ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀನ್ಸ್ ಧರಿಸಿದ್ದಕ್ಕೆ ಟ್ರೋಲ್‌ಗೆ ಗುರಿಯಾದ ಮಲಾಲ

ಆಕ್ಸ್‌ಫರ್ಡ್ ವಿವಿಗೆ ಅಧ್ಯಯನಕ್ಕೆ ತೆರಳಿರುವ ಮಲಾಲ
Last Updated 18 ಅಕ್ಟೋಬರ್ 2017, 10:00 IST
ಅಕ್ಷರ ಗಾತ್ರ

ಬ್ರಿಟನ್ : ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ತೆರಳಿರುವ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ, ಪಾಕಿಸ್ತಾನದ ಮಲಾಲಾ ಯೂಸುಫ್‌ಝೈ ಅವರು ಜೀನ್ಸ್ ತೊಟ್ಟು, ಬೂಟು ಧರಿಸಿದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಮಲಾಲ ಅವರು ಒಂದು ವಾರದ ಹಿಂದೆ  ತತ್ವಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯಗಳ ಅಧ್ಯಯನ  ಮಾಡಲು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯಕ್ಕೆ ತೆರಳಿದ್ದಾರೆ .

ಈ ವೇಳೆ ಮಲಾಲಾ ಅವರು  ಜೀನ್ಸ್ , ಬಲು ಎತ್ತರದ ಬೂಟು ಹಾಗೂ ಬಾಂಬರ್ ಜಾಕೆಟ್ ಹಾಕಿಕೊಂಡು ನಡೆದು ಹೋಗುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಿಂದೊಮ್ಮೆ ಅವಳ ಹಣೆಗೆ ಗುಂಡೇಟು ತಗುಲಲು ಇದೇ ಕಾರಣ ಎಂದು ಮೊಹಮ್ಮದ್ ವಖಾಸ್ ಅವಾನ್ ಎಂಬುವರು ಟ್ವೀಟ್ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT