ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಪಡೆಯಲು ಪಿ2ಪಿ ಆ್ಯಪ್‌

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಆಧಾರ್‌ ಮೊಬೈಲ್‌ ಆ್ಯಪ್‌ 
ಸರ್ಕಾರ ಮತ್ತು ಬ್ಯಾಂಕ್‌ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್‌ ನೀಡುವುದು ಸದ್ಯಕ್ಕೆ ಕಡ್ಡಾಯವಾಗಿದೆ. ಇದಕ್ಕಾಗಿ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗಳಿಗೆ ಆಧಾರ್‌ ಕಾರ್ಡ್‌ನ ಜೆರಾಕ್ಸ್‌ ಪ್ರತಿ ನೀಡಲೇಬೇಕು. ಇದೀಗ, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಆಧಾರ್‌ ಮೊಬೈಲ್‌ ಆ್ಯಪ್‌ ಪರಿಚಯಿಸುವ ಮೂಲಕ ಜೆರಾಕ್ಸ್‌ ಪ್ರತಿ ನೀಡುವ ಪದ್ಧತಿಗೆ ಇತಿಶ್ರೀ ಹಾಡಲು ಮುಂದಾಗಿದೆ.

ಇನ್ನು ಮುಂದೆ ನಾಗರಿಕರು ಮೊಬೈಲ್‌ ಆ್ಯಪ್‌ ಮೂಲಕವೇ ಸಂಬಂಧಪಟ್ಟ ಇಲಾಖೆಗಳು ಮತ್ತು ಬ್ಯಾಂಕ್‌ಗಳಿಗೆ ಆನ್‌ಲೈನ್‌ ಮೂಲಕವೇ ಆಧಾರ್ ಕಾರ್ಡ್‌ ಅನ್ನು ವರ್ಗಾವಣೆ ಮಾಡಬಹುದು. 

ಇದರ ಜೊತೆಗೆ ಆಧಾರ್‌ನಲ್ಲಿರುವ ಖಾಸಗಿ ಮಾಹಿತಿಯ ಸುರಕ್ಷತೆಗಾಗಿ ಒಟಿಪಿ (ಒನ್‌ ಟೈಮ್ ಪಾಸ್‌ವರ್ಡ್‌) ವೈಶಿಷ್ಟ್ಯವನ್ನು ಯುಐಡಿಎಐ ಪರಿಚಯಿಸಿದೆ. ಬಳಕೆದಾರರು ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಬಳಕೆ ಮಾಡಬಹುದು. ಬಳಕೆದಾರರ ಮೊಬೈಲ್‌ ಸಂಖ್ಯೆ ಆಧಾರ್‌ಗೆ ನೋಂದಣಿಯಾಗಿದ್ದರೆ ಈ ಮೊಬೈಲ್‌ ಆ್ಯಪ್‌ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ.

ದತ್ತಾಂಶಗಳ ಮೂಲಕ ಸಾರ್ವಜನಿಕರ ಮಾಹಿತಿ ಆ್ಯಪ್‌ನಲ್ಲಿ ದೊರೆಯುತ್ತದೆ. ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಮತ್ತು ಭಾವಚಿತ್ರ ದೊರೆಯುತ್ತದೆ. ಇದನ್ನು ಸರ್ಕಾರಿ ಕಚೇರಿಗಳಿಗೆ ಆನ್‌ಲೈನ್‌ ಮೂಲಕವೇ ಸುಲಭವಾಗಿ ವರ್ಗಾಯಿಸಬಹುದಾಗಿದೆ.
ಗೂಗಲ್‌ ಪ್ಲೇಸ್ಟೋರ್‌: app mAadhaar

ಎಚ್‌ಎಸ್‌ಬಿಸಿ ಟ್ರ್ಯಾಕ್‌ ಟ್ರೇಡರ್‌ ಆ್ಯಪ್‌
ಎಚ್‌ಎಸ್‌ಬಿಸಿ ಬ್ಯಾಂಕ್‌ ತನ್ನ ಗ್ರಾಹಕರಿಗಾಗಿ ಹೊಸ ಟ್ರ್ಯಾಕ್‌ ಟ್ರೇಡರ್‌ ಆ್ಯಪ್‌ ಬಿಡುಗಡೆ ಮಾಡಿದೆ. ಬ್ಯಾಂಕ್‌ ಗ್ರಾಹಕರು ತಮ್ಮ ವಹಿವಾಟಿನ ಮಾಹಿತಿಯನ್ನು ಆ್ಯಪ್‌ ಮೂಲಕವೇ ನೋಡಬಹುದಾಗಿದೆ.

ಉದಾಹರಣೆಗೆ ಗ್ರಾಹಕರೊಬ್ಬರು ಗೃಹ ಸಾಲ ಪಡೆಯಲು ಅರ್ಜಿ ಸಲ್ಲಿಸಿರುತ್ತಾರೆ. ಇದರ ಮಾಹಿತಿಗಾಗಿ ಅವರು  ಬ್ಯಾಂಕಿನ ಅಧಿಕಾರಿಗಳನ್ನು ಭೇಟಿ ಮಾಡುವುದು ಅಥವಾ ದೂರವಾಣಿ ಮೂಲಕ ಸಂಪರ್ಕಿಸುವ ಅವಕಾಶವೇ ಇರುವುದಿಲ್ಲ. ಆ್ಯಪ್‌ ಮೂಲಕವೇ ಗ್ರಾಹಕರ ಅರ್ಜಿಯ ಸ್ಥಿತಿಗತಿ ತಿಳಿಯುತ್ತದೆ. ಇಷ್ಟು ಮಾತ್ರವಲ್ಲದೆ, ಖಾತೆದಾರರಿಗೆ ಅಗತ್ಯವಾಗಿ ಬೇಕಾಗಿರುವ ಬ್ಯಾಂಕಿನ ಮಾಹಿತಿ, ಬಡ್ಡಿದರ, ಷೇರು ಮಾಹಿತಿಯೂ ಇಲ್ಲಿ ದೊರೆಯಲಿದೆ.
ಗೂಗಲ್‌ ಪ್ಲೇಸ್ಟೋರ್‌: HSBC  track trade app

ಇಂಡಿಯಾ ಮನಿ ಮಾರ್ಟ್‌ ಕಂಪೆನಿಯು ಸಾಲ ಪಡೆಯುವವರಿಗಾಗಿ ಮತ್ತು ಹೂಡಿಕೆ ದಾರರಿಗಾಗಿ ಪಿ2ಪಿ ( Peer-to-Peer ) ಎಂಬ ಆ್ಯಪ್‌  ಬಿಡುಗಡೆ ಮಾಡಿದೆ. ಹೂಡಿಕೆದಾರರು ಮತ್ತು ಸಾಲ ಪಡೆಯುವವರ ಸಂವಹನಕ್ಕಾಗಿ ಈ ಆ್ಯಪ್‌   ಅಭಿವೃದ್ಧಿಪಡಿಸಲಾಗಿದೆ.

ಪಿ2ಪಿ ಆ್ಯಪ್‌
ಸಾಲ ಪಡೆಯುವವರು ಪರಿಷ್ಕೃತ ಬಡ್ಡಿದರಗಳ ಬಗ್ಗೆ ಮಾಹಿತಿ ಪಡೆಯಬಹುದು. ಹಾಗೆಯೇ ಹೂಡಿಕೆದಾರರಿಗೆ ಕಂಪೆನಿಗಳ ಆರ್ಥಿಕ ವಹಿವಾಟು ಮತ್ತು ಷೇರುಗಳ ಮಾರಾಟದ ಬಗ್ಗೆಯೂ ಇಲ್ಲಿ ಮಾಹಿತಿ  ದೊರೆಯಲಿದೆ.

ಈ ಆ್ಯಪ್‌ ಐಒಎಸ್‌ ಮತ್ತು ಆಂಡ್ರಾಯ್ಡ್‌ ಮಾದರಿಯಲ್ಲಿ ಲಭ್ಯವಿದೆ. ಈ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡ ಬಳಿಕ ಪಿ2ಪಿ ನಲ್ಲಿ ಬಳಕೆದಾರರು ತಮ್ಮ ವಿವರಗಳನ್ನು ನೋಂದಾಣಿ ಮಾಡಿಕೊಳ್ಳಬೇಕು. ಇದಕ್ಕೆ ಆಧಾರ್‌ಕಾರ್ಡ್‌, ಗುರುತಿನ ಚೀಟಿ, ಪ್ಯಾನ್‌ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ.

ಇದು ಸಣ್ಣ ಹೂಡಿಕೆದಾರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಈಗಾಗಲೇ ಇಂಡಿಯಾ ಮನಿ ಮಾರ್ಟ್‌ ಕಂಪೆನಿ ಅಮೆರಿಕ, ಚೀನಾ ಸೇರಿದಂತೆ ಇಂಗ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಗೂಗಲ್‌ ಪ್ಲೇಸ್ಟೋರ್‌: P2P app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT