ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲೆಬ್ರಿಟಿಗಳ ಬಾಕ್ಸ್‌ ಕ್ರಿಕೆಟ್‌ ಲೀಗ್ 2

Last Updated 16 ಅಕ್ಟೋಬರ್ 2017, 11:43 IST
ಅಕ್ಷರ ಗಾತ್ರ

ಕಳೆದ ವರ್ಷ ಗಮನ ಸೆಳೆದಿದ್ದ ಕನ್ನಡ ಚಿತ್ರತಾರೆಯರ ಬಾಕ್ಸ್‌ ಕ್ರಿಕೆಟ್‌ ಲೀಗ್‌ 2(ಬಿಸಿಎಲ್) ಡಿಸೆಂಬರ್‌ ಮೊದಲ ವಾರ ಆರಂಭವಾಗಲಿದೆ. ಕಮರ್‌ ಫಿಲ್ಮ್ ಫ್ಯಾಕ್ಟರಿ ಪ್ರಾಯೋಜಿತ ಈ ಟೂರ್ನಿಗೆ ಈಗಾಗಲೇ ಭರದ ಸಿದ್ಧತೆ ನಡೆದಿದೆ. ಈ ಬಾರಿ ಹಿಂದಿನ ವರ್ಷದ ಆರು ತಂಡಗಳ ಜೊತೆಗೆ ಶಿವಮೊಗ್ಗ ಮತ್ತು ಕಲಬುರ್ಗಿ ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ.

‘ನಾಗರಬಾವಿಯಲ್ಲಿರುವ ಕುಮಾರ್‌ ಸ್ಟುಡಿಯೊದಲ್ಲಿ ಟೂರ್ನಿ ನಡೆಸಲು ಸಿದ್ಧತೆ ನಡೆದಿದೆ. 17 ಪಂದ್ಯಗಳು ನಡೆಯಲಿವೆ. ತಂಡದ ನಾಯಕರು ಮತ್ತು ಉಪ ನಾಯಕರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಿಂದಿನ ವರ್ಷ ತಲೆದೋರಿದ್ದ ಎಲ್ಲಾ ಗೊಂದಲ ಬಗೆಹರಿಸಿಕೊಂಡು ಈ ಬಾರಿ ಉತ್ತಮವಾಗಿ ಟೂರ್ನಿ ಸಂಘಟಿಸಲಾಗುವುದು’ ಎಂದು ಕಮರ್ ಫಿಲ್ಮ್‌ ಫ್ಯಾಕ್ಟರಿ ಮುಖ್ಯಸ್ಥ ಕಮರ್ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಟ ಟೆನಿಸ್‌ ಕೃಷ್ಣ ಅವರು ಮೊದಲ ಲೀಗ್‌ನಲ್ಲಿಯೇ ಆಡಲು ಸಜ್ಜಾಗಿದ್ದಂತೆ. ಅದೇ ವೇಳೆಗೆ ಎರಡು ಚಿತ್ರಗಳಲ್ಲಿ ಅಭಿನಯಿಸಲು ಒಪ್ಪಿಕೊಂಡರಂತೆ. ಲೀಗ್‌ ದಿನದಂದೇ ಚಿತ್ರೀಕರಣ ಇತ್ತಂತೆ.

‘ಮೊದಲ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶ ಕೈತಪ್ಪಿತು. ನಾನು ಚಿತ್ರೀಕರಣ ಪೂರ್ಣಗೊಳಿಸಿ ಸ್ಟುಡಿಯೊಗೆ ಬರುವ ವೇಳೆಗೆ ನನ್ನ ತಂಡ ಆಲ್‌ಔಟ್‌ ಆಗಿತ್ತು. ನನಗೆ ಬ್ಯಾಟಿಂಗ್‌ ಮಾಡುವ ಅವಕಾಶವೇ ಸಿಗಲಿಲ್ಲ. ಈ ಬಾರಿ ಮೊದಲಿಗೆ ನಾನೇ ತಂಡದ ಪರವಾಗಿ ಬ್ಯಾಟಿಂಗ್‌ ಆರಂಭಿಸುತ್ತೇನೆ’ ಎಂದರು ಟೆನಿಸ್‌ ಕೃಷ್ಣ.

ನಟಿ ರೇಖಾದಾಸ್‌, ‘ಹಿಂದಿನ ವರ್ಷವೂ ಯಶಸ್ವಿಯಾಗಿ ಟೂರ್ನಿ ಸಂಘಟಿಸಲಾಗಿದೆ. ಈ ಬಾರಿಯೂ ಯಶಸ್ವಿಯಾಗಲಿದೆ’ ಎಂದು ಆಶಿಸಿದರು.

‘ಇದು ಸಿದ್ಧ ಮಾದರಿಯ ಕ್ರಿಕೆಟ್ ಅಲ್ಲ. ಒಳಾಂಗಣ ಮೈದಾನದಲ್ಲಿ ನಡೆಯುವ ವಿಭಿನ್ನ ಮಾದರಿಯ ಕ್ರಿಕೆಟ್‌. ಸಾಫ್ಟ್‌ಬಾಲ್‌ ಬಳಸಲಾಗುತ್ತದೆ. ಸಾಕಷ್ಟು ತರಬೇತಿ ಮತ್ತು ತಂತ್ರಗಾರಿಕೆಯಿಂದ ಬ್ಯಾಟಿಂಗ್‌ ಮಾಡಿದರೆ ಗೆಲುವು ಸಿಗಲಿದೆ’ ಎಂದು ನಟ ಪರಮ ವಿಶ್ವ.

ನಟಿ ಕಾವ್ಯಾ ಶೆಟ್ಟಿ, ಕೆಂಪೇಗೌಡ ಲೀಗ್‌ನ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT