆ EDIT ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ಕಿಸಿ ಎಡಭಾಗದಲ್ಲಿ ಕಾಣಿಸುವ Filter ಆಯ್ಕೆ ಮೇಲೆ ಕ್ಲಿಕ್ಕಿಸಿ ಮಾಹಿತಿ ಹುಡುಕಬಹುದು. ಇದರಲ್ಲಿ ಪೋಸ್ಟ್‌ ಬರೆದ ಸ್ನೇಹಿತ, ದಿನಾಂಕ, ಪ್ರದೇಶ ಇತ್ಯಾದಿ ಉಪ ಆಯ್ಕೆಗಳ ಅನುಸಾರ ಹುಡುಕುವ ಸೌಲಭ್ಯವಿದೆ.

***

ಜಿಎಸ್‌ಟಿ ರೇಟ್‌ ಫೈಂಡರ್‌ ಆ್ಯಪ್
ಗ್ರಾಹಕರು ಮತ್ತು ಸಣ್ಣ ವ್ಯಾಪಾರಿಗಳ ಅನುಕೂಲಕ್ಕಾಗಿ ತೆಲಂಗಾಣ ಸರ್ಕಾರ ಜಿಎಸ್‌ಟಿ ದರ ಪಟ್ಟಿಯ ಆ್ಯಂಡ್ರಾಯಿಡ್‌ ಆ್ಯಪ್‌ ಅಭಿವೃದ್ಧಿಪಡಿಸಿದೆ.

ತೆಲುಗು ಭಾಷೆಯಲ್ಲಿ ಲಭ್ಯವಿರುವ ಈ ಆ್ಯಪ್‌ಗೆ ’ಜಿಎಸ್‌ಟಿ ರೇಟ್‌ ಫೈಂಡರ್‌’ ಎಂದು ಹೆಸರಿಡಲಾಗಿದೆ. ಗ್ರಾಹಕರು ಗೂಗಲ್‌ ಪ್ಲೇಸ್ಟೋರ್‌ ಮೂಲಕ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ದೇಶದ ಆರ್ಥಿಕ ಶಕ್ತಿಯನ್ನು ಉತ್ತಮ ಪಡಿಸಲು ಹಾಗೂ ಗ್ರಾಹಕರಿಗೆ ತೆರಿಗೆ ಹೊರೆಯನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿ ಹೆಚ್ಚು ಅನುಕೂಲವಾಗಿದೆ. ಸಣ್ಣ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಜಿಎಸ್‌ಟಿ ದರಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ತೆಲಂಗಾಣ ಸರ್ಕಾರ ಜಿಎಸ್‌ಟಿ ಆ್ಯಪ್‌ ವಿನ್ಯಾಸ ಮಾಡಿದೆ ಎಂದರು.

ಜಿಎಸ್‌ಟಿ ವ್ಯಾಪ್ತಿಗೆ ಬರುವ ಎಲ್ಲ ಸರಕುಗಳ ದರ ಪಟ್ಟಿ ಇಲ್ಲಿ ಲಭ್ಯವಿರುತ್ತದೆ. ಉದಾಹರಣೆಗೆ ಒಂದು ಸಣ್ಣ ಗುಂಡು ಸೂಜಿಯಿಂದ ಹಿಡಿದು ಲಕ್ಷಾಂತರ ರೂಪಾಯಿ ಬೆಲೆ ಇರುವ ಸರಕುಗಳ ದರ ಪಟ್ಟಿಯನ್ನು ಇದರಲ್ಲಿ ನೋಡಬಹುದು.

ಗೂಗಲ್‌ ಪ್ಲೇಸ್ಟೋರ್‌: GST Rate Finder Mobile App

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT