ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾವಂತ ಸಿದ್ದಿಕಿ

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವಾಜುದ್ದೀನ್ ಸಿದ್ದಿಕಿ ಪಾತ್ರಗಳ ಪರಕಾಯ ಮಾಡುವ ನಟ ಎಂದೇ ಹೆಸರುವಾಸಿ. ವಿವಿಧೆಡೆ ಚಲನಚಿತ್ರೋತ್ಸವಗಳಲ್ಲಿ ಎದ್ದುಕಾಣುವ ಹೆಸರು ಅವರದ್ದು.

ಸಿದ್ದಿಕಿ 1974ರಲ್ಲಿ ಉತ್ತರ ಪ್ರದೇಶದ ಮಜಾಫರ್‌ನಗರದ ಬುಧಾನಾದ ರೈತ ಕುಟುಂಬದಲ್ಲಿ ಜನಿಸಿದವರು. ಹರಿದ್ವಾರದಲ್ಲಿ ಬಿ.ಎಸ್‌ಸಿ. ಪದವಿ ಪಡೆದರು. ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ 1996ರಲ್ಲಿ ಪದವಿ ಪಡೆದರು.

199ರಲ್ಲಿ ಅಮೀರ್‌ ಖಾನ್ ಅಭಿನಯದ ‘ಸರ್‌ಫರೋಷ್’ ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ‘ಶೂಲ್’ (1999), ‘ಜಂಗಲ್’ (2000) ಹಾಗೂ ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ‘ಮುನ್ನಾಭಾಯ್ ಎಂಬಿಬಿಎಸ್‌’ (2003) ನಂತರ ಅವರು ಅಭಿನಯಿಸಿದ ಸಿನಿಮಾಗಳು. 2010ರಲ್ಲಿ ತೆರೆಕಂಡ, ಅಮೀರ್‌ ಖಾನ್‌ ನಿರ್ಮಾಣದ ‘ಪೀಪ್ಲಿ ಲೈವ್’ ಸಿನಿಮಾದ ವರದಿಗಾರನ ಪಾತ್ರದ ಮೂಲಕ ಅವರು ಜನಪ್ರಿಯರಾದರು. ವಿಮರ್ಶಕರ ಮೆಚ್ಚುಗೆಯೂ ಆ ಪಾತ್ರಕ್ಕೆ ಸಿಕ್ಕಿತು. 2012ರಲ್ಲಿ ‘ಪತಂಗ್’ ಚಿತ್ರದ ಮೂಲಕ ಅವರು ಪ್ರಮುಖ ಪಾತ್ರಧಾರಿಯಾದರು.

ಬರ್ಲಿನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಆ ಚಿತ್ರಕ್ಕೆ ಪ್ರಶಸ್ತಿಗಳೂ ಸಂದವು. ‘ಕಹಾನಿ’, ‘ಗ್ಯಾಂಗ್ಸ್‌ ಆಫ್‌ ವಸೇಪುರ್’, ‘ಗ್ಯಾಂಗ್ಸ್‌ ಆಫ್‌ ವಸೇಪುರ್‌ ಭಾಗ 2’, ‘ತಲಾಶ್’– ಅವರ ಅಭಿನಯದ ಹಿಟ್‌ ಚಿತ್ರಗಳು. ‘ದಿ ಲಂಚ್‌ಬಾಕ್ಸ್‌’ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ಪೋಷಕ ನಟ ಫಿಲ್ಮ್‌ಫೇರ್ ಪ್ರಶಸ್ತಿಗೆ ಅವರು ಭಾಜನರಾದರು. ಕಲಾತ್ಮಕ ಚಿತ್ರಗಳ ನಟ ಎಂದು ಹೆಸರುವಾಸಿಯಾದರೂ, ಅವರು ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಲೂ ಒಪ್ಪಿಕೊಂಡರು. ‘ಕಿಕ್’, ‘ಮಾಮ್’, ‘ಬಜರಂಗಿ ಭಾಯಿಜಾನ್’, ‘ರಯೀಸ್’ ಅದಕ್ಕೆ ಕೆಲವು ಉದಾಹರಣೆಗಳು.

ಇರ್ಫಾನ್ ಖಾನ್ ಜೊತೆ ‘ಬೈಪಾಸ್’ ‘ದೇಖ್‌ ಇಂಡಿಯನ್ ಸರ್ಕಸ್’ ಹಾಗೂ ನಂದಿಡತಾ ದಾಸ್ ಜೊತೆ ‘ಇನ್‌ ಡಿಫೆನ್ಸ್‌ ಆಫ್ ಫ್ರೀಡಂ’ ಕಿರುಚಿತ್ರಗಳಲ್ಲಿ ಕೂಡ ಸಿದ್ದಿಕಿ ಅಭಿನಯಿಸಿದ್ದಾರೆ. ‘ಲಯನ್’ ಎಂಬ ಆಸ್ಟ್ರೇಲಿಯನ್ ಚಿತ್ರದಲ್ಲಿ ದೇವ್ ಪಟೇಲ್ ಹಾಗೂ ನಿಕೋಲ್ ಕಿಡ್‌ಮನ್ ಜೊತೆ ಅವರು ಅಭಿನಯಿಸಿದ್ದು ಇನ್ನೊಂದು ಗರಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT