ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಪ್ರಜೆಗಳಿಗೆ ವೈದ್ಯಕೀಯ ವೀಸಾ: ಸುಷ್ಮಾ

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಬಾಕಿಯಿರುವ ಎಲ್ಲ ರೀತಿಯ ವೈದ್ಯಕೀಯ ವೀಸಾ ಅರ್ಜಿಗಳನ್ನು ಪರಿಗಣಿಸುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ಹೇಳಿದ್ದಾರೆ. ಪಾಕಿಸ್ತಾನದ ಪ್ರಜೆಗಳು ಸಲ್ಲಿಸಿದ್ದ ಇಂತಹ ಅನೇಕ ಮನವಿಗಳಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ದೀಪಾವಳಿ ಹಬ್ಬದ ನಿಮಿತ್ತ  ಈ ಕ್ರಮ ಎಂದಿದ್ದಾರೆ.

ಪಾಕಿಸ್ತಾನದ ಮಹಿಳೆ ಅಮ್ನಾ ಶಮಿನ್ ಅವರ ವೀಸಾ ಮನವಿಗೆ ಪ್ರತಿಕ್ರಿಯಿಸಿದ ಸುಷ್ಮಾ, ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿ ಸಂಪರ್ಕಿಸಿ ವೀಸಾ ಪಡೆಯುವಂತೆ ಸೂಚಿಸಿದರು. ಶಮಿನ್ ಅವರ ತಂದೆ ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿಯಲ್ಲಿದ್ದು, ಅವರನ್ನು ನೋಡಿಕೊಳ್ಳರು ಭಾರತಕ್ಕೆ ಬರಲು ಇಚ್ಛಿಸಿ ಅರ್ಜಿ ಸಲ್ಲಿಸಿದ್ದರು.

ಯಕೃತ್ತಿನ ಶಸ್ತ್ರಚಿಕಿತ್ಸೆ ಇರುವ ತಮ್ಮ ತಾಯಿಗೆ ಭಾರತಕ್ಕೆ ಭೇಟಿ ನೀಡಲು ವೀಸಾ ನೀಡುವಂತೆ ರಫಿಕ್ ಮೆಮೊನ್ ಎಂಬ ಪಾಕಿಸ್ತಾನಿ ಪ್ರಜೆ ಕೂಡಾ ಮನವಿ ಮಾಡಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸುಷ್ಮಾ, ವೀಸಾಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ತಮ್ಮ ಎಂಟು ವರ್ಷದ ಮಗು ಮೊಹಮ್ಮದ್ ಅಹಮದ್‌ಗೆ ಚಿಕಿತ್ಸೆ ಕೊಡಿಸಲು ವೈದ್ಯಕೀಯ ವೀಸಾ ಅರ್ಜಿ ಸಲ್ಲಿಸಿ ಒಂದು ವರ್ಷದಿಂದ ಕಾಯುತ್ತಿರುವ ನಜೀರ್ ಅಹಮದ್ ಎಂಬ ಪಾಕಿಸ್ತಾನದ ಪ್ರಜೆಯ ಮನವಿಗೂ ಸುಷ್ಮಾ ಸ್ಪಂದಿಸಿದ್ದಾರೆ.

ಭಾರತ–ಪಾಕಿಸ್ತಾನದ ಮಧ್ಯೆ ಸಂಬಂಧ ಬಿಗಡಾಯಿಸಿದ್ದರೂ ಸುಷ್ಮಾ ಅವರು ಪಾಕಿಸ್ತಾನದ ಪ್ರಜೆಗಳ ವೈದ್ಯಕೀಯ ವೀಸಾ ಅರ್ಜಿಗಳಿಗೆ ಸಹಾನುಭೂತಿಯಿಂದ ಒಪ್ಪಿಗೆ ನೀಡಿದ್ದಾರೆ.

ಟ್ವಿಟರ್‌ನಲ್ಲಿ ಮನವಿ: ವೀಸಾಗೆ ಒಪ್ಪಿಗೆ
ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಪಾಕಿಸ್ತಾನದ ಮಗುವಿಗೆ ವೀಸಾ ನೀಡುವಂತೆ ಅಲ್ಲಿನ ದೂತಾವಾಸ ಕಚೇರಿಗೆ ಸುಷ್ಮಾ ಅವರು ಬುಧವಾರ ಸೂಚನೆ ನೀಡಿದ್ದಾರೆ. ತನ್ನ ಮಗುವಿಗೆ ಯಕೃತ್ತಿನ ಕಸಿ ಮಾಡಿಸಲು ಅಗತ್ಯವಿರುವ ವೈದ್ಯಕೀಯ ವೀಸಾ ಒದಗಿಸುವಂತೆ ಮಗುವಿನ ತಂದೆ ಕಾಶಿಫ್ ಎಂಬುವರು ಟ್ವಿಟರ್‌ನಲ್ಲಿ ಮನವಿ ಮಾಡಿದ್ದರು.

ಮಗುವಿಗೆ ಸಂಬಂಧಿಸಿದ ಔಷಧಗಳು ಮುಗಿಯುತ್ತಿದ್ದು, ತಕ್ಷಣ ವೈದ್ಯರನ್ನು ಕಾಣಬೇಕು ಎಂದು ಕಾಶಿಫ್ ಅವರು ಮನವರಿಕೆ ಮಾಡಿಕೊಡ್ಡಿದ್ದರು. ಇದಕ್ಕೆ ಸುಷ್ಮಾ ಸ್ಪಂದಿಸಿದ್ದು, ತಕ್ಷಣ ವೀಸಾ ನೀಡುವಂತೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT