ಮಹಿಳೆಯರಲ್ಲೂ ಹೀಗಾದಾಗ...

ಮಹಿಳೆಯರಲ್ಲಿ ಲೈಂಗಿಕ ಸಮಸ್ಯೆಗಳು ಕಾಣಿಸಿಕೊಂಡರೂ ಅದನ್ನು ನಿರ್ಲಕ್ಷ್ಯಿಸುವವರೇ ಹೆಚ್ಚು. ವೈದ್ಯರ ಬಳಿ ಈ ವಿಷಯದ ಕುರಿತು ಮುಕ್ತವಾಗಿ ಮಾತನಾಡುವವರೂ ಕಡಿಮೆಯೇ...

ಮಹಿಳೆಯರಲ್ಲೂ ಹೀಗಾದಾಗ...

ಲೈಂಗಿಕ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರ ಪೈಕಿ ಶೇ. 30–40ರಷ್ಟು (ವಯಸ್ಸನ್ನು ಅವಲಂಬಿಸಿ) ಮಹಿಳೆಯರಲ್ಲಿ ನಿರುತ್ಸಾಹ ಅತಿ ಮುಖ್ಯ ಕಾರಣವಾಗಿರುತ್ತದೆ. ಅದರಲ್ಲೂ ಕಿರಿಯ ವಯಸ್ಸಿನ ಮಹಿಳೆಯರಲ್ಲಿ ಈ ಪ್ರಮಾಣ ಹೆಚ್ಚು. ಆದರೆ ಇದರಲ್ಲಿ ಗಮನಿಸಬೇಕಾದ ಮತ್ತೂ ಒಂದು ಅಂಶವೆಂದರೆ, ಮಾನಸಿಕ ಒತ್ತಡಕ್ಕೆ ಒಳಗಾದ ಮಹಿಳೆಯರೇ ಈ ಸಮಸ್ಯೆಗೆ ಒಳಗಾಗುವುದು ಎಂಬುದು.

ಇಂಥ ಮಾನಸಿಕ ಕಾರಣಗಳಿಂದಾಗಿಯೇ ಹಲವು ಬಾರಿ ಮಹಿಳೆಯರು ಲೈಂಗಿಕ ಚಟುವಟಿಕೆಯಿಂದ ದೂರ ಉಳಿಯುತ್ತಾರೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭಾವಿಸುತ್ತಾರೆ.

ಸೂಕ್ತ ರೀತಿಯಲ್ಲಿ ಪುರುಷರು ಲೈಂಗಿಕ ಚಟುವಟಿಕೆಯಲ್ಲಿ ನಿರತರಾದರೆ ಮಹಿಳೆಯರಿಗೆ ಸಮಸ್ಯೆ ಎನ್ನಿಸುವಂಥ ಯಾವುದೇ ಕಾರಣವಿಲ್ಲ ಎಂಬುದು ಹಲವರ ನಂಬಿಕೆ. ಆದರೆ ನಿಜ ಏನೆಂದರೆ, ಕೆಲವು ವೇಳೆ, ದೇಹದ ಇನ್ನಿತರ ಭಾಗಗಳಂತೆ, ಜನನಾಂಗದ ಕಾರ್ಯನಿರ್ವಹಣೆಯಲ್ಲೂ (ಅದರಲ್ಲೂ ಮಗು ಜನಿ ಸಿದ ನಂತರ) ತೊಂದರೆಯಾಗುತ್ತದೆ ಎಂಬುದು.

ಲೈಂಗಿಕ ತೃಪ್ತಿ ಹೊಂದುವಲ್ಲಿ ಮಹಿಳೆಯರಿಗೆ ಇರುವ ಐದು ತೊಡಕುಗಳು:
ಪ್ರಚೋದಕ ಸಮಸ್ಯೆ: ಈ ಸಮಸ್ಯೆಯಿರುವ ಮಹಿಳೆಯರಿಗೆ ಲೈಂಗಿಕತೆಯಲ್ಲಿ ಆಸಕ್ತಿಯಿದ್ದರೂ ಪ್ರಚೋದನೆಯ ಕೊರತೆಯಿಂದ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೇ ಇರುವುದು.

ಹೈಪೊ ಆ್ಯಕ್ಟಿವ್ ಡಿಸೈರ್ ಡಿಸಾರ್ಡರ್: ಲೈಂಗಿಕತೆಯಲ್ಲಿ ಆಸಕ್ತಿ ಕಡಿಮೆ ಇರುವುದನ್ನು ಹೀಗೆನ್ನಬಹುದು. ಸುಮಾರು ಶೇ. 10ರಷ್ಟು ಮಹಿಳೆಯರು ಈ ಸಮಸ್ಯೆಗೆ ಒಳಗಾಗಿರುತ್ತಾರೆ. ಆದರೆ ಇದು ದಿನನಿತ್ಯದ ಜೀವನದಲ್ಲಿ ಯಾವುದೇ ತೊಂದರೆ ಉಂಟುಮಾಡದಿದ್ದರೆ ಇದನ್ನು ಸಮಸ್ಯೆ ಎಂದು ಪರಿಗಣಿಸಲಾಗದು. ಆದರೆ ಲೈಂಗಿಕ ನಿರಾಸಕ್ತಿ, ಸಂಭೋಗದ ಸುಖವನ್ನು ಕಸಿಯುವುದು ಮಾತ್ರವಲ್ಲ, ಉತ್ತಮ ಲೈಂಗಿಕ ಚಟುವಟಿಕೆ ತರಬಹುದಾದ ದೈಹಿಕ ಶಕ್ತಿ, ಆತ್ಮವಿಶ್ವಾಸ, ಒತ್ತಡ ನಿವಾರಣೆ, ಒಟ್ಟಾರೆ ಆರೋಗ್ಯದ ಲಾಭವನ್ನೂ ಕಡಿಮೆ ಮಾಡುತ್ತದೆ.

ಮಹಿಳೆಯರಲ್ಲಿ ಉದ್ರೇಕದ ಸಮಸ್ಯೆ: 20ರಲ್ಲಿ ಒಬ್ಬರಿಗೆ, ಅಂದರೆ ಶೇ. 5ರಷ್ಟು ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಲೈಂಗಿಕ ಚಟುವಟಿಕೆ ಸಮಯದಲ್ಲಿ ಉದ್ರೇಕಗೊಂಡರೂ ಸಂಭೋಗದ ಸಮಯದಲ್ಲಿ ಕಷ್ಟವಾಗುತ್ತದೆ. ಇದು ಲೈಂಗಿಕ ಒತ್ತಡವನ್ನು ತರುತ್ತದೆ. ಇದೇ ಕಾರಣ ಲೈಂಗಿಕ ಚಟುವಟಿಕೆಯಿಂದ ದೂರ ಉಳಿಯುವಂತೆ ಮಾಡುತ್ತದೆ.

ಡಿಸ್ಪೆರೇನುಯಿಯಾ (ಸಂಭೋಗದ ಸಮಯದಲ್ಲಿ ನೋವು): ಈ ಸಮಸ್ಯೆ ಇರುವವರಲ್ಲಿ ಸಂಭೋಗದ ಸಮಯದಲ್ಲಿ ಅತಿಯಾದ ನೋವು ಅನುಭವಕ್ಕೆ ಬರುತ್ತದೆ. ಹತ್ತರಲ್ಲಿ ಒಬ್ಬರಿಂದ ಐದರಲ್ಲಿ ಒಬ್ಬ ಮಹಿಳೆಗೆ ಈ ಸಮಸ್ಯೆ ಕಂಡುಬರುತ್ತದೆ. (ಆಬ್ಸೆಸ್ಟ್ರಿಕ್ಸ್ ಅಂಡ್ ಗೈನೆಕಾಲಜಿ 2011 ವರದಿ).

ಜನನಾಂಗದ ಅಸಾಮರಸ್ಯವೂ ಸಂಭೋಗದ ಸಮಸ್ಯೆ ಹಾಗೂ ಸಂಭೋಗದ ಸಮಯದಲ್ಲಿನ ತೀವ್ರ ನೋವಿಗೆ ಕಾರಣವಾಗುತ್ತದೆ. ಇದು ಲೈಂಗಿಕ ಚಟುವಟಿಕೆಯೆಡೆಗೆ ನಿರಾಸಕ್ತಿಯನ್ನು ಮೂಡಿಸುತ್ತದೆ.

ಈ ನಾಲ್ಕು ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರ ಸಂಖ್ಯೆ ಶೇ.30–40ರವರೆಗೂ ಮುಟ್ಟಿದೆ. ಇನ್ನೂ ಚಿಂತಿತ ವಿಷಯವೆಂದರೆ, ಈ ಸಮಸ್ಯೆಗಳೇ ವಿಚ್ಛೇದನಕ್ಕೂ ಎಡೆಮಾಡಿಕೊಡುವುದಲ್ಲದೆ ಇನ್ನಿತರ ಸಾಮಾಜಿಕ ತೊಂದರೆಗಳನ್ನು ತಂದೊಡ್ಡುವುದು.

ಕೆಲವು ಸಂಶೋಧನೆಗಳ ಪ್ರಕಾರ, ಕೇವಲ ಶೇ. 14 ಮಹಿಳೆಯರು ತಮ್ಮ ವೈದ್ಯರ ಬಳಿ ಲೈಂಗಿಕ ಸಮಸ್ಯೆಗಳ ಕುರಿತು ಚರ್ಚಿಸುತ್ತಾರೆ. ಹತ್ತರಲ್ಲಿ ನಾಲ್ಕು ಮಂದಿ ಈ ಸಮಸ್ಯೆಗಳಿಂದ ಬಳಲಿದರೆ, ಅದರಲ್ಲಿ ಒಬ್ಬರು ಮಾತ್ರ ತಮ್ಮ ಸಮಸ್ಯೆ ಕುರಿತು ವೈದ್ಯರಲ್ಲಿ ಮುಕ್ತವಾಗಿ ಮಾತನಾಡಬಲ್ಲರು ಎಂದಿದೆ, ‘ಪ್ರಾಕ್ಟೀಸ್ ಬುಲೆಟಿನ್ ಇನ್ ಆಬ್ಸೆಸ್ಟ್ರಿಕ್ಸ್ ಅಂಡ್ ಗೈನಕಾಲಜಿ’. ಇದಕ್ಕೆ ಕಾರಣವೂ ಇದೆ. ಈ ವರದಿಯ ಪ್ರಕಾರ, ಸಾಬೀತಾದ ಕೆಲವೇ ಚಿಕಿತ್ಸೆಗಳು ಲಭ್ಯವಿರುವುದು.

ಈ ರೀತಿಯ ಸಮಸ್ಯೆಗಳಿಗೆ ‘ವ್ಯಾಗಿನಲ್ ಈಸ್ಟ್ರೋಜನ್’ ಅಥವಾ ‘ಟೆಸ್ಟೊಸ್ಟೆರೋನ್’, ‘ಸೈಕೊಥೆರಪಿ’ಯಂಥ ಚಿಕಿತ್ಸೆಗಳು ಲಭ್ಯವಿವೆ. ಆದರೆ ಹಾರ್ಮೋನು ಥೆರಪಿಯಲ್ಲೂ ಸಿಗುವ ಫಲಿತಾಂಶ ಅಲ್ಪಾವಧಿಯದ್ದು. ಅಮೆರಿಕನ್ ಕಾಲೇಜ್ ಆಫ್ ಆಬ್ಸೆಸ್ಟ್ರಿಕ್ಸ್ ಅಂಡ್ ಗೈನಕಾಲಜಿ ಪ್ರಕಾರ, ಸೈಕೊ ಸೋಷಿಯಲ್ ಥೆರಪಿ ಚಿಕಿತ್ಸೆ ಸದ್ಯಕ್ಕೆ ಹೆಚ್ಚು ಸುದ್ದಿಯಲ್ಲಿರುವುದು.

(ಮುಂದುವರೆಯುವುದು)

Comments
ಈ ವಿಭಾಗದಿಂದ ಇನ್ನಷ್ಟು

ಆರೋಗ್ಯ
ಯಶಸ್ಸಿನ ಬೆನ್ನೇರಿ...

ಅನೇಕ ಮಹಾಸಾಧಕರ ಜೀವನಚರಿತ್ರೆಯನ್ನು ನೋಡಿ; ಅವರಲ್ಲಿ ಯಾರು ಕೂಡ ಸುಲಭವಾಗಿ ಯಶಸ್ಸಿನ ಉತ್ತುಂಗಕ್ಕೇರಿದ ನಿದರ್ಶನಗಳಿಲ್ಲ. ಆದರೆ ಅವರು ಸಾಧನೆಯ ಹಾದಿಯಲ್ಲಿ ಎದುರಿಸಿದ ಕಷ್ಟಗಳನ್ನು ದೊಡ್ಡದಾಗಿ...

17 Jan, 2018
‘ಶ್ರದ್ಧೆಯೇ ಮದ್ದು’

ಆರೋಗ್ಯ
‘ಶ್ರದ್ಧೆಯೇ ಮದ್ದು’

17 Jan, 2018
ಕೃತಕ ವೀರ್ಯ ಸೃಷ್ಟಿ: ಸಂಶೋಧನೆಯ ಹಾದಿ...

ಅಂಕುರ
ಕೃತಕ ವೀರ್ಯ ಸೃಷ್ಟಿ: ಸಂಶೋಧನೆಯ ಹಾದಿ...

13 Jan, 2018
ನಾರಿನ ಮಹತ್ವಕ್ಕೆ ಮತ್ತಷ್ಟು ಒತ್ತು

ಆಹಾರ ಆರೋಗ್ಯ
ನಾರಿನ ಮಹತ್ವಕ್ಕೆ ಮತ್ತಷ್ಟು ಒತ್ತು

13 Jan, 2018
ಮರಳಿದೆ ಸಂಕ್ರಾಂತಿ

ಆಚರಣೆ
ಮರಳಿದೆ ಸಂಕ್ರಾಂತಿ

13 Jan, 2018