ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ: ಹೆಚ್ಚಿದ ಸ್ಮಾರ್ಟ್‌ಫೋನ್‌ ಬಳಕೆ

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆನ್‌ಲೈನ್‌ ಖರೀದಿಗೆ ಸ್ಮಾರ್ಟ್‌ಫೋನ್‌ಗಳನ್ನೇ  ಹೆಚ್ಚಾಗಿ ಅವಲಂಬಿಸಿದರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ.

ತಮ್ಮ ಪ್ರೀತಿಪಾತ್ರರಿಗೆ ಹಬ್ಬದ ಕಾಣಿಕೆ ಮತ್ತು ಹಣ ರವಾನಿಸಲು ಸ್ಮಾರ್ಟ್‌ಫೋನ್‌ಗಳನ್ನು ತಾವು ಹೆಚ್ಚಾಗಿ ಬಳಸುತ್ತಿರುವುದಾಗಿ   ಮೈಕ್ರೊಸಾಫ್ಟ್‌ನ ಅಂಗಸಂಸ್ಥೆಯಾಗಿರುವ ಸ್ವಿಫ್ಟ್‌ಕೀ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಗ್ರಾಹಕರು ತಿಳಿಸಿದ್ದಾರೆ.

ಸಮೀಕ್ಷೆಯಲ್ಲಿ ಭಾಗಿಯಾದವರಲ್ಲಿ ಎರಡು ಮೂರಾಂಶದಷ್ಟು ಬಳಕೆದಾರರು ಹಬ್ಬದ ಸಂದರ್ಭದಲ್ಲಿನ ತಮ್ಮ ಬಹುತೇಕ ಅಥವಾ ಎಲ್ಲ ಬಗೆಯ ಖರೀದಿಗಳಿಗೆ ಸ್ಮಾರ್ಟ್‌ಫೋನ್‌ಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರೀತಿಪಾತ್ರರಿಗೆ ನಗದು ಮತ್ತಿತರ ಕೊಡುಗೆ ನೀಡಲು ಕೂಡ ಸ್ಮಾರ್ಟ್‌ಫೋನ್‌ ಬಳಕೆ ಮಾಡಿಕೊಂಡವರ ಸಂಖ್ಯೆ ಶೇ 36ರಷ್ಟಿದೆ. ದೆಹಲಿ, ಬೆಂಗಳೂರು, ಮುಂಬೈ, ಕೋಲ್ಕತ್ತ, ಜೈಪುರಗಳಲ್ಲಿ ನಡೆದ ಸಮೀಕ್ಷೆಯಲ್ಲಿ 1,500ಕ್ಕೂ ಹೆಚ್ಚು ಗ್ರಾಹಕರು ಭಾಗಿಯಾಗಿದ್ದರು.

18ರಿಂದ 44ರ ವಯೋಮಾನದವರು ತಮ್ಮ ಕುಟುಂಬದ ಸದಸ್ಯರ ಜತೆ ಹಬ್ಬದ ಸಂಭ್ರಮ ಆಚರಿಸಲು ಹೊಸ ವಿಧಾನಗಳ ಮೊರೆ ಹೋಗಿ
ದ್ದಾರೆ. ಹಬ್ಬದ ಸಡಗರವನ್ನು ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಿಸಿರುವುದನ್ನು ಶೇ 84ರಷ್ಟು ಬಳಕೆದಾರರು ಹೇಳಿಕೊಂಡಿದ್ದಾರೆ. ತಮ್ಮ ಹಬ್ಬದ ಸಡಗರ ಅಭಿವ್ಯಕ್ತಿಸಲು ಸ್ಮಾರ್ಟ್‌ಫೋನ್‌ಗಳಲ್ಲಿನ ವೈವಿಧ್ಯಮಯ ಭಾವನೆಗಳ ಚಿತ್ರಗಳನ್ನು (ಇಮೋಜಿ) ಸಮರ್ಥವಾಗಿ ಬಳಸಿಕೊಳ್ಳುತ್ತಿರುವುದಾಗಿಯೂ 10 ಜನರಲ್ಲಿ 9 ಜನರು  ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT