ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘₹25 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ’

Last Updated 17 ಅಕ್ಟೋಬರ್ 2017, 8:50 IST
ಅಕ್ಷರ ಗಾತ್ರ

ಮುಡಿಪು: ಪಜೀರು ಗ್ರಾಮದ ವಜಲಗುಡ್ಡೆಯ ನೂತನ ಕಾಂಕ್ರೀಟ್‌ ರಸ್ತೆಗೆ ಆಹಾರ ಸಚಿವ ಯು.ಟಿ.ಖಾದರ್ ಸೋಮವಾರ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಪಜೀರು ಗ್ರಾಮದ ವಜಲ ಗುಡ್ಡೆ ಪರಿಸರವು ಬಹಳಷ್ಟು ಹಿಂದುಳಿದ ಪ್ರದೇಶವಾಗಿದೆ. ಇಂದಿನ ಆಧುನಿ ಕತೆಯಲ್ಲೂ ಜನರು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೇ, ಬಹಳಷ್ಟು ದೂರ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇಲ್ಲಿಯದ್ದು ಎಂದು ಹೇಳಿದರು.

ಕಳೆದ ಬಾರಿ ಇಲ್ಲಿಯ ಜನರಿಗೆ ನೀಡಿದ ಭರವಸೆಯಂತೆ ಇದೀಗ ಈ ರಸ್ತೆಗೆ ಸುಮಾರು ₹25 ಲಕ್ಷ ವೆಚ್ಚದಲ್ಲಿ ಉತ್ತಮ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಲಿದೆ. ಈ ಭಾಗದ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾ ಯಿತಿ ಸದಸ್ಯರು ಸೇರಿದಂತೆ ಈ ರಸ್ತೆಯ ಅಭಿವೃದ್ಧಿಗಾಗಿ ಪರಿಶ್ರಮ ಪಟ್ಟಿದ್ದು, ಇದೀಗ ಈ ಕನಸು ಈಡೇರಿದೆ ಎಂದು ಹೇಳಿದರು.

ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಾತನಾಡಿ, ಉತ್ತಮವಾದ ರಸ್ತೆ ನಿರ್ಮಾಣ, ಈ ಭಾಗದ ಜನರ ಬಹಳ ವರ್ಷಗಳ ಬೇಡಿಕೆಯಾಗಿತ್ತು.
ಇದೀಗ ಸಚಿವ ಯು.ಟಿ.ಖಾದರ್ ಅವರ ಪ್ರಯತ್ನದಿಂದಾಗಿ ಉತ್ತಮವಾದ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಲಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಪಜೀರು ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಝೀರ್ ಮೊಯ್ದಿನ್, ಪ್ಲೋರಿನ್ ಡಿಸೋಜ, ಇಮ್ತಿಯಾಝ್, ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ನಾಸೀರ್ ನಡುಪದವು, ಮುಡಿಪು ಬ್ಲಾಕ್ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ಸಮೀರ್ ಪಜೀರ್, ಪಂಚಾಯಿತಿ ಸದಸ್ಯರಾದ ರಫೀಕ್, ಶೇಖರ್, ವೀಣಾ, ಶಾಫಿ, ಪ್ರಸಿಲ್ಲಾ ಕ್ರಾಸ್ತಾ, ಮುರಳಿಧರ್ ಶೆಟ್ಟಿ, ಸ್ಥಳೀಯರಾದ ಅಶೋಕ್ ಡಿಸೋಜ ಬಲ್ಲೂರು, ಲ್ಯಾನ್ಸಿ ಅರ್ಮನ್ ಡಿಸೋಜ, ಅರುಣ್ ರಾಡ್ರಿಗಸ್, ಹಿಲೆರಿ ಡಿಸೋಜ, ಸಿಸಿಲಿಯಾ, ಕಮಲ, ಲಿಲ್ಲಿ ಡಿಸೋಜ, ಸರಿತಾ ಶಿಲನ್ಯಾಸ ಸಂದರ್ಭ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT