ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್ ಫಂಡ್ಸ್‌ ಆಸ್ತಿ ಮೌಲ್ಯ ವೃದ್ಧಿ

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ದೇಶದಲ್ಲಿ ಸಕ್ರಿಯವಾಗಿರುವ 43 ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಒಟ್ಟು ಆಸ್ತಿ ಮೌಲ್ಯ ಸೆಪ್ಟೆಂಬರ್‌ ಅಂತ್ಯಕ್ಕೆ ₹20.40 ಲಕ್ಷ ಕೋಟಿಗಳಿಗೆ ತಲುಪಿದೆ.

2016ರ ಸೆಪ್ಟೆಂಬರ್‌ನಲ್ಲಿ ₹15.8 ಲಕ್ಷ ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ ಆಸ್ತಿ ಮೌಲ್ಯದಲ್ಲಿ ಶೇ 30 ರಷ್ಟು ಏರಿಕೆಯಾಗಿದೆ ಎಂದು ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಫ್‌ಎಫ್‌ಐ) ಮಾಹಿತಿ ನೀಡಿದೆ.

ತಿಂಗಳಿನಿಂದ ತಿಂಗಳಿಗೆ ಅಂದರೆ ಆಗಸ್ಟ್‌ನಲ್ಲಿ ₹20.59 ಲಕ್ಷ ಕೋಟಿಗಳಷ್ಟಿತ್ತು. ಅದು ಸೆಪ್ಟೆಂಬರ್‌ಗೆ ₹20.40 ಲಕ್ಷ ಕೋಟಿಗಳಿಗೆ ಅಲ್ಪ ಇಳಿಕೆ ಕಂಡಿದೆ.

ಸೆಪ್ಟೆಂಬರ್‌ನಲ್ಲಿ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳಿಂದ ₹16,604 ಕೋಟಿಗಳಷ್ಟು ಬಂಡವಾಳ ಹೊರಹೋಗಿದೆ.  ಇದರಿಂದ ಒಟ್ಟಾರೆ ₹50,090 ಕೋಟಿಗಳಷ್ಟು ಬಂಡವಾಳ ಹೊರ ಹೋದಂತಾಗಿದೆ.

ವಿವಿಧ ಮ್ಯೂಚುವಲ್‌ ಫಂಡ್‌ ಯೋಜನೆಗಳಿಗೆ ಸೆಪ್ಟೆಂಬರ್‌ನಲ್ಲಿಯೇ ₹18,936 ಕೋಟಿ ಬಂಡವಾಳ ಹರಿದುಬಂದಿದೆ. ವ್ಯವಸ್ಥಿತಿ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ₹5,516 ಕೋಟಿ ಸಂಗ್ರಹವಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT