ಗುರುವಾರ, 28 ಮಾರ್ಚ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಗ್ರರು ನನ್ನ ಶಿಶುವನ್ನು ಕೊಂದು, ಹೆಂಡತಿಯ ಮೇಲೆ ಅತ್ಯಾಚಾರವೆಸಗಿದ್ದರು’: ಕೆನಡಾ ಪ್ರಜೆಯ ನೋವಿನ ಮಾತು

Last Updated 15 ಅಕ್ಟೋಬರ್ 2017, 10:21 IST
ಅಕ್ಷರ ಗಾತ್ರ

ಟೊರೆಂಟೋ: ಆಫ್ಘಾನಿಸ್ತಾನ ಮೂಲದ ತಾಲೀಬನ್‌ ಉಗ್ರ ಸಂಘಟನೆಯ ಒತ್ತೆಯಾಳಾಗಿದ್ದ ವೇಳೆ ಉಗ್ರರು ತಮ್ಮ ಶಿಶುವನ್ನು ಕೊಂದು ಹೆಂಡತಿಯ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಕೆನಡಾ ಪ್ರಜೆ ಜೋಶುವಾ ಬೋಯ್ಲೆ ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದಾರೆ.

ಅಮೆರಿಕ ಸಂಜಾತ ಹೆಂಡತಿ ಕೈಟ್ಲಾನ್‌ ಕೋಲ್ಮಾನ್‌ ಹಾಗೂ ತಮ್ಮ ಮೂವರು ಮಕ್ಕಳೊಂದಿಗೆ ಕಳೆದ ಐದು ವರ್ಷಗಳಿಂದ ಉಗ್ರರ ಸೆರೆಯಲ್ಲಿದ್ದರು. ಪಾಕಿಸ್ತಾನ ಸೇನೆ ತನ್ನ ಗಡಿಯ ವಾಯುವ್ಯ ಭಾಗದಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿ ಕುಟುಂಬವನ್ನು ರಕ್ಷಿಸಿದೆ.

ಕುಟುಂಬದೊಡನೆ ಶುಕ್ರವಾರ ತಡರಾತ್ರಿ ಕೆನಡಾ ತಲುಪಿದ ಜೋಶುವಾ, ‘ಪ್ರವಾಸಿಗರನ್ನು ಅಪಹರಿಸಲು ತಾಲಿಬಾನ್‌ ನಿಯಂತ್ರಿತ ಪ್ರದೇಶದಲ್ಲಿರುವ ಹಳ್ಳಿಯ ಜನ ಸಂಘಟನೆಗೆ ಸಹಾಯಮಾಡಿದ್ದರು. ಉಗ್ರರ ನಿಯಂತ್ರರಣದಲ್ಲಿರುವ ಆ ಪ್ರದೇಶದ ಜನರಿಗೆ ಮೂರ್ಖತನದ ಗ್ರಹಣ ಹಿಡಿದಿದೆ. ನಮ್ಮ ಶಿಶುವನ್ನು ಸಾಯಿಸಿದ್ದು ರಾಕ್ಷಸೀ ಕೃತ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ತಾಲಿಬಾನ್ ನಿಯಂತ್ರಿತ ಪ್ರದೇಶದಲ್ಲಿ ಯಾವುದೇ ಸರ್ಕಾರೇತರ ಸಂಸ್ಥೆಗಳಿಲ್ಲ. ನೆರವು ನೀಡುವ ಕಾರ್ಯಕರ್ತರಿಲ್ಲ. ಸರ್ಕಾರವು ಕೂಡ ತನ್ನ ಜನರಿಗೆ ಅಗತ್ಯ ಸೌಲಭ್ಯಗಳನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಿಲ್ಲ’ ಎಂದು ತಾವು ಸೆರೆಯಲ್ಲಿದ್ದ ಪ್ರದೇಶದ ಬಗ್ಗೆ ಜೋಶುವಾ ಹೇಳಿಕೊಂಡಿದ್ದಾರೆ.

ಕುಟುಂಬ ಸಮೇತವಾಗಿ ಆಫ್ಘಾನಿಸ್ತಾನ ಪ್ರವಾಸ ಕೈಗೊಂಡಿದ್ದ ವೇಳೆ ಉಗ್ರರು ಇವರನ್ನು ಅಪಹರಿಸಿದ್ದರು. ಆ ವೇಳೆ ಕೋಲ್ಮಾನ್‌ ತುಂಬು ಗರ್ಭಿಣಿಯಾಗಿದ್ದಳು. ಸೆರೆಯಲ್ಲಿದ್ದಾಗಲೇ ದಂಪತಿಗೆ ನಾಲ್ಕನೇ ಮಗು ಜನಿಸಿತ್ತು.

‘ಸದ್ಯ ಇದರಿಂದಾಗಿ ತೀವ್ರ ಆಘಾತವಾಗಿದೆ. ನನ್ನ ಕುಟುಂಬವನ್ನು ಮನೆಗೆ ತಲುಪಿಸುವುದಕ್ಕಾಗಿ ಯಾವುದೇ ರೀತಿಯ ಸಾರಿಗೆ ವ್ಯವಸ್ಥೆ ಮಾಡಿದ್ದರೂ ನಿರಾಕರಿಸುತ್ತಿರಲಿಲ್ಲ. ಕೆನಡಾ ತಲುವುದಷ್ಟೇ ನಮ್ಮ ಗುರಿಯಾಗಿತ್ತು’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT