ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಧ್ಯಾಪಕರ ವೇತನ ಹೆಚ್ಚಳ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಾಧ್ಯಾಪಕರ ವೇತನ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡುವ ಮೂಲಕ ದೀಪಾವಳಿಗೆ ಬಂಪರ್‌ ಕೊಡುಗೆ ನೀಡಿದೆ.

ಕೇಂದ್ರೀಯ ಮತ್ತು ರಾಜ್ಯಗಳಲ್ಲಿನ ವಿಶ್ವವಿದ್ಯಾಲಯಗಳು, ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪ್ರಾಧ್ಯಾಪಕರಿಗೆ ಹೊಸ ವೇತನ ಜಾರಿಯಾಗಲಿದೆ.

7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕರು ಮತ್ತು ಅವರಿಗೆ ಸರಿಸಮಾನ ಹುದ್ದೆಯಲ್ಲಿರುವ ಸಿಬ್ಬಂದಿಯ ವೇತನ ಹೆಚ್ಚಿಸಲಾಗಿದೆ. 7.58 ಲಕ್ಷ ಪ್ರಾಧ್ಯಾಪಕರಿಗೆ ಹೊಸ ವೇತನದಿಂದ ಅನುಕೂಲವಾಗಲಿದೆ. 2016ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಹೊಸ ವೇತನ ಜಾರಿಯಾಗಲಿದೆ.

‘ವಿಶ್ವವಿದ್ಯಾಲಯ ಅನುದಾನ ಆಯೋಗ ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಅನುದಾನ ಪಡೆಯುವ 106 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು, ರಾಜ್ಯ ಸರ್ಕಾರಗಳಿಂದ ಅನುದಾನ ಪಡೆಯುವ 329 ವಿಶ್ವವಿದ್ಯಾಲಯಗಳು ಹಾಗೂ 12,912 ಸರ್ಕಾರ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಅವರ ಸರಿಸಮಾನ ಹುದ್ದೆಯಲ್ಲಿರುವ ಸಿಬ್ಬಂದಿ ಹೊಸ ವೇತನದ ಲಾಭ ಪಡೆಯಲಿದ್ದಾರೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ಸಚಿವಾಲಯದ ಮೂಲಗಳ ಪ್ರಕಾರ ಹೊಸದಾಗಿ ನೇಮಕವಾದ ಸಹಾಯಕ ಪ್ರಾಧ್ಯಾಪಕರ ವೇತನ  ಪ್ರತಿ ತಿಂಗಳು ₹47ಸಾವಿರದಿಂದ 57ಸಾವಿರಕ್ಕೆ ಹೆಚ್ಚಳವಾಗಲಿದೆ. ಸಹಾಯಕ ಪ್ರಾಧ್ಯಾಪಕರ (ಗ್ರೇಡ್‌–2) ವೇತನ ಪ್ರತಿ ತಿಂಗಳು ₹56ಸಾವಿರದಿಂದ 68ಸಾವಿರಕ್ಕೆ  ಮತ್ತು  ಸಹಾಯಕ ಪ್ರಾಧ್ಯಾಪಕ (ಗ್ರೇಡ್‌–3) ವೇತನ ಪ್ರತಿ ತಿಂಗಳು ₹65ಸಾವಿರದಿಂದ 80ಸಾವಿರಕ್ಕೆ ಹೆಚ್ಚಳವಾಗಲಿದೆ.

ಸಹ ಪ್ರಾಧ್ಯಾಪಕರ ವೇತನ ಪ್ರತಿ ತಿಂಗಳು 1.07ಲಕ್ಷದಿಂದ 1.31 ಲಕ್ಷಕ್ಕೆ , ಪ್ರಾಧ್ಯಾಪಕರ ವೇತನ ₹1.16ರಿಂದ 1.44ಲಕ್ಷಕ್ಕೆ ಹೆಚ್ಚಳವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT