ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಟಿಎ ಟೆನಿಸ್‌: ತರುಣ್, ಖುಷಿಗೆ ಪ್ರಶಸ್ತಿ

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಮೋಘ ಸಾಮರ್ಥ್ಯದಿಂದ ಆಡಿದ ವಿ. ತರುಣ್ ಗೌಡ ಮತ್ತು ಖುಷಿ ವಿಶ್ವನಾಥ್‌ ಇಲ್ಲಿ ನಡೆದ ಎಐಟಿಎ 14 ವರ್ಷದೊಳಗಿನವರ ಟ್ಯಾಲೆಂಟ್‌ ಸರಣಿ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್‌ ವಿಭಾಗಗಳಲ್ಲಿ ಚಾಂಪಿಯನ್ ಆಗಿದ್ದಾರೆ.

ಕೇಗೇರಿಯ ಎಫ್‌ಎಸ್‌ಎ ಕೋರ್ಟ್‌ನಲ್ಲಿ ಬುಧವಾರ ನಡೆದ ಫಾರ್ಚೂನ್ ಸ್ಟೋರ್ಟ್ಸ್‌ ಅಕಾಡೆಮಿ ವತಿಯ ಟೂರ್ನಿಯಲ್ಲಿ ಆರನೇ ಶ್ರೇಯಾಂಕದ ತರುಣ್ ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ 6–2, 6–2ರಲ್ಲಿ ತರುಣ್‌ ವೆಟ್ರಿವಲ್‌ ಅವರನ್ನು ಮಣಿಸಿದರು.

ಸೆಮಿಫೈನಲ್ ಪಂದ್ಯದಲ್ಲಿ ತರುಣ್‌ 9–0ರಲ್ಲಿ ಗೊವಿನ್ ಸೆಹ್ವಾಗ್‌ ವಿರುದ್ಧ ಜಯಭೇರಿ ಬಾರಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟರು.

ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ತರುಣ್‌ ವೆಟ್ರಿವಲ್ 9–1ರಲ್ಲಿ ಚರಣ್‌ ವರ್ಧನ್ ವಿರುದ್ಧ ಗೆಲುವಿನ ಕದ ತಟ್ಟಿದರು.

ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್‌ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಆಟಗಾರ್ತಿ ಖುಷಿ ವಿಶ್ವನಾಥ್‌ 6–3, 6–2ರಲ್ಲಿ ಆರನೇ ಶ್ರೇಯಾಂಕದ ಎಸ್‌. ತನಿಷಾ ಎದುರು ಗೆದ್ದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಖುಷಿ ವಿಶ್ವನಾಥ್‌ 9–7ರಲ್ಲಿ ವಿದ್ಯುಲ್‌ ಮಣಿಕಾಂತಿ ಮೇಲೂ, ತನಿಷಾ 9–3ರಲ್ಲಿ ಯಶೋಮತಿ ವಿರುದ್ಧವೂ ಜಯದಾಖಲಿಸಿ ಫೈನಲ್ ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT