ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ಬಳಕೆ, ಮಾರಾಟ ನಿಷೇಧಿಸಲು ಒತ್ತಾಯ

Last Updated 17 ಅಕ್ಟೋಬರ್ 2017, 9:05 IST
ಅಕ್ಷರ ಗಾತ್ರ

ಶಿವಮೊಗ್ಗ: ಪರಿಸರ ಮಾಲಿನ್ಯವನ್ನುಂಟು ಮಾಡುವ ಪಟಾಕಿಗಳ ತಯಾರಿ, ಬಳಕೆ ಹಾಗೂ ಮಾರಾಟದ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ದೀಪಾವಳಿಯ ಸಮಯದಲ್ಲಿ ಪಟಾಕಿಗಳ ಹೊದಿಕೆಗಳ ಮೇಲೆ ದೇವತೆಗಳ ಮತ್ತು ರಾಷ್ಟ್ರಪುರುಷರ ಚಿತ್ರಗಳನ್ನು ಮುದ್ರಿಸಿ ಅಪಮಾನ ಮಾಡುವುದನ್ನು, ಪರಿಸರಕ್ಕೆ ಮಾಲಿನ್ಯವುಂಟು ಮಾಡುವ ಪಟಾಕಿ ಸಿಡಿಸುವುದನ್ನು ನಿಷೇಧಿಸಲು ಕಾನೂನು ಮಾರ್ಗದಲ್ಲಿ ಆಂದೋಲನ ಹಾಗೂ ಜನಜಾಗೃತಿ ಅಭಿಯಾನ ಮಾಡುತ್ತಿದೆ.

ರಾಜ್ಯದಾದ್ಯಂತ ದೀಪಾವಳಿ, ಹೊಸ ವರ್ಷ, ಚುನಾವಣೆ, ಕ್ರಿಕೆಟ್ ಪಂದ್ಯ ಮುಂತಾದ ಸಂದರ್ಭದಲ್ಲಿ ಬೃಹತ್ ಪ್ರಮಾಣದಲ್ಲಿ ಪಟಾಕಿ ಸಿಡಿಸುತ್ತಿರುವುದರಿಂದ ಸಮಾಜದಲ್ಲಿ ಪ್ರದೋಷಣೆ ಮತ್ತು ದುಷ್ಪರಿಣಾಮಗಳು ಉಂಟಾಗುತ್ತಿದೆ. ಆದ್ದರಿಂದ ಆಘಾತಕಾರಿ ಪಟಾಕಿಗಳ ನಿರ್ಮಾಣ ಮತ್ತು ಮಾರಾಟವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ವನೀತಾ, ಸುನೀತಾ, ಸಂಧ್ಯಾ ಕಾಮತ್, ವಿಶ್ವನಾಥ್, ಶಬರೀಶ್, ಸೆಲ್ವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT