ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಾವರ ಗೋಶಾಲೆಯಲ್ಲಿ ಗೋ ಸಂರಕ್ಷಣೆ

Last Updated 20 ಅಕ್ಟೋಬರ್ 2017, 9:48 IST
ಅಕ್ಷರ ಗಾತ್ರ

ಬ್ರಹ್ಮಾವರ: ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಪೇಜಾವರ ಅಧೋಕ್ಷಜ ಮಠಾಧೀಶ ವಿಶ್ವೇಶತೀರ್ಥರ ಮಾರ್ಗ ದರ್ಶನದಲ್ಲಿ ನಡೆಯುತ್ತಿರುವ ಉಡುಪಿ ಜಿಲ್ಲೆಯ ಬ್ರಹ್ಮಾವರ ಬಳಿಯ ನೀಲಾವರ ಗೋಶಾಲೆಯ ಕೇಂದ್ರಬಿಂದು ಕಿರಿಯ ಶ್ರೀಗಳಾದ ವಿಶ್ವಪ್ರಸನ್ನತೀರ್ಥರು.

ಅನಾಥ ಗೋವುಗಳಿಗೆ ಆಸರೆಯಾಗಿ ನಿಲ್ಲಬೇಕೆಂಬ ಉದಾತ್ತ ಕನಸನ್ನು ಕಂಡ ವಿಶ್ವಪ್ರಸನ್ನತೀರ್ಥರು ಮೊದಲ ಹೆಜ್ಜೆಯಾಗಿ ಅನೇಕ ಆಸಕ್ತರ ನೆರವಿನಿಂದ ಇಲ್ಲಿ ಒಂದು ಮಾದರಿ ಗೋಗ್ರಾಮವನ್ನೇ ಸೃಷ್ಟಿಸಿದ್ದಾರೆ.

ಬದುಕಿನ ಆಧಾರ ಗೋವುಗಳು. ಗೋವುಗಳು ಭಗವಂತನ ರೂಪ ಎಂದು ಭಾವಿಸಿ ಸುಮಾರು 30 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಇಲ್ಲಿನ ವಿಶಾಲವಾದ ಗೋಶಾಲೆಯಲ್ಲಿ ಸುಮಾರು 1,250 ಅನಾಥ ಗೋವು ಗಳು ಆಸರೆ ಪಡೆದುಕೊಂಡು ನೆಮ್ಮದಿ ಯಿಂದ ಸ್ವಚ್ಛಂದವಾಗಿ ಬದುಕುತ್ತಿವೆ. ಗೋಶಾಲೆಗೆ ದಿನನಿತ್ಯ ಹಲವಾರು ಅಪ್ರ ಯೋಜಕವೆನ್ನಿಸುವ ಗೊಡ್ಡು ಹಸು, ದನ, ಕರುಗಳು ದಾಖಲಾಗುತ್ತಿರುತ್ತವೆ.

ಉಡುಪಿಯ ಸುತ್ತಮುತ್ತಲಲ್ಲಿ ವಾರಸು ದಾರರಿಲ್ಲದ ಮತ್ತು ಅಶಕ್ತ ಹಾಗೂ ರೋಗಗ್ರಸ್ತ ಗೋವುಗಳು ಮತ್ತು ಕಸಾಯಿಖಾನೆಗೆ ತೆಗೆದುಕೊಂಡು ಹೋಗುವ ಹಸುಗಳು ರಕ್ಷಣೆ ಪಡೆದು ಪೊಲೀಸರ ನೆರವಿನಿಂದ ಗೋಶಾಲೆಗೆ ಸೇರುತ್ತವೆ. ಎಷ್ಟೇ ಗೋವುಗಳು ಆಸರೆಯನ್ನರಿಸಿ ಬಂದರೆ ಸ್ವಾಮಿಗಳು ನಗುಮುಖದಿಂದ ಸ್ವಾಗತಿಸಿ ಅವುಗಳಿಗೆ ಅಗತ್ಯ ಶುಶ್ರೂಷೆ ಮಾಡಿ ಸಲಹುತ್ತಾರೆ. ಇವಲ್ಲದೇ ಇಲ್ಲಿ ನಮ್ಮ ದೇಶದ ವಿವಿಧ ತಳಿಯ ಗೋವುಗಳಿವೆ.

ಕಳೆದ 14ವರ್ಷಗಳಿಂದ ನಡೆಯು ತ್ತಿರುವ ಇಲ್ಲಿನ ಗೋಶಾಲೆಗೆ ಪ್ರತಿ ತಿಂಗಳು 15ಲಕ್ಷ ಖರ್ಚು ವೆಚ್ಚ ತಗಲುತ್ತಿದೆ. ಸುಮಾರು 25 ಲೀಟರ್‌ ಹಾಲನ್ನು ಡೇರಿಗೆ ಮಾರಾಟ ಮಾಡಲಾಗುತ್ತಿದೆ. ಸುಮಾರು 10 ಲೀಟರ್ ಹಾಲನ್ನು ಇಲ್ಲಿನ ಸಿಬ್ಬಂದಿಗಳಿಗೆ ಬರುವ ಅತಿಥಿಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಕೊಡವೂರಿನಲ್ಲಿಯೂ ಮಠದ ವತಿಯಿಂದ ಗೋಶಾಲೆಯನ್ನು ನಡೆ ಸಲಾಗುತ್ತಿದೆ. ಎರಡೂ ಕಡೆಯಲ್ಲಿರುವ ಗೋವುಗಳನ್ನು ಸಂರಕ್ಷಿಸುವ ಮಹತ್ವವನ್ನು ಸ್ವಾಮೀಜಿ ಅವರು ಸಮರ್ಥವಾಗಿ ನಿರೂಪಿಸಿದ್ದಾರೆ. ನಿಸ್ವಾರ್ಥ ಮನೋಭಾವದಿಂದ ಈ ಮೂಕಜೀವಿಗಳನ್ನು ಮಕ್ಕಳಂತೆ ಪೋಷಿಸುತ್ತಾ, ಅವುಗಳ ಸಂವೇದನೆಗೆ ಶ್ರೀಗಳವರು ಸ್ಪಂದಿಸುತ್ತಾ, ಅವುಗಳಿಗೆ ಪ್ರೀತಿಯ ಸಿಂಚನ ಉಣಬಡಿಸುವ ದೃಶ್ಯ ಹೃದಯಸ್ಪರ್ಶಿ.

ಗೋವುಗಳ ಮಾಹಿತಿ: ಸರ್ಕಾರದ ಐನ್‌ಎನ್‌ಎಆರ್‌ಪಿ ಯೋಜನೆಯನ್ವಯ ಇಲ್ಲಿನ ಎಲ್ಲ ಗೋವುಗಳ ಮಾಹಿತಿ ಯನ್ನು ಪಶುವೈದ್ಯಕೀಯ ಇಲಾಖೆಯ ನೆರವಿನಿಂದ ಕಂಪ್ಯೂಟರ್‌ಗೆ ಅಳವಡಿಸಿ ಕೊಳ್ಳಲಾಗಿರುವುದು ವಿಶೇಷವಾಗಿದೆ.

ಈ ಗೋಶಾಲೆಯಲ್ಲಿಯೇ ಗೋವುಗಳ ವಿವಿಧ ಉತ್ಪನ್ನಗಳಿಂದ ಔಷಧಗಳನ್ನು ತಯಾರಿಸುವ ಘಟ ಕವೂ ಸ್ಥಾಪಿತಗೊಂಡಿದೆ. ಹಲ್ಲುಪುಡಿ ಯಿಂದ ಹಿಡಿದು ಹಲವಾರು ರೋಗ ಗಳಿಗೆ ರಾಮಬಾಣವೆನ್ನಿಸುವ ಗೋಜ ನ್ಯ ಔಷಧಿಗಳನ್ನು ಇಲ್ಲಿ ತಯಾರಿಸಲಾ ಗುತ್ತದೆ. ಗೋಸೇವೆಯಲ್ಲಿ ಆಸಕ್ತಿ ಹೊಂದಿರುವ ಅನೇಕ ಕುಟುಂಬಗಳಿಗೆ ಇಲ್ಲಿ ಆಸರೆ ಗೃಹಗಳನ್ನು ನಿರ್ಮಿಸಿ ವೃತ್ತಿ ಕಲ್ಪಿಸಲಾಗಿದೆ.

ಕೆಲವು ಪರಿಣತ ವೈದ್ಯರೂ ಗೋ ಉತ್ಪನ್ನಗಳ ಮಹತ್ವವನ್ನು ಅಧ್ಯಯನ ಮಾಡಲು ಈ ಗೋಶಾಲೆಗೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಗೋವುಗಳಿಗೆ ಜಲಾಸರೆ ಕಲ್ಪಿಸಲು ವಿಶಾಲವಾದ ಕೊಳವೊಂದನ್ನು ನೀಲಾವರದಲ್ಲಿ ನಿರ್ಮಿಸಲಾಗಿದೆ. ಈ ಸರೋವರದ ಮಧ್ಯದಲ್ಲಿ ಗೋಸಂ ರಕ್ಷನಾದ ಗೋಪಾಲಕೃಷ್ಣನನ್ನು ಶ್ರೀಗಳವರು ಪ್ರತಿಷ್ಠಾಪಿಸಿದ್ದಾರೆ. ಇದಕ್ಕೆ ನಿತ್ಯ ಪೂಜೆಯ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ.

ಗೋಪೂಜೆಯ ಮಹತ್ವ: ಗೋಪೂಜೆಯ ಬಗ್ಗೆ ‘ಪ್ರಜಾವಾಣಿ’ ವಿಶ್ವಪ್ರಸನ್ನ ಸ್ವಾಮೀಜಿ ಅವರನ್ನು ಮಾತನಾಡಿಸಿದಾಗ, ‘ಹಿಂದೆ ಗೋಪಾಲಕರು ಕಾಲಕಾಲಕ್ಕೆ ಮಳೆ ಬೆಳೆ ನೀಡುವ ಕಾರಣ ಇಂದ್ರನ ಪೂಜೆ(ಉತ್ಸವ)ಯನ್ನು ಮಾಡುವ ತಯಾರಿಯಲ್ಲಿದ್ದರು. ಆ ಸಮಯ ಭಗವಂತ ಶ್ರೀಕೃಷ್ಣ ಅಲ್ಲಿಗೆ ಆಗಮಿಸಿ ನಾವು ಗೋಪಾಲಕರು.

ನಮ್ಮ ಬದುಕಿನ ಆಧಾರ ಗೋವುಗಳು. ಅವುಗಳ ಹಾಲು, ಬೆಣ್ಣೆ, ಮೊಸರು ಇವುಗಳನ್ನು ಮಾರಿ ಬದುಕನ್ನು ಸಾಗಿಸುತ್ತಾ ಇದ್ದೇವೆ. ಆದ್ದರಿಂದ ಗೋವುಗಳ ಪೂಜೆ (ಉತ್ಸವ) ಮಾಡಲು ಹೇಳಿದ ಪ್ರಯುಕ್ತ ಇಂದ್ರನ ಬದಲು ಗೋವುಗಳ ಉತ್ಸವ ಮಾಡಲು ಗೋಪಾಲಕರು ಆರಂಭಿಸಿದರು. ಗೋವುಗಳ ಆರಾಧನೆ ಭಗವಂತನ ಆರಾಧನೆ.

ಪ್ರತಿದಿನ ಸಾಧ್ಯವಿಲ್ಲದಿದ್ದರೂ ವರ್ಷದಲ್ಲಿ ಒಂದು ದಿನ ಗೋಪೂಜೆಗೆ ಇಟ್ಟ ದಿನವನ್ನು ಅರ್ಥಪೂರ್ಣವಾಗಿ ಮಾಡಬೇಕು. ನಮ್ಮ ಮನೆಯ ಸುತ್ತಮುತ್ತ ಬೆಳೆಯುವ ಹುಲ್ಲನ್ನು ಕಳೆ ಎಂದು ಬಿಸಾಡದೆ ಗೋವುಗಳಿಗೆ ಆಹಾರವನ್ನಾಗಿ ನೀಡುವತ್ತ ಎಲ್ಲರೂ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವತ್ತ ಆಗಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT