ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಲತಾ ಅಧಿಕಾರ ಅಭಾದಿತ

Last Updated 17 ಅಕ್ಟೋಬರ್ 2017, 8:55 IST
ಅಕ್ಷರ ಗಾತ್ರ

ರಾಯಚೂರು: ನಗರಸಭೆ ಅಧ್ಯಕ್ಷೆ ಹೇಮಲತಾ ಅವರ ವಿರುದ್ಧ ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ವಿರೋಧ ಪಕ್ಷದ ಸದಸ್ಯರು ಗೈರು ಹಾಜರಿ ಆಗುವ ಮೂಲಕ ಅವಿಶ್ವಾಸ ಗೊತ್ತುವಳಿಯು ಸೋಮವಾರ ಸೋಲು ಕಂಡಿದ್ದು, ಹೇಮಲತಾ ಅವರ ಅಧಿಕಾರ ಅಭಾದಿತವಾಗಿ ಮುಂದುವರೆಯಲಿದೆ.

ನಗರಸಭೆಯ ಸಭಾಂಗಣದಲ್ಲಿ ಉಪಾಧ್ಯಕ್ಷ ಜಯಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ಸದಸ್ಯರು ಗೈರು ಹಾಜರಿಯಾದರು. ಅವಿಶ್ವಾಸ ಗೊತ್ತುವಳಿ ಮಂಡನೆಯಾಗದೆ ಬಿದ್ದು ಹೋಯಿತು. ಕಾಂಗ್ರೆಸ್‌ನ 14 ಸದಸ್ಯರು ಹಾಗೂ ನಾಲ್ಕು ಪಕ್ಷೇತರ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಅವಿಶ್ವಾಸ ಗೊತ್ತುವಳಿ ಮನವಿಗೆ ಸಹಿ ಹಾಕಿದ್ದ ಕಾಂಗ್ರೆಸ್‌ನ ಸದಸ್ಯರು ಕೂಡ ಅಧ್ಯಕ್ಷರಿಗೆ ಬೆಂಬಲ ನೀಡಿದರು.

ಅವಿಶ್ವಾಸ ಗೊತ್ತುವಳಿಗೆ ಸೋಲಾದ ಸುದ್ದಿ ತಿಳಿಯುತ್ತಿದ್ದಂತೆ ಅಧ್ಯಕ್ಷರ ಬೆಂಬಲಿಗರು ನಗರಸಭೆ ಕಚೇರಿ ಎದುರಿಗೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಂದೋಬಸ್ತ್‌ ಒದಗಿಸಿದ್ದರು.

ಹೇಮಲತಾಗೆ ಪುನಾ ಅಧಿಕಾರ: ಅವಿಶ್ವಾಸ ಗೊತ್ತುವಳಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಸುದ್ದಿಗಾರರೊಂದಿಗೆ ನಗರಸಭೆ ಉಪಾಧ್ಯಕ್ಷ ಜಯಣ್ಣ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಗೈರು ಹಾಜರಿ ಆಗಿದ್ದರಿಂದ ಅವಿಶ್ವಾಸ ಪ್ರಕ್ರಿಯೆ ಬಿದ್ದುಹೋಗಿದ್ದು, ಹೇಮಲತಾ ಅವರು ಪುನಾ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT