ಶಿರಾ ಸಮೀಪ ಹೆದ್ದಾರಿ 4ರಲ್ಲಿ ಘಟನೆ

ಮೊಟ್ಟೆ ತುಂಬಿದ್ದ ಕ್ಯಾಂಟರ್‌ಗೆ ಬಸ್ ಡಿಕ್ಕಿ: ಮೊಟ್ಟೆ ಆಯ್ದುಕೊಳ್ಳಲು ಮುಗಿಬಿದ್ದ ಜನ

ಕ್ಯಾಂಟರ್ ಹೊಸಪೇಟೆಯಿಂದ ಬೆಂಗಳೂರಿಗೆ ಮೊಟ್ಟೆ ಸಾಗಿಸುತ್ತಿತ್ತು. ಬಸ್ ದಾವಣಗೆರೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಅಪಘಾತ ಸಂಭವಿಸಿದ ಬಳಿಕ ಕ್ಯಾಂಟರ್‌ನಿಂದ ಬಿದ್ದು ಸಾಕಷ್ಟು ಮೊಟ್ಟೆ ಹಾಳಾಗಿವೆ. ಮೊಟ್ಟೆಗಳನ್ನು ಸಾರ್ವಜನಿಕರು ಮುಗಿಬಿದ್ದು ಆರಿಸಿಕೊಂಡರು.  

ತುಮಕೂರು: ಶಿರಾ ಸಮೀಪದ ಕಳ್ಳಂಬೆಳ್ಳ ಹತ್ತಿರ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪಂಚರ್‌ ಅಗಿ ನಿಂತಿದ್ದ ಮೊಟ್ಟೆ ತುಂಬಿದ್ದ ಕ್ಯಾಂಟರ್‌ಗೆ ಹಿಂಬದಿಯಿಂದ ಬಂದ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿಹೊಡೆದಿದೆ.

ಕ್ಯಾಂಟರ್‌ನಲ್ಲಿದ್ದ ಅಂದಾಜು ₹ 4 ಲಕ್ಷಕ್ಕೂ ಹೆಚ್ಚು ಮೊತ್ತದ ಮೊಟ್ಟೆ ನಷ್ಟವಾಗಿದೆ.

ಕ್ಯಾಂಟರ್‌ನಿಂದ ಕೆಳಗೆ ಬಿದ್ದು ಸಾಕಷ್ಟು ಮೊಟ್ಟೆ ಹಾಳಾಗಿವೆ. ಇದರಲ್ಲಿಯೆ ಇನ್ನೂ ಚೆನ್ನಾಗಿದ್ದ ಮೊಟ್ಟೆಗಳನ್ನು ಸಾರ್ವಜನಿಕರು ಮುಗಿದ್ದು ಆರಿಸಿಕೊಂಡರು.

ಕ್ಯಾಂಟರ್ ಹೊಸಪೇಟೆಯಿಂದ ಬೆಂಗಳೂರಿಗೆ ಮೊಟ್ಟೆ ಸಾಗಿಸುತ್ತಿತ್ತು. ಬಸ್ ದಾವಣಗೆರೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು ಎಂದು ಕಳ್ಳಂಬೆಳ್ಳ ಠಾಣೆ ಪೊಲೀಸರು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಬಸವರಾಜು ವಿರುದ್ಧ ವಾಗ್ದಾಳಿ

ತುಮಕೂರು
ಬಸವರಾಜು ವಿರುದ್ಧ ವಾಗ್ದಾಳಿ

26 Apr, 2018
ಕನ್ಯಕಾ ಪರಮೇಶ್ವರಿ ಅಮ್ಮನವರ ಉತ್ಸವ

ತುಮಕೂರು
ಕನ್ಯಕಾ ಪರಮೇಶ್ವರಿ ಅಮ್ಮನವರ ಉತ್ಸವ

26 Apr, 2018

ತಿಪಟೂರು
ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ

ಜನಪ್ರತಿನಿಧಿಗಳಾಗಲು ಬಯಸುವವರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಬೇಕು. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ದೃಢ ಭರವಸೆಯನ್ನು ನೀಡಬೇಕು ಎಂದು ರೈತ ಪರ ಸಂಘಟನೆಗಳ ಸಮನ್ವಯ...

26 Apr, 2018
ಮಳೆಗಾಳಿಗೆ ತುರುವೇಕೆರೆ ತತ್ತರ

ತುರುವೇಕೆರೆ
ಮಳೆಗಾಳಿಗೆ ತುರುವೇಕೆರೆ ತತ್ತರ

25 Apr, 2018

ತಿಪಟೂರು
ತಿಪಟೂರು: ಈಗ ತೀವ್ರ ಪೈಪೋಟಿ ಕಣ

ಈ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆ ಎಂದೆಂದೂ ಕಾಣದಷ್ಟು ಪಕ್ಷೇತರರ ಸ್ಪರ್ಧೆ ಕಂಡು ಬರುತ್ತಿದ್ದು, ಅವರೆಷ್ಟು ಮತ ಗಳಿಸುತ್ತಾರೆ ಅಥವಾ ಯಾವ ಅಧಿಕೃತ ಅಭ್ಯರ್ಥಿಗಳ ಕಾಲೆಳೆಯುತ್ತಾರೆ...

25 Apr, 2018