ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ 15 ರಿಂದ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೃದಯ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನವೆಂಬರ್‌ 15 ರಿಂದ ಗ್ರಾಮ ವಾಸ್ತವ್ಯ ಆರಂಭಿಸಲಿದ್ದಾರೆ.

ಇದಕ್ಕಾಗಿ ವಿಶೇಷ ಐಷಾರಾಮಿ ಹೈಟೆಕ್‌ ವಾಹನ ಸಜ್ಜುಗೊಳ್ಳುತ್ತಿದೆ. ಕುಮಾರಸ್ವಾಮಿಯವರ ಅಗತ್ಯಕ್ಕೆ ಅನುಗುಣವಾಗಿ ವಾಹನ ವಿನ್ಯಾಸಗೊಳ್ಳಲಿದೆ. ಗ್ರಾಮ ವಾಸ್ತವ್ಯದ ಪ್ರವಾಸದ ಸಂದರ್ಭದಲ್ಲಿ ಕುಮಾರಸ್ವಾಮಿ ಜತೆಗೆ ವೈದ್ಯರು, ಯೋಗ ತರಬೇತುದಾರ ಮತ್ತು ಅಡುಗೆಯವರು ಇರುತ್ತಾರೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ‘ಮೊದಲ ಗ್ರಾಮ ವಾಸ್ತವ್ಯ ನವೆಂಬರ್‌ 15 ರಂದು ಬಸವನಬಾಗೇವಾಡಿಯಲ್ಲಿ ನಡೆಯಲಿದೆ. 50 ವಿಧಾನಸಭಾ ಕ್ಷೇತ್ರಗಳ 62 ತಾಲ್ಲೂಕುಗಳ ತಲಾ ಒಂದೊಂದು ಗ್ರಾಮದಲ್ಲಿ ವಾಸ್ತವ್ಯ ಹೂಡಲಾಗುವುದು. ಪ್ರತಿ ದಿನ 20 ಗ್ರಾಮಗಳಿಗೆ ಭೇಟಿ ನೀಡುತ್ತೇನೆ’ ಎಂದರು.

ಪ್ರಯಾಣ, ಸ್ನಾನ, ಊಟ, ಸಭೆ ನಡೆಸಲು ಅನುಕೂಲವಾಗುವಂತೆ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ವಾಹನದಲ್ಲೇ ಮಲಗಬಹುದು. ಮನೆ ಮತ್ತು ಕಚೇರಿಯಂತೆಯೂ ಬಳಸಿಕೊಳ್ಳಬಹುದಾಗಿದೆ. ಈ ವಾಹನದ ವೆಚ್ಚ ₹ 1 ಕೋಟಿ. ತಮಿಳುನಾಡಿನ ಸೇಲಂನಲ್ಲಿ ಇದರ ಜೋಡಣೆ ಆಗುತ್ತಿದೆ. ಜೆಡಿಎಸ್‌ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯ್ಯದ್‌ ಅಲ್ತಾಫ್‌ ಈ ವಾಹನವನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT