ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯಕ್ಕೆ ಉಪ್ಪಿನ ಮದ್ದು...

Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

* ಉಪ್ಪನ್ನು ಸ್ಕ್ರಬ್‌ ರೀತಿಯಲ್ಲಿ ಬಳಸಬಹುದು. ಆರು ಚಮಚ ಆಲಿವ್‌ ಎಣ್ಣೆಗೆ ಮೂರು ಚಮಚ ಉಪ್ಪನ್ನು ಹಾಕಿ ಪೇಸ್ಟ್‌ ಮಾಡಿಕೊಳ್ಳಿ. ಇದನ್ನು ಸ್ನಾನ ಮಾಡುವ ಮೊದಲು ಚರ್ಮಕ್ಕೆ ಉಜ್ಜಬೇಕು.

* ನಾಲ್ಕು ಚಮಚ ಉಪ್ಪಿಗೆ ಎರಡು ಚಮಚ ಜೇನುತುಪ್ಪ ಬೆರೆಸಿ. ಚರ್ಮಕ್ಕೆ ಹಚ್ಚಿ 15 ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಇದರಿಂದ ಚರ್ಮ ಮೃದುವಾಗುತ್ತದೆ.

* ಅರ್ಧ ಕಪ್‌ ಉಗುರು ಬಿಸಿನೀರಿಗೆ ಒಂದು ಚಮಚ ಉಪ್ಪು ಹಾಕಿ, ಒಂದು ಚಮಚ ಬೇಕಿಂಗ್‌ ಸೋಡ ಸೇರಿಸಿ. ಇದಕ್ಕೆ ಒಂದು ಚಮಚ ನಿಂಬೆರಸ ಹಾಕಿ ಅದರಲ್ಲಿ 10 ನಿಮಿಷ ಕೈ ಮುಳುಗಿಸಿಡಿ. ಹೀಗೆ ಮಾಡುವುದರಿಂದ ಉಗುರು ಗಟ್ಟಿಯಾಗುವುದಲ್ಲದೆ, ಹೊಳಪು ಬರುತ್ತದೆ.

* ಒಣಚರ್ಮದವರು ಕಪ್ಪು ಉಪ್ಪು ಬರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ತ್ವಚೆ ಮೃದುವಾಗುತ್ತೆ.

* ಉಗುರು ಬೆಚ್ಚಗಿರುವ ನೀರಿಗೆ ಕಪ್ಪು ಉಪ್ಪ ಬೆರೆಸಿ. ಅದರಲ್ಲಿ ಒಡೆದ ಪಾದವನ್ನು 10 ನಿಮಿಷ ಮುಳುಗಿಸಿ. ನಂತರ ಚರ್ಮವನ್ನು ಸ್ಕ್ರಬ್ ಮಾಡಿ. ಹೀಗೆ ಮಾಡುವುದರಿಂದ ಹಿಮ್ಮಡಿ ಒಡೆಯವುದು ಕಡಿಮೆಯಾಗುತ್ತದೆ.

* ಎಣ್ಣೆಯುಕ್ತ ಚರ್ಮಕ್ಕೆ ಉಪ್ಪು ಉತ್ತಮ. ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಉಪ್ಪನ್ನು ಹಾಕಿ, ಮುಖದ ಮೇಲೆ ಚುಮುಕಿಸಿ. ನಂತರ ಹತ್ತಿಯಿಂದ ಒರೆಸಿಕೊಂಡು, ಮುಖ ತೊಳೆದುಕೊಳ್ಳಿ.

* ಕುದಿಯುವ ನೀರಿಗೆ ಉಪ್ಪು ಹಾಕಿ, ಅದರ ಆವಿ ತೆಗೆದುಕೊಳ್ಳುವುದರಿಂದ ಮೊಡವೆ ಕಡಿಮೆಯಾಗಿ, ಮುಖದ ಹೊಳಪು ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT