ಸೀಕ್ರೆಟ್ ಸೂಪರ್‌ಸ್ಟಾರ್‌ ಹಾಡು

ಇಷ್ಟ ಆದ್ರೆ ಲೈಕ್‌ ಮಾಡಿ, ಇಲ್ಲ ಅಂದ್ರೆ ಟೇಸ್ಟ್ ಬದಲಿಸಿ...

ಪಸಂದ್‌ ಆಯಾ ತೋ ಲೈಕ್‌ ಕರೋ, ಪಸಂದ್‌ ನಹೀ ಆಯಾ ತೋ ಟೇಸ್ಟ್‌ ಚೇಂಜ್‌ ಕರೋ..ಇದು ಸೀಕ್ರೆಟ್‌ ಸೂಪರ್‌ಸ್ಟಾರ್‌ ಹಾಡಿನ ವಿಡಿಯೊ ವೀಕ್ಷಿಸುವವರಿಗೆ ಆಮಿರ್‌ ಖಾನ್‌ ಹೇಳಿರುವ ಮಾತು.

ಬೆಂಗಳೂರು: ಪಸಂದ್‌ ಆಯಾ ತೋ ಲೈಕ್‌ ಕರೋ, ಪಸಂದ್‌ ನಹೀ ಆಯಾ ತೋ ಟೇಸ್ಟ್‌ ಚೇಂಜ್‌ ಕರೋ..(ಇಷ್ಟ ಆದ್ರೆ ಲೈಕ್‌ ಮಾಡಿ, ಇಷ್ಟ ಆಗಲಿಲ್ಲ ಅಂದ್ರೆ ಅಭಿರುಚಿ ಬದಲಿಸಿಕೊಳ್ಳಿ). ಇದು ಸೀಕ್ರೆಟ್‌ ಸೂಪರ್‌ಸ್ಟಾರ್‌ ಹಾಡಿನ ವಿಡಿಯೊ ವೀಕ್ಷಿಸುವವರಿಗೆ ಆಮಿರ್‌ ಖಾನ್‌ ಹೇಳಿರುವ ಮಾತು.

ಚಿತ್ರದಲ್ಲಿ ಸಂಗೀತ ನಿರ್ದೇಶಕ ಶಕ್ತಿ ಕುಮಾರ್‌ ಆಗಿ ಅಭಿನಯಿಸಿರುವ ಆಮಿರ್‌ ಖಾನ್‌ ಪಾತ್ರದ ಕುರಿತು ಸಾಕಷ್ಟು ನಿರೀಕ್ಷೆ ವ್ಯಕ್ತವಾಗಿದೆ. ಅವರ ಹೇರ್‌ ಸ್ಟೈಲ್, ಮಾತು ಹಾಗೂ ಕಾಸ್ಟ್ಯೂಮ್‌ ಗಮನ ಸೆಳೆಯುವಂತಿದೆ. ಬುಧವಾರ ಬಿಡುಗಡೆಯಾಗಿರುವ ಈ ಹಾಡಿನ ವಿಡಿಯೊದಲ್ಲಿ ಆಮಿರ್‌ ವಿಶಿಷ್ಟ ಮ್ಯಾನರಿಸಂ ಗಮನಿಸಬಹುದು.

ಚಿತ್ರರಂಗದ ಮಿ.ಪ್ಯಾಷನೇಟ್‌, ಮಿ.ಪರ್ಫೆಕ್ಷನಿಸ್ಟ್‌ ಎಂದೆಲ್ಲ ಹೆಸರಾಗಿ ನಟ ಆಮಿರ್‌ ಖಾನ್‌ ತಾನು ನಿರ್ವಹಿಸಿರುವ ಪಾತ್ರಗಳಲ್ಲಿ ಕೊಂಚ ಕ್ಲಿಷ್ಟವಾಗಿದ್ದು ಎಂದು ಹೇಳಿಕೊಂಡಿದ್ದರು. ಈ ಚಿತ್ರದ ಮೂಲಕ ಈವರೆಗೂ ಕಂಡಿರದ ವಿಭಿನ್ನ ಪಾತ್ರದಲ್ಲಿ ಆಮಿರ್‌ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಅದ್ವೈತ ಚಂದನ್ ನಿರ್ದೇಶನದ ಈ ಚಿತ್ರದಲ್ಲಿ ದಂಗಲ್ ಹುಡುಗಿ ಝಾಯಿರಾ ವಾಸಿಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕೌಸರ್ ಮುನೀರ್ ಬರೆದು ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿರುವ ಹಾಡುಗಳು ಈಗಾಗಲೇ ಜನಪ್ರಿಯಗೊಂಡಿವೆ.

ಸೀಕ್ರೆಟ್‌ ಸೂಪರ್‌ ದೀಪಾವಳಿ(ಅ.19)ಗೆ ತೆರೆ ಕಾಣಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೇರಿದಂತೆ ಆರು ಮಂದಿ ಲೈಂಗಿಕ ಕಿರುಕುಳ ನೀಡಿದ್ದರು: ಶೃತಿ ಹರಿಹರನ್‌

ಚರ್ಚಾ ಕಾರ್ಯಕ್ರಮ
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೇರಿದಂತೆ ಆರು ಮಂದಿ ಲೈಂಗಿಕ ಕಿರುಕುಳ ನೀಡಿದ್ದರು: ಶೃತಿ ಹರಿಹರನ್‌

19 Jan, 2018
ಮುದ್ದು ಮನಸಿನ ಕೃಷ್ಣಸುಂದರಿ

ವಿಭಿನ್ನ ಕಸರತ್ತು
ಮುದ್ದು ಮನಸಿನ ಕೃಷ್ಣಸುಂದರಿ

19 Jan, 2018
ಬಹುರೂಪಿ ಅಮ್ಮ

ಸಂದರ್ಶನ
ಬಹುರೂಪಿ ಅಮ್ಮ

19 Jan, 2018
ಪುಟ್ಮಲ್ಲಿಯ ಪುಟ್ಟ ಮಾತು

ನೃತ್ಯದ ಮೇಲೆ ಒಲವು
ಪುಟ್ಮಲ್ಲಿಯ ಪುಟ್ಟ ಮಾತು

19 Jan, 2018
ಸಮಯದ ಜತೆ ಸವಾಲಿನ ಕಥೆ

3 ಘಂಟೆ 30 ದಿನ 30 ಸೆಕೆಂಡ್
ಸಮಯದ ಜತೆ ಸವಾಲಿನ ಕಥೆ

19 Jan, 2018