ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರುಷಿ ತಲ್ವಾರ್‌ ಪ್ರಕರಣ: ಅಂದಿನಿಂದ ಇಂದಿನವರೆಗೆ...

Last Updated 13 ಅಕ್ಟೋಬರ್ 2017, 9:09 IST
ಅಕ್ಷರ ಗಾತ್ರ

ಮೇ 16, 2008
ನೊಯಿಡಾದ ಜಲ್‌ವಾಯು ವಿಹಾರ್‌ನ ಎಲ್‌–32 ಸಂಖ್ಯೆಯ ಫ್ಲ್ಯಾಟ್‌ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ 14 ವರ್ಷ ಆರುಷಿ ತಲ್ವಾರ್‌ ಶವ ಪತ್ತೆ

ಮೇ 17, 2008
ಎಲ್‌–32 ಸಂಖ್ಯೆಯ ಫ್ಲ್ಯಾಟ್‌ನ ತಾರಸಿಯಲ್ಲಿ ಮನೆ ಕೆಲಸದ ಸಹಾಯಕ ಹೇಮರಾಜ್‌ ಶವ ಪತ್ತೆ

ಮೇ 18, 2008
‘ಇಬ್ಬರನ್ನೂ ಶಸ್ತ್ರಚಿಕಿತ್ಸೆಗೆ ಬಳಸುವ ಕತ್ತಿಯಿಂದ ಕೊಲೆ ಮಾಡಲಾಗಿದೆ’ ಎಂದ ನೊಯಿಡಾ ಪೊಲೀಸರು
ವೈದ್ಯ ದಂಪತಿ ರಾಜೇಶ್‌– ನೂಪುರ್‌ ಮೇಲೆ ಪೊಲೀಸರ ಅನುಮಾನ

ಮೇ 19, 2008
ಈ ಹಿಂದೆ ಮನೆ ಕೆಲಸದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ವಿಷ್ಣು ಶರ್ಮಾ ಮೇಲೆ ಪೊಲೀಸರ ಶಂಕೆ

ಮೇ 21. 2008
ತನಿಖೆಗೆ ಕೈಜೋಡಿಸಿದ ದೆಹಲಿ ಪೊಲೀಸರು

ಮೇ 22, 2008
ಇದೊಂದು ಮರ್ಯಾದಾ ಹತ್ಯೆ ಎಂದು ಪೊಲೀಸರ ಶಂಕೆ
ಆರುಷಿ ಸ್ನೇಹಿತರ ಹೇಳಿಕೆ ಪಡೆದ ಪೊಲೀಸರು
ಆರುಷಿ ಪೋಷಕರ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು

ಮೇ 23, 2008
ಜೋಡಿ ಕೊಲೆ ಆರೋಪದ ಮೇಲೆ ಆರುಷಿ ತಂದೆ ರಾಜೇಶ್‌ ತಲ್ವಾರ್‌ ಬಂಧನ

ಜೂನ್ 1, 2008
ನೊಯಿಡಾ ಪೊಲೀಸರಿಂದ ಸಿಬಿಐಗೆ ವರ್ಗಾವಣೆಗೊಂಡ ಪ್ರಕರಣ

9ನೇ ತರಗತಿಯಲ್ಲಿ ಓದುತ್ತಿದ್ದ ಆರುಷಿ, 45 ವರ್ಷದ ಹೇಮರಾಜ್‌ ಜೊತೆ ದೈಹಿಕ ಸಂಬಂಧ ಹೊಂದಿದ್ದ ಶಂಕೆಯ ಮೇಲೆ ಪೋಷಕರೇ ಮರ್ಯಾದಾ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಸಿಬಿಐ

ಜೂನ್‌ 13, 2008
ರಾಜೇಶ್‌ ತಲ್ವಾರ್‌ ಸಹಾಯಕ ಕೃಷ್ಣ ಬಂಧನ

ಜೂನ್‌ 20, 2008
ರಾಜೇಶ್‌ ತಲ್ವಾರ್‌ಗೆ ಸುಳ್ಳು ಪತ್ತೆ ಪರೀಕ್ಷೆ

‌ಜೂನ್‌ 25, 2008
ಆರುಷಿ ತಾಯಿ ನೂಪುರ್‌ ತಲ್ವಾರ್‌ಗೆ ಸುಳ್ಳು ಪತ್ತೆ ಪರೀಕ್ಷೆ

ಜೂನ್‌ 26, 2008
ರಾಜೇಶ್‌ ತಲ್ವಾರ್‌ ಜಾಮೀನು ಅರ್ಜಿ ವಜಾಗೊಳಿಸಿದ ಗಾಜಿಯಾಬಾದ್‌ ನ್ಯಾಯಾಲಯ

ಜುಲೈ 12, 2008
ರಾಜೇಶ್‌ ತಲ್ವಾರ್‌ಗೆ ಜಾಮೀನು ಮಂಜೂರು

ಡಿಸೆಂಬರ್‌ 29, 2009
ತಲ್ವಾರ್‌ ದಂಪತಿ ಪ್ರಮುಖ ಆರೋಪಿಗಳು ಎಂದ ಸಿಬಿಐ ವರದಿ
ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ‘ಅನುಮಾನದ ಆಧಾರದ ಮೇಲೆ’ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಸಿಬಿಐ
ಸಹಾಯಕನ ವಿರುದ್ಧದ ಆರೋಪಗಳನ್ನು ಕೈಬಿಟ್ಟ ತನಿಖಾಧಿಕಾರಿಗಳು

ಜನವರಿ 25, 2011
ಗಾಜಿಯಾಬಾದ್‌ನ ಸಿಬಿಐ ನ್ಯಾಯಾಲಯ ಸಂಕೀರ್ಣದಲ್ಲಿ ರಾಜೇಶ್‌ ತಲ್ವಾರ್‌ ಮೇಲೆ ಉತ್ಸವ್‌ ಶರ್ಮಾ ಎಂಬಾತನಿಂದ ಹಲ್ಲೆ

ಫೆಬ್ರುವರಿ 9, 2011
ಕೊಲೆ ಆರೋಪದ ಮೇಲೆ ಆರುಷಿ ಪೋಷಕರಿಗೆ ಸಮನ್ಸ್‌ ಜಾರಿಗೊಳಿಸಿದ ವಿಚಾರಣಾ ನ್ಯಾಯಾಲಯ

ಫೆಬ್ರುವರಿ 21, 2011
ವಿಚಾರಣಾ ನ್ಯಾಯಾಲಯದ ಸಮನ್ಸ್‌ ಅನ್ನು ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ತಲ್ವಾರ್‌ ದಂಪತಿ

ಮಾರ್ಚ್‌ 18, 2011
ತಲ್ವಾರ್ ದಂಪತಿಯ ಮನವಿ ಅರ್ಜಿಯನ್ನು ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್‌

ಮಾರ್ಚ್‌ 19, 2011
ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ತಲ್ವಾರ್‌ ದಂಪತಿ

ಜನವರಿ 09, 2012
ವಿಚಾರಣಾ ನ್ಯಾಯಾಲಯ ರಾಜೇಶ್‌ ತಲ್ವಾರ್‌ಗೆ ಮಂಜೂರು ಮಾಡಿದ್ದ ಜಾಮೀನು ಅವಧಿಯನ್ನು ವಿಸ್ತರಿಸಿದ ಸುಪ್ರೀಂಕೋರ್ಟ್‌
ಪತ್ನಿ ನೂಪುರ್‌ ತಲ್ವಾರ್‌ ಜತೆಗೆ ಫೆಬ್ರುವರಿ 4ರಂದು ಗಾಜಿಯಾಬಾದ್‌ನ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ

ನವೆಂಬರ್‌ 25, 2013
ತಲ್ವಾರ್ ದಂಪತಿ ತಪ್ಪಿತಸ್ಥರು ಎಂದು ತೀರ್ಪು ನೀಡಿದ ಗಾಜಿಯಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ

ನವೆಂಬರ್‌ 26, 2013
ರಾಜೇಶ್‌ ತಲ್ವಾರ್‌ ಮತ್ತು ನೂಪುರ್ ತಲ್ವಾರ್‌ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಗಾಜಿಯಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ

ಜನವರಿ 21, 2014
ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ತಲ್ವಾರ್‌ ದಂಪತಿ

ಅಕ್ಟೋಬರ್‌ 12, 2017
ಪ್ರಕರಣದಲ್ಲಿ ತಲ್ವಾರ್‌ ದಂಪತಿ ಖುಲಾಸೆಗೊಳಿಸಿದ ಅಲಹಾಬಾದ್‌ ಹೈಕೋರ್ಟ್‌
‘ಅನುಮಾನದ ಆಧಾರದ ಮೇಲೆ ತಲ್ವಾರ್‌ ದಂಪತಿ ದೋಷಿಗಳು ಎನ್ನಲಾಗದು’ ಎಂದ ನ್ಯಾಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT