ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಪಾ ಹೇಳಿಕೆ ತಪ್ಪಲ್ಲ

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಚಂದ್ರಶೇಖರ ಪಾಟೀಲ ಅವರ ಹೇಳಿಕೆಯನ್ನು ಹಿರಿಯ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಅವರು ಖಂಡಿಸಿರುವುದು ಸರಿಯಲ್ಲ. ಚಂಪಾ ಅವರು ಸಭೆಯೊಂದರಲ್ಲಿ ಹೇಳಿರುವಂತೆ, ‘ದೇಶದಲ್ಲಿ ಇಂದು ನಡೆಯುತ್ತಿರುವ ಅನಾಹುತಗಳಿಗೆ ಬ್ರಾಹ್ಮಣ- ಬನಿಯಾ ವ್ಯವಸ್ಥೆಗಳೇ ಕಾರಣ’ ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯ. ಹೀಗಾಗಿ ಅವರ ಹೇಳಿಕೆ ವಾಸ್ತವವೇ ಆಗಿದೆ.

ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಅವರು, ‘ಬ್ರಾಹ್ಮಣ ಮತ್ತು ಬನಿಯಾ ವ್ಯವಸ್ಥೆಗಳೇ ಈ ದೇಶವನ್ನು ಹೆಡೆಮುರಿಗಟ್ಟಿ ತಿನ್ನುತ್ತಿವೆ’ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ತಮ್ಮ ಅನೇಕ ಲೇಖನಗಳಲ್ಲಿ ಅಂದೇ ಹೇಳಿದ್ದಾರೆ.

ಹೀಗಾಗಿ ಚಂಪಾ ಅವರು ಯಾವುದೇ ವರ್ಗ ಇಲ್ಲವೇ ಜಾತಿಗೆ ಅವಹೇಳನ ಮಾಡಿದಂತೆ ಆಗುವುದಿಲ್ಲ. ನಾನು ಬಲ್ಲಂತೆ ಸಮಾಜವಾದ, ಪ್ರಗತಿಪರ ಮತ್ತು ದಲಿತಪರ ಚಿಂತನೆಯಲ್ಲಿ ಬೆಳೆದು ಬಂದವರಾರೂ ಬ್ರಾಹ್ಮಣರನ್ನು ವಿರೋಧಿಸುವುದಿಲ್ಲ. ಬ್ರಾಹ್ಮಣ್ಯವನ್ನು ವಿರೋಧಿಸುತ್ತಾರೆ ಅಷ್ಟೇ!

ಶಿವರಂಜನ್ ಸತ್ಯಂಪೇಟೆ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT