ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣಗಳ ರಕ್ಷಣೆಗೆ ಸಾಮಾಜಿಕ ಜಾಲತಾಣ

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ವಿಮಾನ ನಿಲ್ದಾಣಗಳು ಮತ್ತು ಅಣು ಸ್ಥಾವರಗಳ ರಕ್ಷಣೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಹೇಳಿದೆ.

‘ನಮ್ಮ ರಕ್ಷಣೆಯಲ್ಲಿರುವ ಸ್ವತ್ತುಗಳ ಬಗ್ಗೆ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಟ್ರೆಂಡಿಂಗ್ ಆಗುತ್ತಿರುವ ಪೋಸ್ಟ್‌ಗಳನ್ನು ವಿಶ್ಲೇಷಿಸಲಾಗುತ್ತದೆ. ಪೋಸ್ಟ್‌ಗಳು ದ್ವೇಷಮಯವಾಗಿದ್ದರೆ, ಉದ್ರೇಕಿಸುವಂತಿದ್ದರೆ ಅವನ್ನು ಪ್ರಕಟಿಸಿದವರ ಮೇಲೆ ನಿಗಾ ಇರಿಸಲಾಗುತ್ತದೆ. ಇದು ಸಂಭಾವ್ಯ ದಾಳಿಯ ಬಗ್ಗೆ ಸೂಚನೆ ನೀಡುತ್ತದೆ’ ಎಂದು ಸಿಐಎಸ್‌ಎಫ್ ಹೇಳಿದೆ.

‘ಇದಕ್ಕಾಗಿ ದೆಹಲಿಯಲ್ಲಿ ಪ್ರತ್ಯೇಕ ಪ್ರಯೋಗಾಲಯವನ್ನು ಆರಂಭಿಸಲಾಗಿದೆ. ಅದರಲ್ಲಿ ಮನೋವಿಜ್ಞಾನಿಗಳು ಮತ್ತು ದತ್ತಾಂಶ ವಿಶ್ಲೇಷಕರು ಇದ್ದಾರೆ. ಜತೆಗೆ ಪೋಸ್ಟ್‌ಗಳ ವಿಶ್ಲೇಷಣೆಗೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ಸಿಐಎಸ್‌ಎಫ್ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT