ಒಳಾಂಗಣ ವಿನ್ಯಾಸ

ಚಂದದ ಮನೆಗೆ ಕಲಾಕೃತಿ ಮೆರುಗು

ಮನೆ ದೊಡ್ಡದಿರಲಿ, ಚಿಕ್ಕದಿರಲಿ  ಒಳಾಂಗಣ ವಿನ್ಯಾಸದ ಮೂಲಕ ಅದನ್ನು ಆಕರ್ಷಕವಾಗಿಸಬಹುದು. ಹಬ್ಬಗಳ ಸಂದರ್ಭದಲ್ಲಿ ತರಾತುರಿಯಲ್ಲಿ ಮನೆಯನ್ನು ಸಿಂಗರಿಸುವುದಕ್ಕಿಂತ ಮನೆಯನ್ನು ಸದಾ ಚೊಕ್ಕವಾಗಿರಿಸಿಕೊಳ್ಳುವುದು ಒಳಿತು

ಚಂದದ ಮನೆಗೆ ಕಲಾಕೃತಿ ಮೆರುಗು

ಸಾಂಪ್ರದಾಯಿಕ ಕಸೂತಿಗಳು ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಸಮಕಾಲೀನ ಕಲಾವಿದರು ಅಥವಾ ದೇಸೀ ಕಲಾವಿದರು ರಚಿಸಿದ ಕಲಾಕೃತಿಗಳಿಗೆ ಆದ್ಯತೆ ನೀಡಬೇಕು. ಕೆಲವು ಸಮಕಾಲೀನ ಕಲಾಕಾರರು ಜಾನಪದ ಮತ್ತು ಸಾಂಸ್ಕೃತಿಕ ವೈಭವವನ್ನು ಇಂದಿನ ಪರಿಕಲ್ಪನೆಗೆ ಸರಿ ಹೊಂದುವಂತೆ ಕಲಾಕೃತಿ ರಚಿಸುತ್ತಾರೆ. ಇದು ಪ್ರಸ್ತುತ ಸ್ಥಿತಿಯನ್ನು ಬಿಂಬಿಸುವ ಜೊತೆ ಸಾಂಪ್ರದಾಯಿಕ ಬೇರನ್ನು ಪುನರುಚ್ಚರಿಸುವಂತೆ ಮಾಡುತ್ತದೆ. ಈ ಕಲಾಕೃತಿಗಳು ಹಬ್ಬದ ಸಮಯದಲ್ಲಿ ಮನೆಯ ಒಳಾಂಗಣ ವಿನ್ಯಾಸಕ್ಕೆ ಹೊಸ ಮೆರುಗು ನೀಡುತ್ತದೆ.

ಕಲಾವಿದರ ಕುಂಚದಲ್ಲಿ ಮೂಡಿದ ಕಲಾಕೃತಿಗಳು ಮನೆಯಲ್ಲಿದ್ದರೆ ಅದರ ಸೊಗಸೇ ಬೇರೆ. ರಾಮಾಯಣ, ಮಹಾಭಾರತ, ಪುರಾಣದ ದೃಶ್ಯಗಳನ್ನು ಇರಿಸಬಹುದು. ಇದರ ಜೊತೆಗೆ ಸಾಂಪ್ರದಾಯಿಕ ನೃತ್ಯ, ಕಲಾ ಪ್ರದರ್ಶನ, ಸಂಗೀತ ಮತ್ತು ಅನಾದಿಕಾಲದ ಅಕ್ಷರಗಳು, ದಂತಕತೆಗಳನ್ನು ಒಳಗೊಂಡ ಚಿತ್ರಗಳಿಂದಲೂ ಮನೆಯನ್ನು ಅಲಂಕರಿಸಬಹುದು. ಕೆಲವು ಸಾಂಪ್ರದಾಯಿಕ ಘಟನೆ ಅಥವಾ ಶ್ಲೋಕಗಳನ್ನು ಗೋಡೆಯ ಅಲಂಕಾರಕ್ಕೆ ಬಳಸಬಹುದು. ಅಕ್ಷರಗಳನ್ನು ಬಳಸಿದ ಕಲಾಕೃತಿಗಳು ಇಂದು ಟ್ರೆಂಡ್ ಸೃಷ್ಟಿಸಿವೆ. ಮನೆಯವರೇ ಬಿಡಿಸಿದ ಚಿತ್ರಗಳನ್ನು ಸುಂದರವಾಗಿ ಜೋಡಿಸಿ ಅವುಗಳಿಗೆ ಫ್ರೇಮ್‌ ಮಾಡಿಸಬಹುದು. ಫ್ರೇಮ್‌ಗಳ ಮೇಲೆ ಸಣ್ಣ ಕಲಾಕೃತಿಗಳನ್ನು ರಚಿಸಬಹುದು. ಆ್ಯಂಟಿಕ್‌ ಫ್ರೇಮ್‌ಗಳನ್ನು ಆಯ್ಕೆ ಮಾಡಲು ಆದ್ಯತೆ ನೀಡಿ. ಶಿಲ್ಪಕಲಾಕೃತಿಗಳನ್ನು ಮನೆಯಲ್ಲಿ ಇಡುವ ಮೂಲಕ ಒಳಾಂಗಣ ವಿನ್ಯಾಸವನ್ನು ಮತ್ತಷ್ಟು ಆಕರ್ಷಕವಾಗಿಸಹುದು.

ಶಿಲ್ಪಕಲಾಕೃತಿಗಳು, ಚಿತ್ರಕಲಾಕೃತಿಗಳು ಎದ್ದು ಕಾಣಬೇಕೆಂದರೆ ಲೈಟಿಂಗ್‌ ಮುಖ್ಯ. ವಿಭಿನ್ನ ಬಗೆಯ ಗೂಡುದೀಪಗಳನ್ನು ಕಲಾಕೃತಿಗಳ ಮುಂದೆ ತೂಗು ಹಾಕುವುದರಿಂದ ಒಳಾಂಗಣದ ಕಳೆ ಹೆಚ್ಚುತ್ತದೆ. ಬೆಳಕಿನ ಮಂದವಾಗಿ ಚಿತ್ರಕಲೆಯ ಮೇಲೆ ಬೀಳುವಂತೆ ಮಾಡಬೇಕು. ವಿವಿಧ ರೀತಿಯ ಎಲ್‌ಇಡಿ ಬಲ್ಬ್‌ಗಳು, ಫ್ಲೋರ್‌ ಲ್ಯಾಂಪ್‌ಗಳು, ಮಣ್ಣಿನ ಹಣತೆಗಳು ಮನೆಯ ಒಳಗೆ ಹೊಸ ಲೋಕವನ್ನೇ ಸೃಷ್ಟಿಸುತ್ತವೆ. ಹಣತೆಗಳನ್ನು ತ್ರಿಕೋನಾಕಾರದಲ್ಲಿ ಜೋಡಿಸಿ ಅದರ ಮಧ್ಯೆ ಕಲಾಕೃತಿಗಳನ್ನು ಜೋಡಿಸುವುದರಿಂದ ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ಭೂಮಿಯೂ ಇಲ್ಲಿ ಠೇವಣಿ

ಸೂರು ಸ್ವತ್ತು
ಭೂಮಿಯೂ ಇಲ್ಲಿ ಠೇವಣಿ

9 Mar, 2018
ಮುಖ್ಯ ಬಾಗಿಲಿಗೆ ವಾಸ್ತು ನಿಯಮ

ಸೂರು ಸ್ವತ್ತು
ಮುಖ್ಯ ಬಾಗಿಲಿಗೆ ವಾಸ್ತು ನಿಯಮ

9 Mar, 2018
ನೀರಿನ ಸ್ಮಾರ್ಟ್ ಮೀಟರ್ ಇಂದಿನ ಅಗತ್ಯ

ಸೂರು ಸ್ವತ್ತು
ನೀರಿನ ಸ್ಮಾರ್ಟ್ ಮೀಟರ್ ಇಂದಿನ ಅಗತ್ಯ

9 Mar, 2018
ಬಗೆಬಗೆ ವಿನ್ಯಾಸ

ಸೂರು ಸ್ವತ್ತು
ಬಗೆಬಗೆ ವಿನ್ಯಾಸ

9 Mar, 2018
ತಾರಸಿ ಮೇಲೆ ಕೈತೋಟ ಮಾಡಿ...

ಸೂರು ಸ್ವತ್ತು
ತಾರಸಿ ಮೇಲೆ ಕೈತೋಟ ಮಾಡಿ...

9 Mar, 2018