ವಾಷಿಂಗ್ಟನ್

ಭೂಮಿಯನ್ನು ಬಳಸಿ ಹೋಗಲಿದೆ ಕ್ಷುದ್ರಗ್ರಹ

ಭೂಮಿಯಿಂದ 42 ಸಾವಿರ ಕಿ. ಮೀ. ದೂರದಲ್ಲಿ ಕ್ಷು‌ದ್ರಗ್ರಹವೊಂದು ಗುರುವಾರ ಹಾದುಹೋಗಲಿದೆ. 2012 ಟಿಸಿ4 ಹೆಸರಿನ ಕ್ಷುದ್ರಗ್ರಹವು 15ರಿಂದ 30 ಮೀಟರ್ ಸುತ್ತಳತೆ ಹೊಂದಿದೆ ಎನ್ನಲಾಗಿದೆ. ಆದರೆ ಇದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಾಷಿಂಗ್ಟನ್: ಭೂಮಿಯಿಂದ 42 ಸಾವಿರ ಕಿ. ಮೀ. ದೂರದಲ್ಲಿ ಕ್ಷು‌ದ್ರಗ್ರಹವೊಂದು ಗುರುವಾರ ಹಾದುಹೋಗಲಿದೆ. 2012 ಟಿಸಿ4 ಹೆಸರಿನ ಕ್ಷುದ್ರಗ್ರಹವು 15ರಿಂದ 30 ಮೀಟರ್ ಸುತ್ತಳತೆ ಹೊಂದಿದೆ ಎನ್ನಲಾಗಿದೆ. ಆದರೆ ಇದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಂಟಾರ್ಕ್ಟಿಕಾದ ಸನಿಹದಲ್ಲಿ ಗುರುವಾರ (ಅಕ್ಟೊಬರ್ 12) ಬೆಳಗ್ಗೆ 11:12ಕ್ಕೆ ಇದು ಹಾದುಹೋಗಲಿದೆ. ಜಾಗತಿಕ ವೀಕ್ಷಣಾ ಜಾಲವನ್ನು ಪರೀಕ್ಷೆಗೊಳಪಡಿಸಲು ಇದು ಸೂಕ್ತ ಅವಕಾಶ ಎಂದು ವಿಜ್ಞಾನಿಗಳು ಹೇಳಿದ್ದಾರೆ.

2012ರಲ್ಲಿ ಹವಾಯಿಯಲ್ಲಿರುವ ಪನೋರಮಿಕ್ ಸರ್ವೆ ಟೆಲಿಸ್ಕೋಪ್ ಮತ್ತು ರ‍್ಯಾಪಿಡ್ ರೆಸ್ಪಾನ್ಸ್ ಸಿಸ್ಟಮ್ (ಪ್ಯಾನ್–ಸ್ಟಾರ್ಸ್) ಮೂಲಕ ಇದನ್ನು ಪತ್ತೆಹಚ್ಚಲಾಗಿತ್ತು. ಇದು 2017ರಲ್ಲಿ ಭೂಮಿಯ ಸನಿಹ ಬರಲಿದೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದರು.

ಮುಂದಿನ 100 ವರ್ಷಗಳ ಕಾಲ ಭೂಮಿಯನ್ನು ಯಾವುದೇ ಕ್ಷುದ್ರಗ್ರಹಗಳು ಅಪ್ಪಳಿಸುವ ಸಾಧ್ಯತೆಯಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಪಾಕಿಸ್ತಾನದಲ್ಲಿ ಚರ್ಚ್‌ ಮೇಲೆ ಉಗ್ರರ ದಾಳಿ: 8 ಜನರ ಹತ್ಯೆ, 44 ಜನರಿಗೆ ಗಾಯ

ಆತ್ಮಾಹುತಿ ದಾಳಿ
ಪಾಕಿಸ್ತಾನದಲ್ಲಿ ಚರ್ಚ್‌ ಮೇಲೆ ಉಗ್ರರ ದಾಳಿ: 8 ಜನರ ಹತ್ಯೆ, 44 ಜನರಿಗೆ ಗಾಯ

17 Dec, 2017

2016ರಲ್ಲಿ ಜಾರಿಯಾದ ತೀರ್ಪಿಗೆ ಆಕ್ಷೇಪ
ಶಿಕ್ಷೆಗೆ ಗುರಿಯಾಗಿದ್ದ ನಾಯಿಗೆ ಜೀವದಾನ

12 ವರ್ಷದ ಬಾಲಕಿಯನ್ನು ಕಚ್ಚಿ ಮರಣದಂಡನೆಗೆ ಗುರಿಯಾಗಿದ್ದ ನಾಯಿಗೆ ಜೀವದಾನ ಸಿಕ್ಕಿದೆ. 2016ರ ಅಕ್ಟೋಬರ್‌ನಲ್ಲಿ ಸಂತಕ್ವಿನ್‌ ನಗರದ ನ್ಯಾಯಾಧೀಶರು ನಾಯಿಗೆ ಶಿಕ್ಷೆ ವಿಧಿಸಿದ್ದರು. ಇದಕ್ಕೆ...

17 Dec, 2017

ಅಮೆರಿಕದ ಅಧ್ಯಯನ ವರದಿ
ಗರ್ಭಿಣಿಯರಲ್ಲಿ ಮಧುಮೇಹ; ಮಗುವಿನ ಹೃದಯಕ್ಕೆ ಹಾನಿ

ಗರ್ಭ ಧರಿಸಿದ ಆರಂಭದ ಹಂತದಲ್ಲಿ ಕಂಡುಬರುವ ಮಧುಮೇಹದಿಂದಾಗಿ ಹುಟ್ಟುವ ಮಗುವಿನ ಹೃದಯಕ್ಕೆ ಹಾನಿಯಾಗುವ ಸಂಭವವಿರುತ್ತದೆ ಎಂದು ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಮೆಡಿಸಿನ್‌...

17 Dec, 2017
ಎಚ್‌1ಬಿ ವೀಸಾ ನಿಯಮ ಬದಲು ಪತ್ನಿ–ಪತಿಯ ಉದ್ಯೋಗಕ್ಕೆ ಕತ್ತರಿ?

ಭಾರತೀಯರಿಗೆ ತೊಂದರೆಯಾಗುವ ಸಾಧ್ಯತೆ
ಎಚ್‌1ಬಿ ವೀಸಾ ನಿಯಮ ಬದಲು ಪತ್ನಿ–ಪತಿಯ ಉದ್ಯೋಗಕ್ಕೆ ಕತ್ತರಿ?

17 Dec, 2017
ಚಂಡಮಾರುತ: ಫಿಲಿಪ್ಪೀನ್ಸ್‌ನಲ್ಲಿ ಮೂವರು ನಾಪತ್ತೆ

ಸಮರ್‌ ದ್ವೀಪದಲ್ಲಿ ಹಾನಿ
ಚಂಡಮಾರುತ: ಫಿಲಿಪ್ಪೀನ್ಸ್‌ನಲ್ಲಿ ಮೂವರು ನಾಪತ್ತೆ

17 Dec, 2017