ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಶಿ ದನಿಯಲ್ಲಿ ‘ವಿಲನ್’ ಪ್ರೋಮೊ

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕನ್ನಡಿಗ ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಪಕರಾಗಿರುವ ಮಲಯಾಳಂ ಚಿತ್ರ ‘ವಿಲನ್’ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿತ್ತು. ಬಿಡುಗಡೆಯ ಹೊಸ್ತಿಲಲ್ಲಿರುವ ಈ ಚಿತ್ರವು ಇದೀಗ ಹಾಡಿನ ಕಾರಣಕ್ಕೆ ಮತ್ತೆ ಸುದ್ದಿಯಾಗಿದೆ.

‘ಜೈ ಲವಕುಶ’ ಸಿನಿಮಾದಲ್ಲಿ ಮೋಹಕವಾಗಿ ಕಾಣಿಸಿಕೊಂಡಿದ್ದ ನಟಿ ರಾಶಿ ಖನ್ನಾ ‘ವಿಲನ್’ಗಾಗಿ ಬಣ್ಣ ಹಚ್ಚಿದ್ದಾರೆ. ಅಷ್ಟೇ ಅಲ್ಲ ಅವರ ಕಂಠ ಸಿರಿಯನ್ನು ಕೇಳುವ ಅವಕಾಶವೂ ಸಿನಿಪ್ರಿಯರಿಗೆ ಸಿಗಲಿದೆ. ಈ ಚಿತ್ರದಲ್ಲಿ ರಾಶಿ ಹಾಡಲಿದ್ದಾರೆ ಎನ್ನುವುದು ಹೊಸ ಸುದ್ದಿ.

ಚಿತ್ರೀಕರಣದ ವೇಳೆ ರಾಶಿ ಹಾಡುವುದನ್ನು ಕೇಳಿದ ನಿರ್ದೇಶಕರು ಅವರಿಂದಲೇ ಪ್ರೋಮೊ ಹಾಡು ಹಾಡಿಸಲು ನಿರ್ಧರಿಸಿದರು. ಮೋಹನ್ ಲಾಲ್ ಅಭಿನಯದ ಈ ಬಹುನಿರೀಕ್ಷಿತ ಸಿನಿಮಾದ ನಿರ್ದೇಶನದ ಹೊಣೆ ಹೊತ್ತವರು ಬಿ.ಉನ್ನಿಕೃಷ್ಣನ್‌.

‘ನಮ್ಮ ಹಾಡಿಗೆ ರಾಶಿ ಕಂಠ ಹೊಂದುತ್ತದೆ ಅನಿಸಿತು. ಹಾಗಾಗಿ ಅವರಿಗೆ ಹಾಡುವಂತೆ ಕೇಳಿದೆವು. ಅವರು ಒಪ್ಪಿಕೊಂಡರು’ ಎನ್ನುತ್ತಾರೆ ಸಂಗೀತ ನಿರ್ದೇಶಕ ಜಿಮ್‌ ಜಾಕೋಬ್‌. ರಾಶಿ ಈ ಹಿಂದೆ ತೆಲುಗಿನ ‘ಜೋರು’ ಸಿನಿಮಾದ ಟೈಟಲ್ ಸಾಂಗ್ ಹಾಡಿದ್ದರು.

ತಮಿಳು ನಟರಾದ ವಿಶಾಲ್ ಮತ್ತು ಹಂಸಿಕಾ ಮೋಟ್ವಾನಿ ಸಹ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅ.27ಕ್ಕೆ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT