ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿದ ಯುವಕನಿಗೆ ಸಿಗ್ನಲ್‌ನಲ್ಲಿ ನಿಲ್ಲುವ ಶಿಕ್ಷೆ

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕರಾಚಿ: ಕರ್ತವ್ಯನಿರತ ಸಂಚಾರ ಪೊಲೀಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿದ ಯುವಕನೊಬ್ಬನಿಗೆ ಪಾಕಿಸ್ತಾನದಲ್ಲಿ ವಿಲಕ್ಷಣವಾದ ಶಿಕ್ಷೆಯೊಂದನ್ನು ವಿಧಿಸ
ಲಾಗಿದೆ. ಮೊಹಮ್ಮದ್‌ಖಾಸೀಂ ಶಿಕ್ಷೆಗೊಳಗಾದ ಯುವಕ.

2015 ರ ಸೆಪ್ಟೆಂಬರ್‌ 27 ರಂದು ಆಗಿನ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರು ಸಾಗುವ ರಸ್ತೆಯ ಸಿಗ್ನಲ್‌ನಲ್ಲಿ ನಿಂತಿದ್ದ ಕಾನ್‌ಸ್ಟೆಬಲ್‌ಗೆ ವೇಗವಾಗಿ ಬೈಕ್‌ನಲ್ಲಿ ಬಂದು ಈತ ಡಿಕ್ಕಿ ಹೊಡೆದಿದ್ದ. ಈ ಘಟನೆ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು.

ಇದೀಗ ಶಿಕ್ಷೆ ಪ್ರಕಟವಾಗಿದ್ದು, ಅದರಂತೆ,  ಎಂ.ಎ.ಜಿನ್ನಾ ರಸ್ತೆಯ ಸಿಗ್ನಲ್‌ನಲ್ಲಿ ರಸ್ತೆ ಸುರಕ್ಷತೆ ಜಾಗೃತಿಯ ಫಲಕವೊಂದನ್ನು ಹಿಡಿದು ಸುಡುವ ಬಿಸಿಲನ್ನೂ ಲೆಕ್ಕಿಸದೆ ಪ್ರತಿ ಶುಕ್ರವಾರ ಎರಡು ಗಂಟೆ ನಿಲ್ಲಬೇಕಾಗಿದೆ. ಈ ಫಲಕದಲ್ಲಿ ‘ವಾಹನ ಸವಾರರೇ ಎಚ್ಚರ. ನಿರ್ಲಕ್ಷ್ಯದಿಂದ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದರೆ ಸಾಯುತ್ತಾರೆ’ ಎಂದು ಬರೆದಿರುತ್ತದೆ. 2018ರ ಅಕ್ಟೋಬರ್‌ 11 ರವರೆಗೆ ಈತನಿಗೆ ಈ ಶಿಕ್ಷೆ ಜಾರಿಯಲ್ಲಿರುತ್ತದೆ. 

‘12 ತಿಂಗಳು ಈ ಶಿಕ್ಷೆ ಅನುಭವಿಸಬೇಕು. ಇಲ್ಲವೇ ಜೈಲಿಗೆ ಹೋಗಬೇಕು ಎಂದು ನ್ಯಾಯಾಧೀಶರು ಹೇಳಿರುವುದಾಗಿ ಖಾಸೀಂ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT