ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜದ ನಿರೀಕ್ಷೆಗೆ ಸ್ಪಂದಿಸಿ’

Last Updated 22 ಅಕ್ಟೋಬರ್ 2017, 4:28 IST
ಅಕ್ಷರ ಗಾತ್ರ

ಬಳ್ಳಾರಿ: ‘ಸಮಾಜದ ನಿರೀಕ್ಷೆಗಳಿಗೆ ಪೊಲೀಸರು ಸ್ಪಂದಿಸಬೇಕು’ ಎಂದು ಐಜಿಪಿ ಎಸ್‌.ಮುರುಗನ್‌ ಸಲಹೆ ನೀಡಿದರು. ನಗರದಲ್ಲಿ ಜಿಲ್ಲಾ ಪರೇಡ್‌ ಮೈದಾನ
ದಲ್ಲಿ ಶನಿವಾರ ನಡೆದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಮಾತ ನಾಡಿದ ಅವರು, ‘ಅಪರಾಧಿಗಳ ಬಂಧನ, ಸಾರ್ವಜನಿಕರ ಆಸ್ತಿ, ಜೀವ ರಕ್ಷಣೆ, ಸಮಾಜಘಾತುಕ ಮತ್ತು ದೇಶ ವಿರೋಧಿ ಶಕ್ತಿಗಳ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಪೊಲೀಸರು ಜೀವವನ್ನು ಪಣವಾಗಿಟ್ಟು ಕೆಲಸ ಮಾಡುತ್ತಾರೆ. ಅಂಥ ಪೊಲೀಸರನ್ನು ಸಮಾಜವೂ ಗೌರವದಿಂದ ನಡೆಸಿಕೊಳ್ಳಬೇಕು’ ಎಂದರು.

’ಜಗತ್ತಿನಲ್ಲಿ ದಿನವೂ ಸಾಹಸಮಯವಾದ, ಅಪಾಯದಿಂದ ಕೂಡಿದ ಕೆಲಸ ಯಾವುದಾದರೂ ಇದ್ದರೆ ಅದು ಪೊಲೀಸರ ಕೆಲಸ. ಕೆಲಸ ಮಾಡುತ್ತಲೇ ಹುತಾತ್ಮರಾಗುವ ಪೊಲೀಸರು ಸಮಾಜದಲ್ಲಿ ದಾರಿದೀಪಗಳಂತೆ’ ಎಂದರು.

‘ಸಮಾಜವನ್ನು ಸದೃಢಗೊಳಿಸುವಲ್ಲಿ ಪೊಲೀಸರ ಕಾರ್ಯನಿರ್ವಹಣೆ ಮಹತ್ವದ್ದು, ಅವರೊಂದಿಗೆ ಸಾರ್ವ ಜನಿಕರೂ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌, ಮೇಯರ್‌ ಜಿ.ವೆಂಕಟ ರಮಣ, ಎನ್‌.ಸಿ.ಸಿ. ಅಧಿಕಾರಿ ಅನಿಲಕುಮಾರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಎಲ್‌. ಝಂಡೇಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT