ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಭಾರಿಗೆ ಭದ್ರತೆ: ಚೀನಾ ಮನವಿ

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಮಾಧ್ಯಮ ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿನ ತನ್ನ ರಾಯಭಾರಿ ಯಾವೊ ಜಿಂಗ್‌ ಅವರಿಗೆ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ ಇರುವ ಕಾರಣ ಅವರಿಗೆ ಹೆಚ್ಚಿನ ಭದ್ರತೆ ಕಲ್ಪಿಸಬೇಕು ಎಂದು ಪಾಕಿಸ್ತಾನ ಸರ್ಕಾರಕ್ಕೆ ಚೀನಾ ಮನವಿ ಮಾಡಿದೆ.

ಈ ಮನವಿ ಕೋರಿ ಚೀನಾ ರಾಯಭಾರಿ ಕಚೇರಿಯು ಪಾಕಿಸ್ತಾನದ ಆಂತರಿಕ ಸಚಿವಾಲಯಕ್ಕೆ  ಇದೇ 19 ರಂದು ಪತ್ರ ಬರೆದಿದೆ. ತನ್ನ ರಾಯಭಾರಿಯನ್ನು ಹತ್ಯೆ ಮಾಡಲು ನಿಷೇಧಿತ ಉಗ್ರ ಸಂಘಟನೆ ‘ಈಸ್ಟ್‌ ಟರ್ಕಿಸ್ತಾನ ಇಸ್ಲಾಮಿಕ್‌ ಮೂವ್‌ಮೆಂಟ್‌’ನ (ಇಟಿಐಎಂ) ಸದಸ್ಯನೊಬ್ಬ ಪಾಕಿಸ್ತಾನ ಪ್ರವೇಶಿಸಿದ್ದಾನೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಯೋಜನೆಗೆ ಪ್ರಮುಖ ಅಧಿಕಾರಿಯಾಗಿ ನಿಯೋಜನೆಯಾಗಿರುವ ಪಿಂಗ್‌ ಯಿಂಗ್‌ ಫಿ ಅವರು ಈ ಪತ್ರ ಬರೆದಿದ್ದು, ‘ರಾಯಭಾರಿ ಹಾಗೂ ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ಚೀನಿಯರ ಹೆಚ್ಚಿನ ಭದ್ರತೆಗೆ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದ್ದಾರೆ.

ಈ ಬೆದರಿಕೆ ಒಡ್ಡಿರುವ ಉಗ್ರನನ್ನು ಅಬ್ದುಲ್‌ ವಾಲಿ ಎಂದು ಪತ್ತೆ ಹಚ್ಚಲಾಗಿದ್ದು, ಆತನ ಪಾಸ್‌ಪೊರ್ಟ್‌ ವಿವರಗಳನ್ನು ಪತ್ರದಲ್ಲಿ ತಿಳಿಸಲಾಗಿದೆ. ಕೂಡಲೇ ಆತನನ್ನು ಬಂಧಿಸಿ, ಚೀನಾದ ರಾಯಭಾರಿ ಕಚೇರಿಯ ವಶಕ್ಕೆ ನೀಡಬೇಕು ಎಂದೂ ಪಿಂಗ್‌ ತಿಳಿಸಿದ್ದಾರೆ.

ಆದರೆ, ಪಾಕಿಸ್ತಾನದ ಆಂತರಿಕ ಸಚಿವಾಲಯ ಹಾಗೂ ಚೀನಾದ ರಾಯಭಾರಿ ಕಚೇರಿ ಈ ಪತ್ರದ ಕುರಿತು ಹೇಳಿಕೆ ನೀಡಲು ನಿರಾಕರಿಸಿವೆ.

ಅಫ್ಗಾನಿಸ್ತಾನಕ್ಕೆ ಚೀನಾದ ರಾಯಭಾರಿಯಾಗಿದ್ದ ಯಾವೊ ಜಿಂಗ್‌ ಅವರನ್ನು ಪಾಕಿಸ್ತಾನದ ರಾಯಭಾರಿಯಾಗಿ ಚೀನಾ ಹೊಸದಾಗಿ ನೇಮಕ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT